ಕರೋನಾ ಬ್ರೇಕಿಂಗ್: 26,041 ಸೋಂಕು ಪ್ರಕರಣ ಪತ್ತೆ
ನವದೆಹಲಿ:ಕಳೆದ 24ಗಂಟೆಗಳಲ್ಲಿ ಭಾರತದಲ್ಲಿ 26,041 ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದ್ದು, 29,621 ಮಂದಿ ಗುಣಮುಖರಾಗಿದ್ದಾರೆ.
ಸೋಂಕಿನಿಂದ 276 ಮಂದಿ ಮೃತಪಟ್ಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಅಂಕಿಅಂಶದಲ್ಲಿ ತಿಳಿಸಿದೆ. ಕೇರಳದಲ್ಲಿ ಮಾತ್ರ ಕೋವಿಡ್ ಪ್ರಕರಣ ಹೆಚ್ಚಳವಾಗಿದೆ. ಕೇರಳದಲ್ಲಿ 15, 951 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 165 ಮಂದಿ ಮೃತಪಟ್ಟಿದ್ದಾರೆ.
ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಒಟ್ಟು 3,36,78,786ಕ್ಕೆ ತಲುಪಿದ್ದು, ಈವರೆಗೆ 3,29,31,972 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಕೋವಿಡ್ ಸೋಂಕಿನಿಂದ ಒಟ್ಟು ಮೃತರ ಸಂಖ್ಯೆ 4,47,194ಕ್ಕೆ ಏರಿಕೆಯಾಗಿದೆ.