ಶೇ.56 ಭಾರತೀಯ ಕುಟುಂಬಗಳಲ್ಲಿ ಜೀರ್ಣಕ್ರಿಯೆಗೆ ಸಂಬಂಧಿತ ಆರೋಗ್ಯ ಸಮಸ್ಯೆಗಳಿವೆ: ಸಮೀಕ್ಷೆ
ನವದೆಹಲಿ:ಭಾರತದ ನಂಬರ್ 1 ಆಟ್ಟಾ ಬ್ರ‍್ಯಾಂಡ್‍ ಆಶೀರ್ವಾದ್‌ ನ ಮೌಲ್ಯವರ್ಧಿತ ಆಟ್ಟಾ ಮಾದರಿ ಆಶೀರ್ವಾದದ ಆಟ್ಟಾ ವಿತ್ ಮಲ್ಟಿಗ್ರೇನ್ಸ್ ಆಗಿದ್ದು, ಇತ್ತೀಚೆಗೆ ಭಾರತೀಯ ಕುಟುಂಬಗಳ “ಜೀರ್ಣಕಾರಿ ಆರೋಗ್ಯದ ಮೇಲೆ ಒಂದು ಸಮೀಕ್ಷೆ ನಡೆಸಿದೆ. ಇದನ್ನು 2021ರ ಮೇ 29ರ ‘ವಿಶ್ವ ಜೀರ್ಣಕಾರಿ ಆರೋಗ್ಯ ದಿನ’ ಆಚರಣೆಗೆ ಪೂರ್ವಭಾವಿಯಾಗಿ ನಡೆಸಲಾಗಿದೆ.
ಭಾರತದ ತಾಯಂದಿರ ಮುಂಚೂಣಿ ಸಾಮಾಜಿಕ ತಾಣ ‘ಮೋಮ್ಸ್ ಪ್ರೆಸ್ಸೊ’ ನಮ್ಮ ಬ್ರ‍್ಯಾಂಡ್‍ಗಾಗಿ ಈ ಅಧ್ಯಯನ ನಡೆಸಿದೆ. ಇದಕ್ಕಾಗಿ ದೆಹಲಿ, ಮುಂಬೈ, ಕೋಲ್ಕತ, ಬೆಂಗಳೂರು, ಹೈದರಾಬಾದ್‍ ಮತ್ತು ಚೆನ್ನೈನ 25-45 ವರ್ಷ ವಯೋಮಾನದ 538 ತಾಯಂದಿರನ್ನು ಸಮೀಕ್ಷೆಗೊಳಪಡಿಸಿದೆ. ಇವರಲ್ಲಿ ವ್ಯಾಪಾರಸ್ಥ ಮಹಿಳೆಯರು, ಉದ್ಯಮಿಗಳು, ಕೆಲಸಕ್ಕೆ ಹೋಗುವ ತಾಯಂದಿರು, ಉದ್ಯೋಗಸ್ಥರು, ಗೃಹಿಣಿಯರು ಕೂಡ ಇದ್ದಾರೆ.
ಬಳಕೆದಾರರ ಜೀವನಶೈಲಿ ಮತ್ತು ಆಹಾರ ಪದ್ಧತಿ ಈ ಸಮೀಕ್ಷೆಯ ಫಲಿತಾಂಶದಲ್ಲಿ ಬಹಿರಂಗವಾಗಿದೆ. ಇದರಂತೆ, ಸಮೀಕ್ಷೆ ಯಲ್ಲಿ ಭಾಗವಹಿಸಿದವರ ಪೈಕಿ ಶೇ 77 ಭಾರತೀಯ ತಾಯಂದಿರು ಜೀರ್ಣಕಾರಿ ಆರೋಗ್ಯ ಅತ್ಯಂತ ಪ್ರಮುಖವಾಗಿ ಪರಿಗಣಿಸ ಬೇಕಾದ್ದು ಎಂದರೆ, ಶೇ 56 ತಾಯಂದಿರು ತಮ್ಮ ಕುಟುಂಬ ಜೀರ್ಣಕಾರಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿ ಕೊಂಡಿದ್ದಾರೆ.
ಶೇ 50ಕ್ಕಿಂತ ಹೆಚ್ಚು ಭಾರತೀಯ ಕುಟುಂಬ 2-3 ಜೀರ್ಣಕಾರಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದು ಅಧ್ಯಯನದ ಮೂಲಕ ಪತ್ತೆಯಾಗಿದೆ. ಗ್ಯಾಸ್‍, ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆಗಳು ಜೀರ್ಣಕಾರಿ ಆರೋಗ್ಯ ಸಮಸ್ಯೆಗಳ ಪೈಕಿ ಟಾಪ್ ಮೂರರಲ್ಲಿವೆ. ಸಮೀಕ್ಷೆಗೊಳಪಟ್ಟ ತಾಯಂದಿರ ಪೈಕಿ ಶೇ.೫೦ ಗೂ ಹೆಚ್ಚು ತಾಯಂದಿರು ಈ ಮೂರರ ಪೈಕಿ ಒಂದನ್ನು ಉಲ್ಲೇಖಿಸಿದ್ದಾರೆ.
ತೂಕ ನಿರ್ವಹಣೆ, ಶಕ್ತಿ ಮಟ್ಟಗಳ ಮೇಲೆ ಜೀರ್ಣಕಾರಿ ಆರೋಗ್ಯ ಪರಿಣಾಮ ಬೀರುತ್ತದೆ ಎಂದು ಶೇ.50 ಗೂ ಹೆಚ್ಚು ತಾಯಂದಿರು ಆಲೋಚಿಸುತ್ತಾರೆ ಮತ್ತು ಉಳಿದವರಲ್ಲಿ ಕರುಳಿನ ಅಸಹಜ ಚಲನೆಯ ಅನುಭವ ವ್ಯಕ್ತವಾಗಿದೆ. ಶೇ.50 ತಾಯಂದಿರು ತಮ್ಮ ಕುಟುಂಭ ಮತ್ತು ತಮ್ಮ ಕರುಳಿನ ಆರೋಗ್ಯವೇ “ಚೆನ್ನಾಗಿಲ್ಲ’ ಎಂದು ಹೇಳಿಕೊಂಡಿದ್ದು, ನಂತರ ಅತ್ತೆ ಮಾವಂದಿರು/ಪಾಲಕರು ಹಾಗೂ ಸ್ವತಃ ಹೆಚ್ಚು ತೊಂದರೆಗೆ ಒಳಗಾಗಿರುವುದಾಗಿ ಬಹಿರಂಗಪಡಿಸಿದ್ದಾರೆ.
ಜೀವನಶೈಲಿ ಮತ್ತು ಆಹಾರದ ಆಯ್ಕೆ ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಾಗಿವೆ. ಅನಿಯತ ವಾಗಿರುವ ನಿದ್ರಾ ಪ್ರವೃತ್ತಿ, ಮಸಾಲೆಯುಕ್ತ, ತೈಲಯುಕ್ತ ಅಥವಾ ಫ್ರೈ ಮಾಡಿದ ಆಹಾರ ಸೇವನೆ, ಕಡಿಮೆ ನೀರು ಕುಡಿಯುವುದು ಮತ್ತು ಶಾರೀರಿಕ ವ್ಯಾಯಾಮ ವಾರದಲ್ಲಿ 1.5 ಸಲ ಮಾತ್ರ ಇರುವಂಥದ್ದನ್ನು ಉಳಿದವರು ತಮ್ಮ ಜೀವನಶೈಲಿಯ ಸಾಮಾನ್ಯ ಭಾಗವಾಗಿ ಉಲ್ಲೇಖ ಮಾಡಿದ್ದಾರೆ. ಶೇ.50 ಗೂ ಹೆಚ್ಚು ತಾಯಂದಿರು ತಮ್ಮ ಮನೆಯಲ್ಲಿ ಜರ‍್ಣಕಾರಿ ಆರೋಗ್ಯ ಸಮಸ್ಯೆ ಎದುರಾ ದಾಗ ಅದನ್ನು ಶಮನ ಮಾಡಲು ನಿತ್ಯದ ಆಹಾರ ಸೇವನೆಯಲ್ಲಿ ಸುಧಾರಣೆ ತರುವುದು ಮತ್ತು ಮನೆಮದ್ದುಗಳನ್ನು ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.
ಗೋಧಿ ಆಧಾರಿತ ಉತ್ಪನ್ನ, ಸಿರಿಧಾನ್ಯ, ಹಣ್ಣುಗಳು, ಸೊಪ್ಪು ತರಕಾರಿ ಮುಂತಾದ ನಾರಿನಂಶ ಹೆಚ್ಚು ಇರುವಂತಹ ಆಹಾರ ಬಳಸುವುದು ಜೀರ್ಣಕ್ರಿಯೆಗೆ ಪ್ರಯೋಜನಕಾರಿ ಮತ್ತು ಇದು ಕರುಳಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಶಕ್ತಿಯನ್ನೂ ಒದಗಿಸುವುದಲ್ಲದೆ ಅತ್ಯಧಿಕ ಪ್ರಜ್ಞೆಯನ್ನು ಉತ್ತೇಜಿಸಿ, ತೂಕ ನಿರ್ವಹಣೆಯನ್ನು ಸಾಧ್ಯವಾಗಿಸುತ್ತದೆ.
