ಮೊಟ್ಟಮೊದಲ ಬ್ರ‍್ಯಾಂಡ್ ರಾಯಭಾರಿಯನ್ನಾಗಿ ಅಲಿಯ ಭಟ್ ನೇಮಕ ಮಾಡಿದ ಡ್ಯೂರೋಫ್ಲೆಕ್ಸ್
ನವದೆಹಲಿ:ಭಾರತದ ಮುಂಚೂಣಿ ನಿದ್ರಾ ಪರಿಹಾರಗಳ ಸರಬರಾಜುದಾರ ಸಂಸ್ಥೆಯಾದ ಡ್ಯೂರೋಫ್ಲೆಕ್ಸ್, ಯುವಜನತೆಯ ಹೃನ್ಮನ ಗೆದ್ದಿರುವ ನಟಿ ಅಲಿಯ ಭಟ್ ಅವರನ್ನು ತನ್ನ ಮೊಟ್ಟಮೊದಲ ಬ್ರ‍್ಯಾಂಡ್ ರಾಯಭಾರಿಯನ್ನಾಗಿ ಘೋಷಿಸಿದೆ. ೫೦ ವರ್ಷಗಳ ನೈಪುಣ್ಯತೆ ಹೊಂದಿರುವ ಈ ವಿಶ್ವಸನೀಯ ನಿದ್ರಾ ಪರಿಹಾರ ಸಂಸ್ಥೆಯು, ಭಾರತವು ಇನ್ನಷ್ಟು ಉತ್ತಮವಾಗಿ ನಿದ್ರಿಸುವುದಕ್ಕೆ ಪ್ರೇರಣೆ ಒದಗಿಸಲು ಆಕೆಯೊಡನೆ ತನ್ನ ಮುಂದಿನ ದೊಡ್ಡ ಪ್ರಚಾರಾಂದೋಲನವನ್ನುಪ್ರಾರಂಭಿಸಲು ಸಜ್ಜಾಗಿದೆ.
ಒಬ್ಬ ನಟಿಯಾಗಿ ತನ್ನ ವೈವಿಧ್ಯತೆಗೆ ಹೆಸರುವಾಸಿಯಾಗಿರುವ ಅಲಿಯ ಭಟ್, ಪ್ರಶಸ್ತಿ ವಿಜೇತ ನಟನೆ, ಮತ್ತು ಅತ್ಯುತ್ಕೃಷ್ಟತೆಯೆಡೆಗಿರುವ ಬದ್ಧತೆಗೂ ಹೆಸರು ವಾಸಿಯಾಗಿದ್ದಾರೆ. ಸತತವಾಗಿ ಮಿತಿಗಳನ್ನು ವಿಸ್ತರಿಸಿಕೊಂಡು ಹೊಸ ಎತ್ತರಗಳನ್ನು ಏರುತ್ತಿರುವ ಸಂದರ್ಭದಲ್ಲೇ ಅವರು ವೃತ್ತಿಪರ ಸಾಧನೆಗಳು ಹಾಗು ವೈಯಕ್ತಿಕ ಸ್ವಾಸ್ಥ್ಯದ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿದ್ದಾರೆ. ವಿಶ್ರಾಂತಿಪೂರ್ಣ ನಿದ್ರೆಯೇ ತನ್ನ ಆರೋಗ್ಯಕರ ಜೀವನ ಶೈಲಿಯ ಆಧಾರವೆಂದು ಪರಿಗಣಿಸುವ ಆಕೆ, ನಿದ್ರೆಗೆ ತನಗಿರುವ ಪ್ರೀತಿಯನ್ನು ಪ್ರದರ್ಶಿಸಲು ಸಾಮಾಜಿಕ ವೇದಿಕೆಗಳನ್ನು ಬಹಳವಾಗಿ ಬಳಸಿಕೊಳ್ಳುತ್ತಾರೆ. ನಿದ್ರಾ ಬೋಧನೆಗೆ ಅಲಿಯಾ ಅವರಿಗಿರುವ ಬಲವಾದ ಬದ್ಧತೆಯು ಆಕೆಯನ್ನು ಡ್ಯೂರೋಫ್ಲೆಕ್ಸ್ಗೆ ಅತ್ಯಂತ ಸೂಕ್ತವಾದ ರಾಯಭಾರಿಯನ್ನಾಗಿ ಮಾಡುತ್ತದೆ.
ಈ ಸಹಯೋಗದ ಬಗ್ಗೆ ಮಾತನಾಡುತ್ತಾ, ಡ್ಯೂರೋಫ್ಲೆಕ್ಸ್ನ ಸಿಎಮ್‌ಒ ಸ್ಮಿತ ಮುರಾರ್ಕ: “ಆನಿದ್ರಾ ಪರಿಹಾರ ವರ್ಗದಲ್ಲಿ ಸದಾ ಆಲೋಚನಾ ಮುಂದಾಳು ವಾಗಿರುವ ಡ್ಯೂರೋಫ್ಲೆಕ್ಸ್ ಈಗ ಭಾರತವು ಇನ್ನಷ್ಟು ಉತ್ತಮ ವಾಗಿ ನಿದ್ರಿಸುವಂತೆ ಮಾಡುವ ಗುರಿಯಿರಿಸಿಕೊಂಡಿದೆ. ನವಯುಗದ ಗ್ರಾಹಕರೊಡನೆ ಪ್ರತಿಧ್ವನಿಸಬಲ್ಲ ಒಂದು ನೈಜ ಧ್ವನಿಯೊಂದಿಗೆ ನಾವು ಸಹಯೋಗ ಏರ್ಪಡಿಸಿಕೊಳ್ಳಬೇಕೆಂದಿದ್ದೆವು. ನಿರ್ಭಯದಿಂದ ತನ್ನ ಸ್ವಂತಿಕೆ ಯನ್ನು ಮೆರೆಸುವ ಮೂಲಕ ತನಗಾಗಿ ಒಂದು ಸ್ಥಾನ ಗಿಟ್ಟಿಸಿಕೊಂಡಿರುವ ಅಲಿಯ ಭಟ್, ಯುವಜನತೆಯ ಚಿತ್ರಣವಾಗಿದ್ದಾರೆ. ನಿದ್ರೆಯು, ಆರೋಗ್ಯಕರ ಜೀವನ ಶೈಲಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಅವರು ಪ್ರತಿಪಾದಿಸುತ್ತಾರೆ. ಅವರ ಮೂಲಕ, ನಿದ್ರಾಬೋಧನೆಯೆಡೆಗೆ ನಮಗಿರುವ ಬದ್ಧತೆಯನ್ನು ಹಂಚಿಕೊಳ್ಳಲು ಇಡೀ ದೇಶವನ್ನು ತಲುಪಬೇಕೆಂದೆದ್ದೇವೆ.” ಎಂದರು.
ಇಂದಿನ ಒತ್ತಡಭರಿತ ಪರಿಸರದಲ್ಲಿ, ನಿದ್ರೆಯೊಡನೆ ರಾಜಿ ಮಾಡಿಕೊಳ್ಳಲಾಗುತ್ತಿದ್ದು, ಒಂದು ಬ್ರಾ÷್ಯಂಡ್ ಆಗಿ, ಭಾರತವು ಇನ್ನಷ್ಟು ಉತ್ತಮವಾಗಿ ನಿದ್ರಿಸುವು ದಕ್ಕೆ ನೆರವಾಗುವಂತಹ ಮ್ಯಾಟ್ರೆಸ್‌ಗಳಂತಹ ಅತ್ಯಗತ್ಯ ಉತ್ಪನ್ನಗಳಲ್ಲಿನ ಆಯ್ಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡಬೇಕೆಂದಿದೆ. ಬ್ರ‍್ಯಾಂಡ್, ಸಂಶೋಧನೆ ಆಧಾರಿತವಾದ ಮತ್ತು ತಾಂತ್ರಿಕವಾಗಿ ಅತ್ಯಾಧುನಿಕವಾಗಿರುವ ಮ್ಯಾಟ್ರೆಸ್‌ಗಳು ಹಾಗು ನಿದ್ರಾಸಹಸಾಧನಗಳನ್ನು ತಯಾರಿಸುತ್ತದೆ.
ತನ್ನ ಸಾಮಾಜಿಕ ವಾಹಿನಿಗಳಾದ ಮೂಲಕ ನಿದ್ರೆಯ ಕುರಿತು ನಿರಂತರವಾಗಿ ಬೋಧಿಸುವ ಡ್ಯೂರೋಫ್ಲೆಕ್ಸ್, ನಿದ್ರೆಯ ಅದ್ಭುತಶಕ್ತಿಯಲ್ಲಿ ನಂಬಿಕೆ ಇರಿಸಿರುವ ವಿಶ್ವಸನೀಯ ಸೃಷ್ಟಿಕರ್ತರೊಂದಿಗೆ ಸಹಯೋಗ ಏರ್ಪಡಿಸಿಕೊಳ್ಳುತ್ತದೆ.
ಡ್ಯೂರೋಫ್ಲೆಕ್ಸ್ದೊಂದಿಗೆ ತಮ್ಮ ಸಹಯೋಗದ ಬಗ್ಗೆ ಮಾತನಾಡುತ್ತಾ, ಅಲಿಯ ಭಟ್: “ಒಬ್ಬ ನಟಿಯಾಗಿ, ಶೀಘ್ರ ಕರೆಗಳಿಗೆ ಪ್ರತಿಕ್ರಿಯಿಸುವುದು ಹಾಗು ಚುರುಕಾದ ಶೆಡ್ಯೂಲ್‌ಗಳು ನಮ್ಮ ಜೀವನದ ವಿಧಾನವಾಗಿರುತ್ತದೆ. ನನ್ನ ಉತ್ಪಾದಕತೆಯನ್ನು ವರ್ಧಿಸಲು ನಿದ್ರೆಯೇ ನನ್ನ ಅದ್ಭುತ ಶಕ್ತಿ ಹಾಗು ಯಶಸ್ಸಿಗೆ ಅತಿ ಮುಖ್ಯವಾದುದು ಎಂಬುದನ್ನು ನಾನು ಕಲಿತುಕೊಂಡಿದ್ದೇನೆ. ನನ್ನ ನಿದ್ರೆಯೊಡನೆ ಎಂದಿಗೂ ರಾಜಿಮಾಡಿಕೊಳ್ಳದಿರುವುದನ್ನು ನಾನು ಖಾತರಿಪಡಿಸಿಕೊಳ್ಳುತ್ತೇನೆ. ನಿದ್ರೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮ್ಯಾಟ್ರೆಸ್‌ಗಳಂತಹ ನಿದ್ರಾ ಅತ್ಯಗತ್ಯ ಸಾಧನಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲೇ ಮಾಹಿತಿಯುಕ್ತ ಆಯ್ಕೆಗಳನ್ನು ಮಾಡುವುದಕ್ಕೆ ಭಾರತಕ್ಕೆ ನೆರವಾಗಲು ಡ್ಯೂರೋಫ್ಲೆಕ್ಸ್ನಂತಹ ಶಕ್ತಿಶಾಲಿ ಬ್ರ‍್ಯಾಂಡ್’ನೊಂದಿಗೆ ಸಹಯೋಗ ವೇರ್ಪಡಿಸಿಕೊಳ್ಳು ತ್ತಿರುವುದಕ್ಕೆ ನನಗೆ ಅತ್ಯಂತ ಹರ್ಷವಾಗುತ್ತಿದೆ.” ಎಂದರು.
ಡ್ಯೂರೋಫ್ಲೆಕ್ಸ್ ಕುರಿತು
ಡ್ಯೂರೋಫ್ಲೆಕ್ಸ್, ಭಾರತದ ಮುಂಚೂಣಿ ನಿದ್ರಾಪರಿಹಾರ ಒದಗಿಸುವ ಸಂಸ್ಥೆಗಳ ಪೈಕಿ ಒಂದಾಗಿದ್ದು, ವ್ಯಾಪಕ ಶ್ರೇಣಿಯ ಪ್ರೀಮಿಯಮ್ ಮ್ಯಾಟ್ರೆಸ್‌ಗಳು ಹಾಗು ನಿದ್ರಾ ಸಹಸಾಧನಗಳನ್ನು ತಯಾರಿಸುತ್ತದೆ. ಐದು ದಶಕಕ್ಕಿಂತ ಹೆಚ್ಚಿನ ವರ್ಷಗಳ ನೈಪುಣ್ಯತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಈ ಕ್ರಾಂತಿಕಾರಿ ಬ್ರಾ÷್ಯಂಡ್, ಗುಣಮಟ್ಟದ ನಿದ್ರೆಯ ಅರ್ಥವನ್ನು ಮರುವಿವರಿಸುತ್ತಿದೆ.
ಭಾರತದಲ್ಲಿ ತನ್ನ ವಿಧದಲ್ಲೇ ಪ್ರಪ್ರಥಮವಾದ ಉತ್ಪನ್ನಗಳ ವಿನೂತನ ಹಾಗು ಅತ್ಯಾಧುನಿಕ ಶ್ರೇಣಿಯೊಂದಿಗೆ ಡ್ಯೂರೋಫ್ಲೆಕ್ಸ್, ಉದ್ಯಮದಲ್ಲಿ ತನ್ನನ್ನು ಒಂದು ಮುಂದಾಳು ಸಂಸ್ಥೆಯನ್ನಾಗಿ ಸ್ಥಾಪಿಸಿಕೊಂಡಿದೆ. ಅದರ ಸಿಗ್ನೇಚರ್ ಶ್ರೇಣಿ-ಡ್ಯೂರೋಪೀಡಿಕ್, ವೈದ್ಯರು ಶಿಫಾರಸು ಮಾಡುವ ಆರ್ತೋಪೆಡಿಕ್ ಮ್ಯಾಟ್ರೆಸ್ ಶ್ರೇಣಿಯಾಗಿದೆ. ಬ್ರ‍್ಯಾಂಡ್ ಇಂದು, ಅದರ ಉತ್ಪನ್ನ ಪೋರ್ಟ್ಫೋಲಿಯೋ, ಗುಣಮಟ್ಟ, ಆವಿಷ್ಕಾರ, ಮತ್ತು ಆರಾಮಕ್ಕೆ ಹೆಸರುವಾಸಿಯಾಗಿದೆ. ಪ್ರಬಲವಾದ ತಾಂತ್ರಿಕ ಜ್ಞಾನ, ಆಧುನಿಕ ಸಾಧನ ಮತ್ತು ಭವಿಷ್ಯತ್ತಿನ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯದ ಬೆಂಬಲ ಹೊಂದಿದೆ.
ಡ್ಯೂರೋಫ್ಲೆಕ್ಸ್ ಉತ್ಪನ್ನಗಳು, ಭಾರತದಾದ್ಯಂತ ಆನ್‌ಲೈನ್‌ನಲ್ಲಿ ಖರೀದಿಸುವಕ್ಕೆ ತಿತಿತಿ.ಜuಡಿoಜಿಟexತಿoಡಿಟಜ.ಛಿ ದಲ್ಲಿ ಅಥವಾ ಅದರ ೫೦೦೦+ ರೀಟೇಲ್ ಮಳಿಗೆಗಳ ಮೂಲಕ ಲಭ್ಯವಿವೆ. ಈ ಬ್ರ‍್ಯಾಂಡ್, ರೂ.೫೩೩೬/-ರಿಂದ ಆರಂಭವಾಗುವ ಪ್ರೀಮಿಯಮ್ ಮ್ಯಾಟ್ರೆಸ್‌ಗಳನ್ನು ಮಾರಾಟ ಮಾಡುತ್ತದೆ.