ಹವಾಯಿಯಿಂದ ಭಾರತದಲ್ಲಿ ಅತ್ಯಾಧುನಿಕ  ಬ್ಯಾಂಡ್ 6 ಬಿಡುಗಡೆ
ನವದೆಹಲಿ:ನವದೆಹಲಿ- ಹವಾಯ್ ಕನ್ಸ್ಯೂಮರ್ ಬ್ಯುಸಿನೆಸ್ ಗ್ರೂಪ್ ಇಂದು ತನ್ನ  ಬ್ಯಾಂಡ್ ಸರಣಿಯ ನೂತನ ಸದಸ್ಯರಾದHUAWEIಬ್ಯಾಂಡ್ 6ಅನ್ನು ಪ್ರಕಟಿಸಿದೆ. ಗ್ರಾಹಕರು ತಮ್ಮ ಧರಿಸಬಹುದಾದ ಸಾಧನಗಳಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿರುವುದನ್ನು ಮನಗೊಂಡು, ಹೊಸ ಹವಾಯ್ ಬ್ಯಾಂಡ್ ೬ ಇದು ಆರೋಗ್ಯ ಮತ್ತು ಫಿಟ್‌ನೆಸ್ ಪರಿವೀಕ್ಷಣೆ, ವಿನ್ಯಾಸ ಮತ್ತು ಬ್ಯಾಟರಿ ಕಾಲಾವಧಿಯ ದೃಷ್ಟಿಯಿಂದ ಸ್ಮರ‍್ಟ್ ಬ್ಯಾಂಡ್‌ನ ಕೈಗೆಟಕುವ ಬೆಲೆಯಲ್ಲಿ ಸ್ಮರ‍್ಟ್ ವಾಚ್ ತರಹದ ಅನುಭವವನ್ನು ಒದಗಿಸುತ್ತದೆ.
ಪರ‍್ತಿ ದಿನದ SpO2 ಪರಿವೀಕ್ಷಣೆ:ಆರೋಗ್ಯ ಪರಿವೀಕ್ಷಣೆಯ ವೈಶಿಷ್ಟ್ಯಗಳು ಸ್ಮರ‍್ಟ್ ಬ್ಯಾಂಡ್ ಬಳಕೆದಾರರಿಗೆ ಅತ್ಯಂತ ಜನಪ್ರಿಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಹವಾಯ್ TruSeenTM4.0 ಮತ್ತು ಹೊಸ ಸ್ಮರ‍್ಟ್ ಪವರ್-ಸೇವಿಂಗ್ ಅಲ್ಗಾರಿದಮ್ ಅನ್ನು ಆಧರಿಸಿದ ಹರ‍್ಡ್‌ವೇರ್ ಮಾಡ್ಯೂಲ್‌ಗಳಿಗೆ ಧನ್ಯವಾದಗಳು, ಹವಾಯ್ ಬ್ಯಾಂಡ್ ೬ ಈಗ ಪರ‍್ತಿ ದಿನದ SpO2 ಪರಿವೀಕ್ಷಣೆಯನ್ನು ಬೆಂಬಲಿಸುತ್ತದೆ. ಇದು ಬಳಕೆದಾರರ ಆರೋಗ್ಯವನ್ನು ಪರಿವೀಕ್ಷಣೆ ಮಾಡುತ್ತದೆ ಮತ್ತು ರಕ್ತದ ಆಮ್ಲಜನಕದ ಮಟ್ಟವು ಕಡಿಮೆಯಾದಾಗ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಮೂಲಕ ತ್ವರಿತ ಕ್ರಮ ತೆಗೆದುಕೊಳ್ಳಲು ಮತ್ತು ಅವರ ಆರೋಗ್ಯದ ಬಗ್ಗೆ ಹೆಚ್ಚು ಮುಂಜಾಗ್ರತೆಯಾಗಿ೨ ಕಾಳಜಿವಹಿಸಲು ಸಹಾಯ ಮಾಡುತ್ತದೆ. ಅಲ್ಲದೇ  ಬ್ಯಾಂಡ್ ೬ ಇದು ನಿರಂತರ, ವಾಸ್ತವಿಕ ಮತ್ತು ನಿಖರವಾದ ಹೃದಯ ಬಡಿತ, ನಿದ್ರೆ ಮತ್ತು ಒತ್ತಡದ ಪರಿವೀಕ್ಷಣೆಯನ್ನು ಸಹ ಒದಗಿಸುತ್ತದೆ. ವಿಶ್ರಾಂತ ಹೃದಯ ಬಡಿತ ತುಂಬಾ ಹೆಚ್ಚಿದ್ದರೆ ಅಥವಾ ತುಂಬಾ ಕಡಿಮೆಯಾಗಿ ದ್ದರೆ ಅದು ಬಳಕೆದಾರರನ್ನು ಎಚ್ಚರಿಸುತ್ತದೆ.
 ಬ್ಯಾಂಡ್ ೬ ಇದು ೧.೪೭-ಇಂಚಿನ, ೬೪ ಪ್ರತಿಶತ ಸ್ಕ್ರೀನ್ ಟು ಬಾಡಿ ಅನುಪಾತದೊಂದಿಗೆ  ಪರ‍್ಣ-ವೀಕ್ಷಣಾ ಡಿಸ್ಪ್ಲೇ ಅನ್ನು ಹೊಂದಿರುವ ಹವಾಯಿಯ ಮೊದಲ ಸ್ಮರ‍್ಟ್ ಬ್ಯಾಂಡ್ ಆಗಿದೆ. ಅಂದರೆ ಇದು ಸ್ಟೈಲಿಶ್ ನೋಟವನ್ನು ಉಳಿಸಿಕೊಂಡೇ ಹೆಚ್ಚಿನ ಮಾಹಿತಿಯನ್ನು ಪ್ರರ‍್ಶಿಸುತ್ತದೆ. ಹವಾಯ್ ಬ್ಯಾಂಡ್ ೬ ಇದು ೧.೪೭-ಇಂಚಿನ  ಪರ‍್ಣ ವೀಕ್ಷಣಾ ಡಿಸ್ಪ್ಲೇಯೊಂದಿಗೆ ಸ್ಪಷ್ಟ ತೋರಿಕೆಗಾಗಿ ೧೯೪ * ೩೬೮ ರೆಸಲ್ಯೂಶನ್ ಮತ್ತು 282PPI ಯನ್ನು ಹೊಂದಿದೆ. ರ‍್ಣರಂಜಿತ ಪರದೆಯ ಡಿಸ್ಪ್ಲೇಯು ಬಳಕೆದಾರರಿಗೆ ಹೆಚ್ಚಿನ ಮಾಹಿತಿಯ ಸ್ಪಷ್ಟತೆಯನ್ನು ಒದಗಿಸುತ್ತದೆ ಮತ್ತು ಹೆಚ್ಚು ಬಳಕೆದಾರ ಸ್ನೇಹಿ ಡಿಸ್ಪ್ಲೇ ಅನುಪಾತದಲ್ಲಿ ವ್ಯಾಯಾಮ ಮತ್ತು ಆರೋಗ್ಯದ ಡೇಟಾವನ್ನು ನೀಡುತ್ತದೆ. ಸ್ಮರ‍್ಟ್‌ಫೋನ್ ಟಚ್‌ಸ್ಕ್ರೀನ್ ಬಳಸುವಂತೆಯೇ ಬಳಕೆದಾರರು ಸುಲಭವಾಗಿ ಮೇಲಕ್ಕೆ ಮತ್ತು ಕೆಳಕ್ಕೆ, ಎಡ ಮತ್ತು ಬಲಕ್ಕೆ ಸ್ವೈಪ್ ಮಾಡಬಹುದು.
ಹೆಚ್ಚಿನ-ದಕ್ಷತೆಯ ಚಿಪ್‌ಸೆಟ್ ಮತ್ತು ಸ್ಮರ‍್ಟ್ ಪವರ್-ಸೇವಿಂಗ್ ಅಲ್ಗೋರಿದಮ್ ಬೆಂಬಲಿತವಾಗಿರುವ  ಬ್ಯಾಂಡ್ ೬ ನಿರಂತರ ಹೃದಯ ಬಡಿತ ಮತ್ತು ಪರಿಪರ‍್ಣ ನಿದ್ರೆಯ ಪರಿವೀಕ್ಷಣೆಯನ್ನು ೧೪ ದಿನಗಳ ಬ್ಯಾಟರಿ ಕಾಲಾವಧಿಯೊಂದಿಗೆ ತಡೆರಹಿತವಾಗಿ ಮಾಡಲು ಶಕ್ತವಾಗಿದೆ. ಇದಲ್ಲದೇ, ಹವಾಯ್ ಬ್ಯಾಂಡ್ ೬ ಇದು ಮ್ಯಾಗ್ನೆಟಿಕ್ ಚರ‍್ಜರ್ ಮೂಲಕ ವೇಗವಾಗಿ ಚರ‍್ಜಿಂಗ್ ಅನ್ನು ಹೊಂದುತ್ತದೆ. ಐದು ನಿಮಿಷಗಳಷ್ಟು ಕಾಲ ಚರ‍್ಜ್ ಮಾಡಲಾದ ಸ್ಮರ‍್ಟ್ ಬ್ಯಾಂಡ್ ಎರಡು ದಿನಗಳವರೆಗೆ ಕರ‍್ಯ ನರ‍್ವಹಿಸುವಂತೆ ತನ್ನ ಚರ‍್ಜ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಕೇವಲ ೧೮ ಗ್ರಾಂ ತೂಕವನ್ನು ಹೊಂದಿರುವ  ಬ್ಯಾಂಡ್ ೬ ಗಮನರ‍್ಹವಾದ ಕಿಟ್ ಆಗಿದೆ.
 ಬ್ಯಾಂಡ್ ೬ ರ ಫಿಟ್‌ನೆಸ್ ವೈಶಿಷ್ಟ್ಯಗಳು ಸಹ ಬಳಕೆದಾರರಿಗೆ ಸಂಪರ‍್ಣ ಹೊಸ ಅನುಭವವನ್ನು ತರುತ್ತವೆ. 96 ವರ್ಕ್ಔಟ್ ಮೋಡ್‌ಗಳಲ್ಲಿ ಒಳಾಂಗಣ ಮತ್ತು ಹೊರಾಂಗಣ ಓಟ, ಸೈಕ್ಲಿಂಗ್ ಮತ್ತು ಸ್ಕಿಪ್ಪಿಂಗ್‌ನಂತಹ ೧೧ ವೃತ್ತಿಪರ ವ್ಯಾಯಾಮದ ವಿಧಗಳು ಮತ್ತು ಫಿಟ್‌ನೆಸ್, ಚೆಂಡಿನ ಆಟಗಳು ಮತ್ತು ನೃತ್ಯ ಪ್ರಕಾರಗಳು ಸೇರಿದಂತೆ ೮೫ ಕ್ಕೂ ಹೆಚ್ಚು ಕಸ್ಟಮೈಸ್ ಮಾಡಲಾದ ವಿಧಗಳು ಸೇರಿವೆ, ಇದು ವ್ಯಾಯಾಮ ಅಭ್ಯಾಸದ ವ್ಯಾಪಕ ವ್ಯಾಪ್ತಿಯನ್ನು ನೀಡುತ್ತದೆ. ಹೃದಯ ಬಡಿತದ ವ್ಯತ್ಯಾಸ ದತ್ತಾಂಶ ಮತ್ತು ವ್ಯಾಯಾಮ ದತ್ತಾಂಶದಂತಹ ಬಹು ಆಯಾಮದ ನಿಯತಾಂಕಗಳ ಆಧಾರದ ಮೇಲೆ ಬಳಕೆದಾರರ ವ್ಯಾಯಾಮ ಸಾರ‍್ಥ್ಯಗಳನ್ನು ಆಳವಾಗಿ ವಿಶ್ಲೇಷಿಸಲು ಹವಾಯ್-ಅಭಿವೃದ್ಧಿ ಹೊಂದಿದHUAWEI TruSportTMವೃತ್ತಿಪರ ವ್ಯಾಯಾಮ ಅಲ್ಗಾರಿದಮ್ ಅನ್ನು  ಬ್ಯಾಂಡ್ ೬ ಅಳವಡಿಸಿಕೊಂಡಿದೆ, ವೈಜ್ಞಾನಿಕ ಮೌಲ್ಯಮಾಪನ ಮತ್ತು ಅವರ ವ್ಯಾಯಾಮ ಸಾರ‍್ಥ್ಯಗಳ ಕುರಿತು ಸಲಹೆಗಳನ್ನು ನೀಡುತ್ತದೆ.