ಕೇಂದ್ರ ಸಾಹಿತ್ಯ ಅಕಾಡೆಮಿ ಸಾಹಿತ್ಯ ಪ್ರಶಸ್ತಿ: ಕನ್ನಡ ಅನುವಾದಕರಿಗೆ ಬಂಪರ್‌
ನವದೆಹಲಿ:ಕೇಂದ್ರ ಸಾಹಿತ್ಯ ಅಕಾಡೆಮಿ 2020ನೇ ಸಾಲಿನಲ್ಲಿ ಅನುವಾದ ಸಾಹಿತ್ಯಕ್ಕೆ ನೀಡುವ ಪ್ರಶಸ್ತಿ ಪಟ್ಟಿ ಶನಿವಾರ ಪ್ರಕಟವಾಗಿದ್ದು, ಕನ್ನಡ ಅನುವಾದಹಾಗೂ ಕನ್ನಡಿಗ ಅನುವಾದಕ ಅಥವಾ ಕನ್ನಡ ಕೃತಿಗೆ ಸಂಬಂಧಿಸಿ ಕನ್ನಡಕ್ಕೆ ಒಟ್ಟು ಏಳು ಪ್ರಶಸ್ತಿಗಳು ಸಂದಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷಡಾ. ಚಂದ್ರಶೇಖರ ಕಂಬಾರಅವರ ಅಧ್ಯಕ್ಷತೆಯಲ್ಲಿ ನಡೆದ ಈ ಆಯ್ಕೆ ನಡೆದಿದೆ.
ಅನುವಾದದಲ್ಲಿ ಒಟ್ಟು 24 ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಆಯಾ ಭಾಷೆಗಳಿಗೆ ಕುರಿತಂತೆ ಮೂವರನ್ನು ಒಳಗೊಂಡ ಸಮಿತಿ ರಚಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕನ್ನಡಕ್ಕೆ ಸಂಬಂಧಿಸಿದಂತೆ ಚಂದ್ರಕಾಂತ ಪೋಕಳೆ, ಪ್ರೊ. ಲಕ್ಷ್ಮೀ ಚಂದ್ರಶೇಖರ್, ಪ್ರೊ.ಒ.ಎಲ್. ನಾಗಭೂಷಣ್​ ಅವರು ಆಯ್ಕೆ ಸಮಿತಿಯಲ್ಲಿದ್ದರು. ಪ್ರಶಸ್ತಿ ಮೊತ್ತ ತಲಾ 50 ಸಾವಿರ ರೂ. ನಗದನ್ನು ಹೊಂದಿರಲಿದೆ.