ಯುಪಿಎಸ್‌ಸಿ ಸಿವಿಲ್​ ಸರ್ವಿಸ್​ ಫಲಿತಾಂಶ ಪ್ರಕಟ: ಶುಭಂ ಟಾಪರ್, ಕರ್ನಾಟಕದ ಅಕ್ಷಯ್’ಗೆ​ 72ನೇ ಸ್ಥಾನ
ನವದೆಹಲಿ:ಕೇಂದ್ರ ಲೋಕಸೇವಾ ಆಯೋಗ ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2020ನೇ ಸಾಲಿನ ಪರೀಕ್ಷೆಯ ಫಲಿತಾಂಶಪ್ರಕಟವಾಗಿದೆ.
ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಜೊತೆಗೆ ಈಗ ವಿವಿಧ ಕೇಂದ್ರ ಸೇವೆಗಳಿಗೆ ಸೇರುವ ಅಭ್ಯರ್ಥಿಗಳ ಪಟ್ಟಿ ಯನ್ನು ಬಿಡುಗಡೆ ಮಾಡಿದೆ. ಐಐಟಿ ಬಾಂಬೆ ಸಿವಿಲ್ ಎಂಜಿನಿಯರಿಂಗ್‌ ಪದವೀಧರ ಶುಭಂ ಕುಮಾರ್ ಮೊದಲ ಸ್ಥಾನ, ಮನಿತ್​ನ ಎಲೆಕ್ಟ್ರಿಕಲ್ ಎಂಜಿನಿಯರಿಂಗ್​ ಪದವಿಧರ ಜಾಗೃತಿ ಅವಸ್ಥಿ ಎರಡನೇ ಸ್ಥಾನ ಹಾಗೂ ಕರ್ನಾಟಕದ ಅಕ್ಷಯ್​ 72ನೇ ಸ್ಥಾನ ಪಡೆಯುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಟಾಪ್​ 25 ಅಭ್ಯರ್ಥಿಗಳಲ್ಲಿ 13 ಪುರುಷರು ಮತ್ತು 12 ಮಹಿಳೆಯರು ಸ್ಥಾನ ಪಡೆದಿದ್ದಾರೆ. 836 ಮಂದಿ ಯುಪಿಎಸ್ ಸಿ. ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದು, 180 , 36 , 200  ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಗಳ ಫಲಿತಾಂಶವನ್ನು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ .. ನಲ್ಲಿ ಬಿಡುಗಡೆ ಮಾಡಲಾಗಿದೆ.
ಶುಭಂ ಕುಮಾರ್ ಅವರು ಬಾಂಬೆ ಐಐಟಿಯಿಂದ ಬಿ.ಟೆಕ್‌ನಲ್ಲಿ ಪದವಿ ಪಡೆದಿದ್ದಾರೆ. ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದ್ದಾರೆ. ಜಾಗೃತಿ ಅವಸ್ಥಿ ಮತ್ತು ಅಂಕಿತಾ ಜೈನ್ ಕ್ರಮವಾಗಿ ಎರಡು ಮತ್ತುಮೂರನೇ ಸ್ಥಾನ ಪಡೆದಿದ್ದಾರೆ.
ಒಟ್ಟು 761 ಅಭ್ಯರ್ಥಿಗಳು ನಾಗರಿಕ ಸೇವೆಗಳ ಪರೀಕ್ಷೆ 2020ರಲ್ಲಿ ಯಶಸ್ವಿಯಾಗಿದ್ದಾರೆ. ಅಂತಿಮ ಫಲಿತಾಂಶವನ್ನು ಜನವರಿ 2021ರಲ್ಲಿ ನಡೆದ ಲಿಖಿತ ಮುಖ್ಯ ಪರೀಕ್ಷೆ ಮತ್ತು ಆಗಸ್ಟ್ ಮತ್ತು ಸೆಪ್ಟೆಂಬರ್ 2021 ರ ನಡುವೆ ನಡೆದ ವ್ಯಕ್ತಿತ್ವ ಪರೀಕ್ಷೆಯ ಆಧಾರದ ಮೇಲೆ ಬಿಡುಗಡೆ ಮಾಡಿದೆ.
ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ 10 ಅಭ್ಯರ್ಥಿಗಳು ಪಟ್ಟಿ..!1. ಶುಭಂ ಕುಮಾರ್2. ಜಾಗೃತಿ ಅವಸ್ಥಿ3. ಅಂಕಿತಾ ಜೈನ್4. ಯಶ್ ಜಲುಕಾ5. ಮಮತಾ ಯಾದವ್6. ಮೀರಾ ಕೆ7. ಪ್ರವೀಣ್ ಕುಮಾರ್8. ಜೀವನಿ ಕಾರ್ತಿಕ್ ನಾಗಜಿಭಾಯಿ9. ಅಪಲ ಮಿಶ್ರ10. ಸತ್ಯಂ ಗಾಂಧಿ