ಥಾಣೆ: ಸ್ಲಾಬ್ ಕುಸಿದು ಏಳು ಮಂದಿ ಸಾವು
ಥಾಣೆ:ಕಟ್ಟಡಕ್ಕೆ ಅಳವಡಿಸಲಾಗಿದ್ದ ಸ್ಲಾಬ್ ಕುಸಿದು ಬಿದ್ದು ಏಳು ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‍ ನಗರದಲ್ಲಿ ಘಟನೆ ಸಂಭವಿಸಿದೆ.
ಅಮೃತ ಹಿಂದುಚಂದ್ ಬಜಾಜ್, ಲವ್ಲಿ ಬಜಾಜ್, ಕೃಷ್ಣ ಹಿಂದುಚಂದ್ ಬಜಾಜ್, ಮೋಹಿನಿ ಬಜೋಮಲ್ ಪಂಜ್ವಾನಿ, ದೀಪಕ್ ಬಜೋಮಲ್ ಪಂಜ್ವಾನಿ, ದಿನೇಶ್, ಪುನಿತ್ ಅವಘಡದಲ್ಲಿ ಮೃತಪಟ್ಟ ದುರ್ದೈವಿಗಳು.
ನೆಹರು ಚೌಕಾದಲ್ಲಿರುವ ಐದಂತಸ್ತಿನ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಐದು ಸ್ಲಾಬ್‍ಗಳು ಶುಕ್ರವಾರ ರಾತ್ರಿ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಮೂವರು ಮಹಿಳೆಯರು, ಒಬ್ಬ ಯುವಕ ಸೇರಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಗಳ ಪರಿಹಾರ ಧನ ನೀಡುವುದಾಗಿ ಮಹಾರಾಷ್ಟ್ರ ಸಚಿವ ಏಕಾಂತ ಶಿಂಧೆ ಘೋಷಿಸಿದ್ದಾರೆ.