ಕರೋನಾ ಸೋಂಕು: 28,326 ಸೋಂಕು ಪ್ರಕರಣ, ಶೇ 97.77 ಚೇತರಿಕೆ ಪ್ರಮಾಣ
ನವದೆಹಲಿ:ದೇಶದಲ್ಲಿ ಒಂದೇ ದಿನ 28,326 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ವಿವರಗಳಂತೆ, 260 ಮಂದಿ ಮೃತಪಟ್ಟಿದ್ದು, ಮೃತರ ಒಟ್ಟು ಸಂಖ್ಯೆ 4,46,918 ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,03,476ಕ್ಕೆ ಏರಿಕೆಯಾಗಿದ್ದು, ಇದು ಒಟ್ಟು ಪ್ರಕರಣಗಳ ಶೇ 0.96 ರಷ್ಟಿದೆ. ಶೇ 97.77 ಚೇತರಿಕೆಯ ಪ್ರಮಾಣವಾಗಿದೆ.
ಕಳೆದ 24 ಗಂಟೆಗಳಲ್ಲಿ 2,034 ಪ್ರಕರಣಗಳು ಹೆಚ್ಚಳವಾಗಿವೆ. ದೈನಿಕ ದೃಢೀಕರಣ ಪ್ರಮಾಣ ಶೇ 1.90 ದಾಖಲಾಗಿದೆ. ಕಳೆದ 27 ದಿನಗಳಲ್ಲಿ ಇದು ಶೇ 3 ಕ್ಕಿಂತ ಕಡಿಮೆ ಇದೆ.
ಕೋವಿಡ್‌ ಸೋಂಕಿನ ಈ ವಾರದ ದೃಢೀಕರಣ ಪ್ರಮಾಣ ಶೇ 1.98 ಇದೆ. ಕಳೆದ 93 ದಿನಗಳಲ್ಲಿ ಇದು ಶೇ 3ಕ್ಕಿಂತ ಕಡಿಮೆ ಇದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.