ಉಗ್ರರ ಸಂಪರ್ಕ: ಆರು ಮಂದಿ ಸರ್ಕಾರಿ ನೌಕರರ ವಜಾ
ಶ್ರೀನಗರ:ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಆರು ಮಂದಿ ಸರ್ಕಾರಿ ನೌಕರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಬ್ದುಲ್​ ಹಮೀದ್​ ವಾನಿ, ಜಾಫರ್​​ ಹುಸೇನ್​ ಭಟ್​, ಮೊಹಮ್ಮದ್​​ ರೈಫ್​ ಭಟ್​, ಲಿಯಾಖತ್​​ ಅಲಿ, ತಾರಿಖ್​​​ ಮೆಹಮೊದ್​​ ಹಾಗೂ ಸೊವಾಖತ್​​​ ಅಹ್ಮದ್​ ಖಾನ್​ ಸರ್ಕಾರಿ ಸೇವೆಯಿಂದ ವಜಾ ಗೊಂಡವರು.
ಇದರಲ್ಲಿ ಇಬ್ಬರು ಪೊಲೀಸ್ ಕಾನ್ಸ್​​ಸ್ಟೇಬಲ್​, ಇಬ್ಬರು ಶಿಕ್ಷಕರು, ಅರಣ್ಯ ಇಲಾಖೆ ಅಧಿಕಾರಿ ಹಾಗೂ ರಸ್ತೆ ಮತ್ತು ಕಟ್ಟಡ ಇಲಾಖೆ ನೌಕರರು ಇದ್ದಾರೆ.
ಲೆಫ್ಟಿನೆಂಟ್​​ ಗವರ್ನರ್​​​ ಮನೋಜ್​ ಸಿನ್ಹಾ ಕ್ರಮ ಕೈಗೊಂಡಿದ್ದು, ದೇಶದ್ರೋಹದ ಆರೋಪದ ಮೇಲೆನೌಕರರನ್ನು ವಜಾಗೊಳಿಸಲಾಗಿದೆ.

