ಕರೋನಾ ಸೋಂಕು: 46,759 ಹೊಸ ಪ್ರಕರಣ ವರದಿ
ನವದೆಹಲಿ:ದೇಶದಲ್ಲಿ ಕರೋನಾ ಸೋಂಕಿತರ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 46,759 ಹೊಸ ಪ್ರಕರಣ ವರದಿಯಾಗಿದೆ.
569 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಕಂಡು ಬರುತ್ತಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 3,26,49,947ಕ್ಕೆ ಏರಿದ್ದು, ಮೃತಪಟ್ಟ ವರ ಸಂಖ್ಯೆ 4,37,370ಕ್ಕೆ ಮುಟ್ಟಿದೆ.
ದೇಶದಲ್ಲಿ ಲಸಿಕೆ ನೀಡಿಕೆ ಕೂಡ ದಾಖಲೆ ಪ್ರಮಾಣದಲ್ಲಿ ನಡೆದಿದೆ. ಬರುವ ಸೆ.1ರಿಂದ ಪ್ರತಿ ದಿನ 1 ಕೋಟಿ ಗುರಿಯನ್ನು ಹಾಕಿಕೊಳ್ಳಲಾಗಿದೆ. ಮೂರನೇ ಅಲೆಯ ಭಯದ ನಡುವೆ ದೇಶದಲ್ಲಿ ಆರ್ಥಿಕ ಚಟುವಟಿಕೆ ಕೂಡ ಮಾಮೂಲಿ ಸ್ಥಿತಿಗೆ ಬರುತ್ತಿದೆ.