ಬಂಗಾಳಿ ಬರಹಗಾರ ಬುದ್ದದೇಬ್ ಗುಹಾ ಇನ್ನಿಲ್ಲ
ಕೋಲ್ಕತ್ತಾ:ಹಲವಾರು ಮಹೋನ್ನತ ಕೃತಿಗಳನ್ನು ರಚಿಸಿ ಮನೆಮಾತಾಗಿದ್ದ ಬಂಗಾಳಿ ಬರಹಗಾರ ಬುದ್ದದೇಬ್ ಗುಹಾ(85) ಇಹಲೋಕ ತ್ಯಜಿಸಿದ್ದಾರೆ.
ಗುಹಾ ಅವರು ಕೊರೊನೋತ್ತರ ಸಂಕಷ್ಟದಿಂದ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ರಾತ್ರಿ 11.30ರ ಸಮಯದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಈಶಾನ್ಯ ಭಾರತದ ಆರಣ್ಯ ಸಂಪತ್ತು ಮತ್ತು ಪ್ರಕೃತಿಯ ಛಾಯೆ ಗುಹಾ ಅವರ ಬರಹದಲ್ಲಿ ಎದ್ದು ಕಾಣು ತ್ತಿತ್ತು. ಕೆಲ ದಿನಗಳ ಹಿಂದೆ ಕೊರೊನಾ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ 33 ದಿನಗಳ ಕಾಲ ಆಸ್ಪತ್ರೆ ಯಲ್ಲಿದ್ದು, ಚಿಕಿತ್ಸೆ ಪಡೆದಿದ್ದರು. ನಂತರ ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದ ರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪತ್ನಿ ಸಂಗೀತ ನಿರೂಪಕಿ ರೀತೂ ಗುಹಾ ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.