ನಕಾರಾತ್ಮಕ ಪ್ರದರ್ಶನ: ಶೇ.0.17ನಷ್ಟು ಕುಸಿತ ಕಂಡ ನಿಫ್ಟಿ
ಮುಂಬೈ:ಸೆನ್ಸೆಕ್ಸ್ ಸೋಮವಾರ 162.8 ಪಾಯಿಂಟ್‌ಗಳಲ್ಲಿ 58,142.27 ವಹಿವಾಟು ನಡೆಸಿದ್ದು, ಬಿಎಸ್‌ಇ ಸೆನ್ಸೆಕ್ಸ್ 58,050ರ ಆಸುಪಾಸಿನಲ್ಲಿದೆ.
ನಿಫ್ಟಿ 50, 30 ಪಾಯಿಂಟ್‌ಗಳಲ್ಲಿ 0.17%ನಷ್ಟು ಕುಸಿತದೊಂದಿಗೆ 17,339 ವಹಿವಾಟನ್ನು ದಾಖಲಿಸಿದೆ ಯಾದರೂ ಪ್ರಸ್ತುತ ಮೌಲ್ಯ 17,350 ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.
ಭಾರತೀಯ ಮಾರುಕಟ್ಟೆಯು ನಕಾರಾತ್ಮಕವಾಗಿ ಪ್ರದರ್ಶನ ತೋರಿದ್ದು ( ) ಏಷ್ಯಾದ ಮಾರುಕಟ್ಟೆಗಳು ಅತೃಪ್ತ ಪ್ರದರ್ಶನವನ್ನು ತೋರಿದ್ದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ವಹಿವಾಟುಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕೆಲವು ಸಂಸ್ಥೆಗಳೆಂದರೆ ಕೋಲ್ ಇಂಡಿಯಾ, ಹಿಂಡಾಲ್ಕೊ ಉತ್ತಮ ಪ್ರದರ್ಶಕರ ಸ್ಥಾನಗಳಲ್ಲಿವೆ.
ಕೋಲ್ ಇಂಡಿಯಾ 1.48% ನಷ್ಟು ಏರಿಕೆ ಕಂಡಿದ್ದು, ಹಿಂಡಾಲ್ಕೊ 1.42% ನಷ್ಟು ಹೆಚ್ಚಳ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ ಅಗ್ರ ಗಳಿಕೆ ನಡೆಸಿದ ಹಿರಿಮೆ ನಿಫ್ಟಿ ಮೀಡಿಯಾದ್ದಾಗಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ನಿಫ್ಟಿ ಫೈನಾನ್ಶಿಯಲ್ ಸರ್ವೀಸಸ್ ಕಡಿಮೆ ವಹಿವಾಟು ನಡೆಸುತ್ತಿದೆ.