ವೂಟ್ ಕಿಡ್ಸ್ ಈಗ ಅನಿಮಿ ಫ್ರಾಂಚೈಸಿ ಪೋಕಿಮ್ಯಾನ್‌ಗೆ ಹೊಸ ಡಿಜಿಟಲ್ ಹೋಮ್
ಅಚ್ಚುಮೆಚ್ಚಿನ ಸರಣಿ ಪೋಕಿಮ್ಯಾನ್ ಅನ್ನು ೨೧ ಬ್ಲಾಕ್‌ಬಸ್ಟರ್ ಚಲನಚಿತ್ರಗಳು ಮತ್ತು ೧೦,೦೦೦ ಕ್ಕೂ ಹೆಚ್ಚು ನಿಮಿಷಗಳ ಉತ್ಸಾಹಕರ ಅನಿಮಿ ಸರಣಿಯೊಂದಿಗೆ ತಂದಿದೆ.
ಮುಂಬೈ:ಭಾರತದ ಅತ್ಯಂತ ದೊಡ್ಡ ಮತ್ತು ಪ್ರೀತಿಯ ಮಕ್ಕಳ ಕಂಟೆಂಟ್ ಪ್ಲಾಟ್‌ಫಾರಂ- ವೂಟ್ ಕಿಡ್ಸ್ ಈಗ ಅನಿಯಮಿತ ಮನರಂಜನೆಯ ಮೂಲಕ ತನ್ನ ಕಿರಿಯ ವೀಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಭಾರತದ ಅಚ್ಚುಮೆಚ್ಚನ ಪಾತ್ರಗಳು, ಮನರಂಜನೆ ಹಾಗೂ ಮಕ್ಕಳಿಗೆ ಕಲಿಕೆಯ ವಿನೋದ ತರುವ ಒನ್-ಸ್ಟಾಪ್ ತಾಣವಾಗುವ ನಿಟ್ಟಿನಲ್ಲಿ ತನ್ನ ಕಂಟೆಂಟ್ ಸಂಗ್ರಹವನ್ನು ಸದೃಢಗೊಳಿಸುತ್ತಿರುವ ವೂಟ್ ಕಿಡ್ಸ್ ಜಾಗತಿಕ ವಾಗಿ ಜಪ್ರಿಯವಾದ ಅನಿಮಿ ಫ್ರಾಂಚೈಸಿ-ಪೋಕಿಮ್ಯಾನ್ ಅನ್ನು ಭಾರತದಲ್ಲಿ ಲಭ್ಯವಾಗುವಂತೆ ಮಾಡಿದೆ.
೨೧೫ ವರ್ಷಗಳ ಪೋಕಿಮ್ಯಾನ್ ಸಂಭ್ರಮಿಸುತ್ತಾ ವೂಟ್ ಕಿಡ್ಸ್ ಈಗ ಭಾರತದಲ್ಲಿ ಇನ್ನಾವುದೇ ಡಿಜಿಟಲ್ ಪ್ಲಾಟ್‌ಫಾರಂಗಿಂತಲೂ ಹೆಚ್ಚಿನ ಪೋಕಿ ಮ್ಯಾನ್ ವಿನೋದಕ್ಕೆ ಆದ್ಯತೆಯ ಪ್ಲಾಟ್‌ಫಾರಂ ಆಗಿದ್ದು ೨೧ ಚಲನ ಚಿತ್ರಗಳು ಮತ್ತು ೧೦,೦೦೦ಕ್ಕೂ ಹೆಚ್ಚು ನಿಮಿಷಗಳ ಪೋಕಿಮ್ಯಾನ್ ಅನಿಮಿ ಸೀರೀಸ್ ಕಂಟೆಂಟ್ ಇದೆ. ಪೋಕಿಮ್ಯಾನ್ ತನ್ನ ವಿಸ್ತರಣೆಯನ್ನು ವಿಡಿಯೋ ಗೇಮಿಂಗ್ ವಿಭಾಗದಲ್ಲಿ ಮಾತ್ರವಲ್ಲದೆ ಇತ್ತೀಚೆಗೆ ಪೋಕಿ ಮ್ಯಾನ್ ಯುನೈಟ್ ಎಂಬ ಮೊಬಾ ಗೇಮ್ ಅನ್ನು ನಿಂಟೆಡೊ ಸ್ವಿಚ್, ಆಂಡ್ರಾಯಿಡ್ ಮತ್ತು ಐಒಎಸ್ ಪ್ಲಾಟ್‌ ಫಾರಂಗಳಲ್ಲಿ ಆಡುವಂತೆ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಚಲನಚಿತ್ರಗಳು ಮತ್ತು ಪ್ರತಿಮಾತ್ಮಕ ಪಾತ್ರಗಳ ಸರಣಿಯು ಜಾಗತಿಕವಾಗಿ ಅಪಾರ ಅಭಿಮಾನಿಗಳನ್ನು ಪಡೆದಿದೆ.
ಭಾರತದಲ್ಲಿ ಮೊದಲ ಬಾರಿಗೆ ವೂಟ್ ಕಿಡ್ಸ್ ಪ್ರಸಾರ ಮಾಡುತ್ತಿರುವ ಈ ೨೧ ಪೋಕಿಮ್ಯಾನ್ ಚಲನಚಿತ್ರಗಳು ಅನಿಮಿ ಫ್ರಾಂಚೈಸಿಯನ್ನು ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿಸುವ ಮಹತ್ತರ ಕಂಟೆಂಟ್ ಉಪಕ್ರಮವಾಗಿದೆ. ವೂಟ್ ಕಿಡ್ಸ್ ಭಾರತದಲ್ಲಿ ತನ್ನ ಅಭಿಮಾನಿಗಳಿಗೆ ತಲ್ಲೀನಗೊಳಿಸುವ ಪೋಕಿಮ್ಯಾನ್ ಅನುಭವವನ್ನು ಪೋಕಿ ಮ್ಯಾನ್‌ನ ೨೧ ಜಾಗತಿಕ ಬ್ಲಾಕ್‌ಬಸ್ಟರ್ ಚಲನಚಿತ್ರಗಳು ಮತ್ತು ವಿಸ್ತಾರ ಕಂಟೆಂಟ್ ಲೈಬ್ರೆರಿ ಮೂಲಕ ನೀಡು ತ್ತಿದೆ.
ಮಕ್ಕಳ ವಿಭಾಗದಲ್ಲಿ ಈ ವಿನೂತನ ಬಗೆಯ ಕಂಟೆಂಟ್ ಉಪಕ್ರಮವು ‘ಚುನೊ ವೂಟ್ ಕಿಡ್ಸ್ ಚುನೊ ಪೋಕಿ ಮ್ಯಾನ್’ ಸುತ್ತಲೂ ಸುತ್ತುತ್ತದೆ. ಪ್ರತಿ ಪೋಕಿಮ್ಯಾನ್ ಅಭಿಮಾನಿಯೂ ವೂಟ್ ಕಿಡ್ಸ್ ಅನ್ನು ತಮ್ಮ ಅಚ್ಚುಮೆಚ್ಚಿನ ಡಿಜಿಟಲ್ ತಾಣವಾಗಿ ಆಯ್ಕೆ ಮಾಡಲಿದ್ದು ಅವರದೇ ಸ್ವಂತ ವಿವೇಚನೆಯಿಂದ ಆನಂದಿಸುತ್ತಾರೆ ಎಂಬ ವಿಶ್ವಾಸ ಹೊಂದಿದೆ.
ಈ ಉಪಕ್ರಮದ ಕುರಿತು ಎಸ್‌ವಿಒಡಿ(ವೂಟ್ ಸೆಲೆಕ್ಟ್, ವೂಟ್ ಕಿಡ್ಸ್ ಮತ್ತು ಇಂಟರ್‌ನ್ಯಾಷನ್ ಬ್ಯುಸಿನೆಸ್ ಅಟ್ ವೂಟ್೧೮ ಮುಖ್ಯಸ್ಥ ಫರ್ಜಾದ್ ಪಾಲಿಯಾ, ವೂಟ್ ಕಿಡ್ಸ್‌ನಲ್ಲಿ ನಾವು ನಮ್ಮ ಯುವ ವೀಕ್ಷಕರಿಗೆ ಶೇ.೧೦೦ರಷ್ಟು ಸುರಕ್ಷಿತ ಪರಿಸರದಲ್ಲಿ ಅವರ ಅಚ್ಚುಮೆಚ್ಚಿನ ಪಾತ್ರಗಳನ್ನು ಆನಂದಿ ಸಲು ಮತ್ತು ಕಲಿಯುವ ವಿನೋದ ಸೃಷ್ಟಿಸುವ ಗುರಿ ಹೊಂದಿದ್ದೇವೆ. ಈ ನಮ್ಮ ಪ್ರಯತ್ನವು ಕಳೆದ ವರ್ಷ ಕಿಡ್ಸ್ ಫನ್ ಲರ್ನ್ ವಿಭಾಗವು ಅಪಾರ ಬೇಡಿಕೆಯ ಪ್ರಗತಿಯನ್ನು ಕಂಡಿದ್ದರಿಂದ ಗಮನಾರ್ಹ ಉತ್ತೇಜನ ಪಡೆದಿದೆ. ವಿಸ್ತಾರ ಪೋಕಿಮ್ಯಾನ್ ಸ್ಲೇಟ್ ಅನ್ನು ನಮ್ಮ ಕಂಟೆಂಟ್ ರೆಪರ್ಟರಿಗೆ ಸೇರ್ಪಡೆ ಮಾಡುವುದು ನಮಗೆ ವೀಕ್ಷಕರನ್ನು ಮತ್ತಷ್ಟು ವಿಸ್ತರಿಸಲು ಮತ್ತು ಈ ವಿಭಾಗದ ನಾಯಕರಾಗುವುದನ್ನು ಮುಂದುವರಿಸುತ್ತದೆ ಎಂದರು.
ಈ ಪ್ರಾರಂಭ ಕುರಿತು ವೂಟ್ ಕಿಡ್ಸ್‌ನ ಹೆಡ್ ಆಫ್ ಕಂಟೆಂಟ್ ಅಶುತೋಷ್ ಪರೇಖ್, ವೂಟ್ ಕಿಡ್ಸ್‌ನಲ್ಲಿ ನಾವು ಜಾಗತಿಕ ಮತ್ತು ಸ್ಥಳೀಯ ಪಾತ್ರಗಳನ್ನು ಒಳಗೊಂಡ ಶಕ್ತಿಯುತ ಪಾತ್ರಗಳನ್ನು ರೂಪಿಸುವುದು ಮುಂದುವರಿಸುತ್ತಿದ್ದೇವೆ. ನಮ್ಮ ಪ್ಲಾಟ್‌ಫಾರಂನ ಪ್ರತಿ ಉಪಕ್ರಮದಲ್ಲೂ ಗ್ರಾಹಕರು ನಮ್ಮ ಹೃದಯದಲ್ಲಿದ್ದು ಇದು ಭಾರತದಲ್ಲಿ ಪೋಕಿಮ್ಯಾನ್ ಹೊಂದಿರುವ ಫ್ಯಾನ್‌ಡಂ ಮಕ್ಕಳು ಹಾಗೂ ಮಕ್ಕಳಂತಿರುವವರಿಂದ ಮತ್ತಷ್ಟು ಹೆಚ್ಚಾಗಿದೆ. ಈ ಜನಪ್ರಿಯ ಅನಿಮಿ ಫ್ರಾಂಚೈಸಿ ಹಲವು ವಿಸ್ತರಣೆಗಳೊಂದಿಗೆ ಇಂದಿನ ಡಿಜಿಟಲ್ ನೇಟಿವ್‌ಗಳಿಗೆ ತನ್ನ ಅತಿಶಯೋಕ್ತಿಯ ಕಥೆ ಮತ್ತು ಅತ್ಯುತ್ತಮವಾಗಿ ರೂಪಿಸಿದ ಪಾತ್ರಗಳು ಅವರ ಏಕೀಕರಿಸಿದ ಹಾಸ್ಯದೊಂದಿಗೆ ಸಾಹಸದ ಕ್ರಿಯೆಗಳು ಅತ್ಯಂತ ಪ್ರಸ್ತುತವಾಗಲಿದೆ.
ಈ ಬೃಹತ್ ಪೋಕಿಮ್ಯಾನ್ ಬ್ಲಿಟ್ಸ್ ೨೧ ಚಲನಚಿತ್ರಗಳು ಮತ್ತು ೧೦೦೦೦ ನಿಮಿಷಗಳ ಪೋಕಿಮ್ಯಾನ್ ಅನಿಮಿ ಸೀರೀಸ್ ಮೂಲಕ ವೂಟ್ ಕಿಡ್ಸ್ ಅನ್ನು ದೇಶದಲ್ಲಿ ಅತ್ಯಂತ ದೊಡ್ಡ ಡಿಜಿಟಲ್ ಹೋಮ್ ಆಗಿಸಲಿದೆ. ಆದ್ದರಿಂದಲೇ ನಾವು ವೂಟ್ ಕಿಡ್ಸ್‌ನಲ್ಲಿ ’ಗೊಟ್ಟಾ ಕ್ಯಾಚ್ ದೆಮ್ ಆಲ್’ ಎಂದು ದೊಡ್ಡ ದಾಗಿ ಹೇಳುತ್ತಿದ್ದೇವೆ’ ಎಂದರು.
ವೂಟ್ ಕಿಡ್ಸ್ ಜೊತೆಯಲ್ಲಿ ನಮ್ಮ ಸಹಯೋಗಕ್ಕೆ ಮತ್ತು ಚಲನಚಿತ್ರಗಳಿಂದ ಸೀಸನ್‌ಗಳವರೆಗೆ ಭಾರತದಲ್ಲಿ ಪೋಕಿಮ್ಯಾನ್ ಅಭಿಮಾನಿಗಳಿಗೆ ತರಲು ಬಹಳ ಉತ್ಸುಕರಾಗಿದ್ದೇವೆ. ಇದು ಪೋಕಿಮ್ಯಾನ್ ಅಭಿಮಾನಿಗಳಿಗೆ ಡಿಜಿಟಲಿ ಲಭ್ಯತೆಯು ಅಮೂಲ್ಯ ಸಂಪತ್ತಾಗಿದೆ ಮತ್ತು ಇದು ಅಭಿಮಾನಿಗಳೊಂದಿಗೆ ಆಳವಾದ ಬಾಂಧವ್ಯ ನಿರ್ಮಿಸಲು ನೆರವಾಗುತ್ತದೆ ಎಂದು ಭಾರತದಲ್ಲಿ ಪೋಕಿಮ್ಯಾನ್‌ನ ಮಾಸ್ಟರ್ ಲೈಸೆನ್ಸಿಂಗ್ ಏಜೆನ್ಸಿ ಡ್ರೀಮ್ ಥಿಯೇಟರ್‌ನ ಸಂಸ್ಥಾಪಕ ಮತ್ತು ಸಿಇಒ ಜಿಗ್ಗಿ ಜಾರ್ಜ್ ಹೇಳಿದರು.
ವೂಟ್ ಕಿಡ್ಸ್‌ನಲ್ಲಿ ನಮ್ಮ ಪಾಲುದಾರರ ಬೆಂಬಲದಿಂದ ನಾವು ಅಂತಿಮವಾಗಿ ಭಾರತದಲ್ಲಿ ೧-೨೧ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಶಕ್ತರಾ ಗಿದ್ದೇವೆ, ಭಾರತದಲ್ಲಿ ನಮ್ಮ ಅಭಿಮಾನಿಗಳಿಗೆ ಪೋಕಿಮ್ಯಾನ್‌ನ ವಿನೋದ ಮತ್ತು ಉತ್ಸಾಹವನ್ನು ಹಂಚಿಕೊಳ್ಳಲು ಥ್ರಿಲ್ ಆಗಿದ್ದೇವೆ. ವೂಟ್ ಕಿಡ್ಸ್ ಮತ್ತು ಟಿಪಿಸಿ ಇತರೆ ವಿನೋದಮಯ ಕೊಡುಗೆಗಳನ್ನು ಸಿದ್ಧಪಡಿಸುತ್ತಿವೆ. ಭಾರತದಲ್ಲಿ ಹೆಚ್ಚು ಅಭಿಮಾನಿಗಳು ಇದರ ಭಾಗವಾಗುತ್ತಾರೆ ಎಂಬ ಭರವಸೆ ನಮ್ಮದು ಎಂದು ಪೋಕಿಮ್ಯಾನ್ ಕಂಪನಿಯ ಕಾರ್ಪೊರೇಟ್ ಆಫೀಸರ್ ಸುಸುಮು ಫುಕುನಗ ಹೇಳಿದರು.
ವೂಟ್ ಕಿಡ್ಸ್ ಇಂದು ಅತ್ಯಂತ ದೊಡ್ಡ ಮತ್ತು ವಿಸ್ತಾರ ಬಹು ಮಾದರಿಯ ಕಿಡ್ಸ್ ಆಪ್ ಆಗಿ ಹೊರಹೊಮ್ಮಿದ್ದು ಮನರಂಜನೆ ಮತ್ತು ಮಕ್ಕಳನ್ನು ಅವರ ‘ಮೇಡ್ ಫಾರ್ ಕಿಡ್ಸ್’ ಕಾರ್ಯಸೂಚಿಯ ಮನರಂಜಿಸುವ ಮತ್ತು ಸಕ್ರಿಯವಾಗಿಸುವ ಉದ್ದೇಶ ಹೊಂದಿದೆ. ಪವರ್‌ಹೌಸ್ ಪ್ಲಾಟ್‌ಫಾರಂ ಆಗಿ ವೂಟ್ ಕಿಡ್ಸ್ ಶಕ್ತಿಯುತ ಕಥೆಗಳು ಮತ್ತು ಪಾತ್ರಗಳಲ್ಲಿ ಹೂಡಿಕೆ ಮುಂದುವರಿಸಿದ್ದು ವಿಸ್ತರಿಸಿದ ಮತ್ತು ತಲ್ಲೀನಗೊಳಿಸುವ ಕಂಟೆಂಟ್ ಅನುಭವವನ್ನು ಭಾರತದಲ್ಲಿ ಮಕ್ಕಳಿಗೆ ಒದಗಿಸುತ್ತದೆ.
