 : ದೀಪಿಕಾ ಪಡುಕೋಣೆ- ರಣವೀರ್‌ ದಂಪತಿಗೆ ಹೆಣ್ಣು ಮಗು ಜನನ
ಮುಂಬಯಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ‌( ) ಹೆಣ್ಣು ಮಗುವಿನ ತಾಯಿ () ಆಗಿದ್ದಾರೆ. ನಿನ್ನೆ ರಾತ್ರಿ ಅವರು ಹೆರಿಗೆಗಾಗಿ ಮುಂಬಯಿಯ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಈ ವರ್ಷದ ಬಾಲಿವುಡ್‌ನ ಬಹು ನಿರೀಕ್ಷಿತ ಹೆರಿಗೆಗಳಲ್ಲಿ ದೀಪಿಕಾ ಅವರದ್ದು ಒಂದಾಗಿದೆ. ಮುದ್ದಾದ ಹೆಣ್ಣು ಮಗುವಿಗೆ ದೀಪಿಕಾ- ರಣವೀರ್‌ ಸಿಂಗ್‌ ( ) ಜೋಡಿ ಅಪ್ಪ-ಅಮ್ಮನಾಗಿದೆ. ನಿನ್ನೆ ರಾತ್ರಿ ಹೆರಿಗೆಗಾಗಿ ಆಸ್ಪತ್ರೆಗೆ ಬಂದ ದೀಪಿಕಾ ಜೊತೆಗೆ ಅವರ ಪತಿ ರಣವೀರ್ ಸಿಂಗ್ ಕೂಡ ಇದ್ದರು. ಇಬ್ಬರೂ ತಮ್ಮ ಐಷಾರಾಮಿ ನೀಲಿ ಕಾರಿನಲ್ಲಿ ಆಸ್ಪತ್ರೆಗೆ ಧಾವಿಸಿದ್ದರು.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಬೇಬಿ ಬಂಪ್‌ ಫೋಟೋಶೂಟ್‌ ಹರಿದಾಡಿತ್ತು. ಇದರಲ್ಲಿ ರಣವೀರ್‌ ಫೋಟೋಗಳು ಕೂಡ ಇದ್ದವು. ರಣವೀರ್‌ ಆಗಲೀ ದೀಪಿಕಾ ಆಗಲಿ ಇನ್ನೂ ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತು ಯಾವುದೇ ಘೋಷಣೆ ಮಾಡಿಲ್ಲ.
ಗಣೇಶ ಹಬ್ಬದ ದಿನವೇ ದೀಪಿಕಾ ಪಡುಕೋಣೆ ಆಸ್ಪತ್ರೆ ಸೇರಿದ್ದರು. ಆಸ್ಪತ್ರೆಗೆ ಬರುವ ಮುನ್ನ ರಣವೀರ್ ಸಿಂಗ್ ತಮ್ಮ ಇಡೀ ಕುಟುಂಬದೊಂದಿಗೆ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬಂದಿದ್ದರು. ಅಲ್ಲಿ ದೀಪಿಕಾ ಮತ್ತು ರಣವೀರ್ ಸಿಂಗ್ ಅವರ ಇಡೀ ಕುಟುಂಬ ವಿನಾಯಕನ ದರ್ಶನ ಮಾಡಿತ್ತು. ದೀಪಿಕಾ ಮತ್ತು ರಣವೀರ್ ಮದುವೆಯಾಗಿ 6 ​​ವರ್ಷಗಳಾಗಿವೆ. ಇದೀಗ ದೀಪಿಕಾ ತಮ್ಮ ಚೊಚ್ಚಲ ಮಗುವಿನ ತಾಯಾಗಿದ್ದಾರೆ.
ಕಳೆದ ವಾರ, ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ ತನ್ನ ಗರ್ಭಾವಸ್ಥೆಯ () ಬಗ್ಗೆ ನಡೆಯುತ್ತಿರುವ ಊಹಾಪೋಹಗಳಿಗೆ ತೆರೆ ಹಾಕುವಂತೆ Instagramನಲ್ಲಿ ಬೇಬಿ ಬಂಪ್‌ ಫೋಟೋಶೂಟ್‌ ಹಂಚಿಕೊಂಡಿದ್ದರು. ತಿಂಗಳುಗಟ್ಟಲೆ ಈ ಬಗ್ಗೆ ದೀಪಿಕಾ- ರಣವೀರ್‌ ಟ್ರೋಲಿಂಗ್ ಎದುರಿಸಿದ್ದರು. ದೀಪಿಕಾ ಅವರದು ನಕಲಿ ಬೇಬಿ ಬಂಪ್ ಎಂದು ಕೆಲವರು ಟ್ರೋಲ್‌ ಮಾಡಿದ್ದರು. ದೀಪಿಕಾ ತಮ್ಮ ಅದ್ಭುತವಾದ ಫೋಟೋಗಳ ಸರಣಿಯೊಂದಿಗೆ ವದಂತಿಗಳಿಗೆ ಕೊನೆ ಹಾಡಿದ್ದರು. ಫೊಟೋಗಳಲ್ಲಿ ದೀಪಿಕಾ ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಪತಿ ರಣವೀರ್ ಸಿಂಗ್ ಅವರೊಂದಿಗೆ ಪೋಸ್ ನೀಡಿದ್ದರು.
ಈ ಸುದ್ದಿ ಓದಿ: : ಸಿದ್ಧಿ ವಿನಾಯಕನ ದರ್ಶನ  ಪಡೆದ ತುಂಬು ಗರ್ಭಿಣಿ ದೀಪಿಕಾ; ರಣವೀರ್‌ ಸಿಂಗ್‌ ಸಾಥ್‌