 : ಮುಂಬಯಿಯ ಲಾಲ್‌ಬಾಗ್ಚಾ ಗಣಪತಿಗೆ ₹15 ಕೋಟಿ ಬೆಲೆಯ ಚಿನ್ನದ ಕಿರೀಟ ಅರ್ಪಣೆ; ಕೊಟ್ಟವರು ಯಾರು?
ಮುಂಬಯಿ: ಮುಂಬಯಿಯಲ್ಲಿ ನಡೆಯುವ ಗಣೇಶೋತ್ಸವಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದ್ದು ( ) ಲಾಲ್‌ಬಾಗ್ಚಾ ರಾಜಾ ಗಣಪ (  ). ಅತ್ಯಂತ ಶ್ರೀಮಂತ ಗಣಪತಿಗಳಲ್ಲಿ ಒಂದಾದ ಈತ ಪ್ರಪಂಚದಾದ್ಯಂತದಿಂದ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಾನೆ. ಈ ವರ್ಷ ಕೊಡುಗೈ ದಾನಿಯೊಬ್ಬರು ಈ ಗಣಪತಿಗೆ ಸುಮಾರು 15 ಕೋಟಿ ರೂಪಾಯಿಯ ಚಿನ್ನದ ಕಿರೀಟವನ್ನು ( )  ದಾನವಾಗಿ ನೀಡಿದ್ದಾರೆ!
ಯಾರಿವರು ಅಂತ ಆಶ್ಚರ್ಯವೇ? ಬೇರ್ಯಾರೂ ಅಲ್ಲ, ಇತ್ತೀಚೆಗೆ ವಿವಾಹವಾದ ಉದ್ಯಮಿ, ಬಿಲಿಯನೇರ್ ಅನಂತ್‌ ಅಂಬಾನಿ ( ). ಇವರು ಅರ್ಪಿಸಿದ ಚಿನ್ನದ ಕಿರೀಟ 20 ಕಿಲೋ ತೂಕದ್ದು. ಇದರ ಬೆಲೆ 15 ಕೋಟಿ ರೂಪಾಯಿ.
ಮುಂಬೈನ ಲಾಲ್‌ಬಾಗ್ಚಾದಲ್ಲಿ ಈ ಬಾರಿ ಬರೋಬ್ಬರಿ 12 ಅಡಿ ಎತ್ತರದ ಭವ್ಯ ಗಣೇಶನ ಮೂರ್ತಿಯನ್ನು ಇರಿಸಲಾಗಿದೆ. ಮೆರೂನ್ ವಸ್ತ್ರ ಧರಿಸಿದ ಗಣಪನನ್ನು ಭಕ್ತಾಧಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ವಿಗ್ರಹ ಹಲವಾರು ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ಅಲಂಕರಿಸಲ್ಪಟ್ಟಿದೆ. ಅದರಲ್ಲೂ ಭವ್ಯವಾದ ಚಿನ್ನದ ಕಿರೀಟ ಹೈಲೈಟ್ ಆಗಿದೆ. ಈ ಚಿನ್ನದ ಕಿರೀಟ 20 ಕೆಜಿ ತೂಕವಿದ್ದು, 15 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ವರದಿಯಾಗಿದೆ. ಈ ಕಿರೀಟ ನಿರ್ಮಾಣದ ಕೆಲಸ ಪೂರ್ಣಗೊಳಿಸಲು ಕುಶಲಕರ್ಮಿಗಳು ಸುಮಾರು 2 ತಿಂಗಳು ತೆಗೆದುಕೊಂಡರಂತೆ.
ಅನಂತ್‌ ಅಂಬಾನಿ, ಪ್ರತಿವರ್ಷವೂ ಇದರ ಪೆಂಡಾಲ್‌ಗೆ ಆಗಮಿಸಿ ಬಪ್ಪನ ದರ್ಶನ ಪಡೆಯುತ್ತಾರೆ. ಕಳೆದ ವರ್ಷವೂ ಅಂಬಾನಿ ಕುಟುಂಬ ಲಾಲ್‌ಬಾಗ್ಚಾಗೆ ಭೇಟಿ ನೀಡಿತ್ತು. ಅತ್ಯಂತ ಗ್ರ್ಯಾಂಡ್‌ ಆಗಿ ಇಲ್ಲಿ ಗಣೇಶೋತ್ಸವವನ್ನು (  2024) ಆಚರಿಸುತ್ತಾರೆ. ಇಲ್ಲಿಗೆ ಸಲ್ಮಾನ್‌ ಖಾನ್‌ ಸೇರಿದಂತೆ ಬಾಲಿವುಡ್‌ನ ದೊಡ್ಡ ಸೆಲೆಬ್ರಿಟಿಗಳು, ರಾಜಕಾರಣಿಗಳು, ಉದ್ಯಮಿಗಳು ಭೇಟಿ ನೀಡುತ್ತಾರೆ.
ಅನಂತ್ ಅಂಬಾನಿ ಕಳೆದ 15 ವರ್ಷಗಳಿಂದ ಲಾಲ್‌ಬಾಗ್ಚಾ ಸಮಿತಿಯೊಂದಿಗೆ ಸಂಬಂಧ ಹೊಂದಿದ್ದಾರೆ. ನಿಯಮಿತ ಭೇಟಿಗಳಲ್ಲದೆ ಅನಂತ್ ಈ ಹಿಂದೆ ಹಲವಾರು ಬಾರಿ ಸಂಸ್ಥೆಗೆ ತಮ್ಮ ಬೆಂಬಲವನ್ನು ನೀಡಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ ಸಮಿತಿಯು ತಮ್ಮ ಸಾಮಾಜಿಕ ಕಾರ್ಯಗಳಿಗೆ ಹಣದ ಕೊರತೆಯನ್ನು ಎದುರಿಸಿದಾಗ, ಅನಂತ್ ಅಂಬಾನಿ ರಿಲಯನ್ಸ್ ಫೌಂಡೇಶನ್ ಜೊತೆಗೆ ರೋಗಿಗಳ ಸಹಾಯಕ್ಕಾಗಿ 24 ಡಯಾಲಿಸಿಸ್ ಯಂತ್ರಗಳನ್ನು ಸಮಿತಿಗೆ ಕೊಡುಗೆ ನೀಡಿದ್ದರು.
ಮುಂಬೈನಲ್ಲಿ 10 ದಿನಗಳ ಕಾಲ ಲಾಲ್‌ಬಾಗ್ಚಾ ಗಣೇಶೋತ್ಸವ ನಡೆಯುತ್ತದೆ. ಪ್ರತಿ ವರ್ಷ ಹನ್ನೊಂದನೇ ದಿನದಂದು ಗಿರ್‌ಗಾಂವ್ ಚೌಪಾಟಿ ಬೀಚ್‌ನಲ್ಲಿ ಗಣಪತಿಯ ವಿಸರ್ಜನೆ ಮಾಡಲಾಗುತ್ತದೆ. ಈ ವರ್ಷ ಅನಂತ್ ಅಂಬಾನಿಗೆ ಪ್ರತಿಷ್ಠಿತ ಲಾಲ್‌ಬಾಗ್ಚಾ ರಾಜಾ ಸರ್ವಜನಿಕ ಗಣೇಶ್ ಉತ್ಸವ ಮಂಡಲದ ಗೌರವ ಸದಸ್ಯತ್ವವನ್ನು ನೀಡಿ, ಅವರ ಕೊಡುಗೆಯನ್ನು ಸ್ಮರಿಸಲಾಯಿತು.
ಈ ಸುದ್ದಿ ಓದಿ: : ವಿಶ್ವ ವಿಖ್ಯಾತ ಮುಂಬೈಯ ಲಾಲ್‌ಬಾಗ್ಚಾ ರಾಜಾ ಗಣಪತಿಯ ಫಸ್ಟ್‌ಲುಕ್‌ ರಿವೀಲ್‌- ಇಲ್ಲಿದೆ ನೋಡಿ ವಿಡಿಯೋ