ಅವಿವಾ ಸಿಗ್ನೇಚರ್ ಇನ್‌ಕ್ರೀಸಿಂಗ್ ಇನ್‌ಕಮ್ ಪ್ಲಾನ್‌ನಿಂದ ರಿಟೈರ್‌ಮೆಂಟ್ ಸೆಕ್ಯುರಿಟಿಗೆ ಹೊಸ ವ್ಯಾಖ್ಯಾನ ನೀಡಿದ ಅವಿವಾ ಇಂಡಿಯಾ
~ ಸಮಗ್ರ ನಿವೃತ್ತಿ ನಂತರದ ರೆಗ್ಯುಲರ್ ಆದಾಯದ ಪರಿಹಾರವಾಗಿದ್ದು, ಜೀವಿತಾವಧಿಯವರೆಗೆ ಪ್ರತಿ 3ನೇ ವರ್ಷಕ್ಕ ಆದಾಯದಲ್ಲಿ 15% ಏರಿಕೆ ~
ಭಾರತದ ಅತ್ಯಂತ ವಿಶ್ವಾಸಾರ್ಹ ಖಾಸಗಿ ಜೀವ ವಿಮೆ ಬ್ರ್ಯಾಂಡ್ ಆಗಿರುವ ಅವಿವಾ ಲೈಫ್ ಇನ್ಶುರೆನ್ಸ್‌ ಲಿಂಕ್ ಮಾಡಿಲ್ಲದ, ಭಾಗವಹಿಸದ, ಜೀವ ವಿಮೆ ಉಳಿತಾಯ ಯೋಜನೆಯಾಗಿರುವ ಅವಿವಾ ಸಿಗ್ನೇಚರ್ ಇನ್‌ಕ್ರೀಸಿಂಗ್ ಇನ್‌ಕಮ್ ಪ್ಲಾನ್ ಅನ್ನು (ಯುಐಎನ್‌: 122N158V01) ಆರಂಭ ಮಾಡುವುದಾಗಿ ಘೋಷಿಸಿದೆ. ಖಾತರಿಯಾದ ಮತ್ತು ಬೆಳೆಯುತ್ತಿರುವ ನಿವೃತ್ತಿ ನಂತರದ ಆದಾಯ ಹರಿವನ್ನು ಒದಗಿಸಲು ಮತ್ತು ಗ್ರಾಹಕರು ತಮ್ಮ ಸುವರ್ಣ ವರ್ಷಗಳಲ್ಲಿ # ಅನ್ನು ಮುಕ್ತವಾಗಿ ನಡೆಸಲು ಗ್ರಾಹಕರಿಗೆ ಅನುಕೂಲ ಒದಗಿಸಲು ಈ ಪ್ಲ್ಯಾನ್ ಅನ್ನು ವಿನ್ಯಾಸ ಮಾಡಲಾಗಿದೆ.
ಜೀವನ ನಿರ್ವಹಣೆ ನಿರೀಕ್ಷೆ ಮತ್ತು ಜೀವನ ವೆಚ್ಚ ಹೆಚ್ಚಳವಾಗುತ್ತಿರುವುದರಿಂದಾಗಿ, ನಿವೃತ್ತಿ ವೇಳೆಯಲ್ಲಿ ಆರ್ಥಿಕ ಭದ್ರತೆಯು ಹಿಂದಿಗಿಂತ ಈಗ ಹೆಚ್ಚು ಪ್ರಮುಖವಾಗಿದೆ. ಅವಿವಾ ಸಿಗ್ನೇಚರ್ ಇನ್‌ಕ್ರೀಸಿಂಗ್ ಇನ್‌ಕಮ್ ಪ್ಲ್ಯಾನ್ ಈ ಸವಾಲುಗಳನ್ನು ಪರಿಹಾರ ಮಾಡಿದ್ದು, ನವೀನ ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ.
ಈ ಪ್ಲ್ಯಾನ್‌ನಲ್ಲಿ ಹಣದುಬ್ಬರದ ಸಮಸ್ಯೆಯನ್ನು ನೀಗಿಸಲಾಗಿದ್ದು, ಮಾಸಿಕ ಆದಾಯದಲ್ಲಿ ಪ್ರತಿ 3ನೇ ಪಾಲಿಸಿ ವರ್ಷದಲ್ಲಿ 15% ಸ್ಟೆಪ್ ಅಪ್ ಅನ್ನು ಒದಗಿಸಲಾಗಿದೆ. ಅಂದರೆ, ಕಾಲಾನಂತರದಲ್ಲಿ, ಪಾವತಿಗಳು ಹಣದುಬ್ಬರಕ್ಕೆ ಅನುಗುಣವಾಗಿ ಹೆಚ್ಚುತ್ತದೆ. ಹೀಗಾಗಿ, ಪಾಲಿಸಿದಾರರ ಹಣದ ಮೌಲ್ಯವೂ ಮಾರುಕಟ್ಟೆಗೆ ಅನುಗುಣವಾಗಿರುತ್ತದೆ.
ಅವಿವಾ ಸಿಗ್ನೇಚರ್ ಇನ್‌ಕ್ರೀಸಿಂಗ್ ಇನ್‌ಕಮ್ ಪ್ಲಾನ್ ಖಾತರಿಯಾದ ಆದಾಯವನ್ನು ಜೀವನಪೂರ್ತಿ ನೀಡುತ್ತದೆ. ಇದರಿಂದ ಪಾಲಿಸಿದಾರರಿಗೆ ಆದಾಯ ಪ್ರಯೋಜನ ಸಿಗುತ್ತದೆ ಮತ್ತು 100 ವರ್ಷಗಳವರೆಗೆ ಸಮಗ್ರ ಹಣಕಾಸು ಸುರಕ್ಷತೆ ಸಿಗುತ್ತದೆ. ಇದರ ಜೊತೆಗೆ, ಪಾವತಿ ಅವಧಿಯ ಕೊನೆಯಲ್ಲಿ ಪ್ರೀಮಿಯಂ ಅನ್ನು ವಾಪಸು ಮಾಡತ್ತದೆ. ಆಗ ಪಾಲಿಇಸದಾರರಿಗೆ ಪಾವತಿ ಮಾಡಿದ ಒಟ್ಟು ಪ್ರೀಮಿಯಂಗೆ ಹೋಲಿಸಿದರೆ 105% ವಾಪಸು ಬಂದಿರುತ್ತದೆ. ಈ ಮೂಲಕ ಪ್ಲ್ಯಾನ್‌ನ ಒಟ್ಟಾರೆ ಪ್ರಯೋಜನ ಹೆಚ್ಚಳವಾಗುತ್ತದೆ. ಅನುಕೂಲಕರ ಪ್ರೀಮಿಯಂ ಪಾವತಿ ಆವರ್ತನ ದಿಂದ ಸುರಕ್ಷಿತ ನಿವೃತ್ತಿಗೆ ನಿರಂತರವಾಗಿ ಮಾಸಿಕ ಉಳಿತಾಯವನ್ನೂ ಮಾಡಬಹುದಾಗಿದೆ. ಇದರಿಂದಾಗಿ ಹಲವು ರೀತಿಯ ಗ್ರಾಹಕರಿಗೆ ಇದು ಅನುಕೂಲಕರವಾಗಿರುತ್ತದೆ.
ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಮರಣವನ್ನಪ್ಪಿದರೆ, ಗ್ಯಾರಂಟೀಡ್ ಡೆತ್ ಬೆನಿಫಿಟ್ ಸಿಗುತ್ತದೆ. ಇದರಿಂದ ಸವಾಲಿನ ಸಮಯದಲ್ಲಿ ಅಗತ್ಯ ಹಣಕಾಸಿನ ಬೆಂಬಲ ಸಿಗುತ್ತದೆ. ಗಮನಾರ್ಹ ಅನುಕೂಲವೆಂದರೆ, ಇನ್‌ ಬಿಲ್ಟ್ ಪ್ರೀಮಿಯಂ ಗ್ಯಾರಂಟಿ ಆಗಿದ್ದು, ಇದರಲ್ಲಿ ಎಲ್ಲ ಭವಿಷ್ಯದ ಪ್ರೀಮಿಯಂ ಅನ್ನು ಪಾಲಿಸಿದಾರರ ಪರವಾಗಿ ಅವಿವಾ ಪಾವತಿ ಮಾಡುತ್ತದೆ ಮತ್ತು ಗ್ರಾಹಕರಿಗೆ ಭರವಸೆ ನೀಡಿದ ಪ್ರಕಾರ ಗ್ಯಾರಂಟೀಡ್ ಇನ್‌ಕ್ರೀಸಿಂಗ್ ಇನ್‌ಕಮ್‌ ಅನ್ನು ಕುಟುಂಬಕ್ಕೆ ನೀಡುತ್ತದೆ.
ಹಿರಿಯ ಉಪಾಧ್ಯಕ್ಷ ಮತ್ತು ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಶ್ರೀ ವಿನೀತ್ ಕಪಾಹಿ ಮಾತನಾಡಿ “ಅವಿವಾ ಸಿಗ್ನೇಚರ್ 3ಡಿ ಟರ್ಮ್ ಪ್ಲ್ಯಾನ್‌ ಮೂಲಕ ನಮ್ಮ ಗ್ರಾಹಕರ ರಕ್ಷಣೆ ಅಗತ್ಯಗಳನ್ನು ಪೂರೈಸಿದ ನಂತರ ಮತ್ತು ಅವಿವಾ ಸಿಗ್ನೇಚರ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್-ಪ್ಲಾಟಿನಂ ಮೂಲಕ ಸಂಪತ್ತನ್ನು ವೃದ್ಧಿಸಿಕೊಳ್ಳಲು ಸಹಾಯ ಮಾಡಿದ ನಂತರ, 3ನೇ ಉತ್ಪನ್ನವನ್ನು ನಾವು ಅನಾವರಣಗೊಳಿಸುತ್ತಿದ್ದು, ಇದರಲ್ಲಿ ನಿವೃತ್ತಿ ನಂತರ ಖಾತರಿ ಆದಾಯವನ್ನು ಪಡೆಯುವ ಭರವಸೆಯನ್ನು ಒದಗಿಸುತ್ತಿದ್ದೇವೆ. ಇಂದಿನ ಅನಿರೀಕ್ಷಿತ ಆರ್ಥಿಕ ಪರಿಸ್ಥಿತಿಯಲ್ಲಿ, ಬೆಳವಣಿಗೆ, ಹಣದುಬ್ಬರದಿಂದ ಸುರಕ್ಷಿತವಾದ ಆದಾಯದ ಹರಿವನ್ನು ಈ ಪ್ಲ್ಯಾನ್ ಒದಗಿಸುತ್ತದೆ. ಈ ಮೂಲಕ ಸುರಕ್ಷಿತ ಮತ್ತು ಆರಾಮದಾಯಕ ನಿವೃತ್ತಿಯನ್ನು ನಮ್ಮ ಗ್ರಾಹಕರಿಗೆ ಒದಗಿಸುತ್ತದೆ. ಅವಿವಾ ಸಿಗ್ನೇಚರ್ ಇನ್‌ಕ್ರೀಸಿಂಗ್ ಇನ್‌ಕಮ್ ಪ್ಲ್ಯಾನ್‌ನಲ್ಲಿ ಅನ್ವೇಷಣೆಗೆ ನಮ್ಮ ಬದ್ಧತೆಯು ಪ್ರತಿಫಲಿಸುತ್ತದೆ ಮತ್ತು ನಮ್ಮ ಗ್ರಾಹಕರ ಭವಿಷ್ಯದ ಹಣಕಾಸು ಅಗತ್ಯಗಳಿಗೆ ಅನುಗುಣವಾಗಿದೆ.”
ಪ್ರಮುಖ ವೈಶಿಷ್ಟ್ಯಗಳು:• ಜೀವ ವಿಮೆ: ವಾರ್ಷಿಕ ಪ್ರೀಮಿಯಂನ 7 ಅಥವಾ 11 ಪಟ್ಟು ಜೀವ ವಿಮೆ ಕವರೇಜ್ ಅನ್ನು ಒದಗಿಸುತ್ತದೆ• ಜೀವನ ಪೂರ್ತಿ ಆದಾಯದ ಖಾತರಿ: ಖಾತರಿ ಮಾಸಿಕ ಆದಾಯವನ್ನು 100 ವರ್ಷದವರೆಗೆ ಒದಗಿಸುತ್ತದೆ ಮತ್ತು ಪ್ರತಿ ಮೂರನೇ ಪಾಲಿಸಿ ವರ್ಷದಲ್ಲಿ 15% ಏರಿಕೆ ಒದಗಿಸುತ್ತದೆ• ಇನ್‌ಬಿಲ್ಟ್ ಪ್ರೀಮಿಯಂ ಗ್ಯಾರಂಟಿ ಪ್ರಯೋಜನ: ಪ್ರೀಮಿಯಂ ಪಾವತಿ ಅವಧಿಯಲ್ಲಿ ಜೀವ ವಿಮೆದಾರರು ಮರಣವನ್ನಪ್ಪಿದರೆ, ಕ್ಲೇಮ್‌ದಾರರು ನಿಗದಿಪಡಿಸಿದ ಪ್ರಕಾರ ದೀರ್ಘಕಾಲೀನ ಏರಿಕೆ ಆದಾಯವನ್ನು ಪಡೆಯುತ್ತಾರೆ. ಇದರಲ್ಲಿ ಬಾಕಿ ಇರುವ ಮುಂದಿನ ಪ್ರೀಮಿಯಂಗಳನ್ನು ಪಾವತಿ ಮಾಡುವ ಹೊರೆ ಇರುವುದಿಲ್ಲ.• ಪ್ರೀಮಿಯಂ ವಾಪಸಾತಿ: ಪಾವತಿ ಅವಧಿಯ ಕೊನೆಯಲ್ಲಿ ಪಾವತಿ ಮಾಡಿದ ಒಟ್ಟು ಪ್ರೀಮಿಯಂನಲ್ಲಿ 105% ವಾಪಸು ಪಡೆಯುತ್ತೀರಿ.• ಐಚ್ಛಿಕ ರೈಡರ್‌ಗಳು: ಅವಿವಾ ಆಕ್ಸಿಡೆಂಟಲ್ ಕ್ಯಾಶುವಾಲ್ಟಿ ನಾನ್ ಲಿಂಕ್ಡ್ ರೈಡರ್ ಮತ್ತು ಅವಿವಾ ನ್ಯೂ ಕ್ರಿಟಿಕಲ್ ಇಲ್‌ನೆಸ್ ನಾನ್ ಲಿಂಕ್ಡ್‌ ರೈಡರ್‌ ಜೊತೆಗೆ ಹೆಚ್ಚುವರಿ ರಕ್ಷಣೆ• ಪ್ರೀಮಿಯಂ ಮತ್ತು ಪಾವತಿಗಳಿಗೆ ತೆರಿಗೆ ಪ್ರಯೋಜನ: ಚಾಲ್ತಿಯಲ್ಲಿರುವ ತೆರಿಗೆ ಕಾನೂನುಗಳ ಪ್ರಕಾರ ತೆರಿಗೆ ಪ್ರಯೋಜನಗಳು• ಸಾಲ ಸೌಲಭ್ಯ: ಈ ಪ್ಲ್ಯಾನ್ ಅಡಿಯಲ್ಲಿ ಸಾಲಗಳು ಲಭ್ಯವಿವೆ.
ಅವಿವಾ ಸಿಗ್ನೇಚರ್ ಇನ್‌ಕ್ರೀಸಿಂಗ್ ಇನ್‌ಕಮ್ ಪ್ಲ್ಯಾನ್‌ ಎಂಬುದು ಅವಿವಾ ಸಿಗ್ನೇಚರ್ ಪ್ರಾಡಕ್ಟ್ ಸರಣಿಯ ಒಂದು ಭಾಗವಾಗಿದೆ. ಸಿಗ್ನೇಚರ್ ಸರಣಿಯಲ್ಲಿ ಸಮಗ್ರ ಉತ್ಪನ್ನಗಳ ಕೊಡುಗೆಯಿದ್ದು, ರಕ್ಷಣೆ, ದೀರ್ಘಕಾಲೀನ ಉಳಿತಾಯ ಮತ್ತು ನಿವೃತ್ತಿ ಅಗತ್ಯಗಳನ್ನು ಪೂರೈಸುವ ಗುರಿ ಹೊಂದಿದೆ.