ಟಿಎಂಸಿಗೆ ಮರಳಿದ ರಾಜೀಬ್‌ ಬ್ಯಾನರ್ಜಿ
ಕೋಲ್ಕತ್ತ: ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದ ರಾಜೀಬ್‌ ಬ್ಯಾನರ್ಜಿ ಭಾನುವಾರ ಮತ್ತೆ ಟಿಎಂಸಿಗೆ ಮರಳಿದರು.
ಏಪ್ರಿಲ್‌- ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ರಾಜೀಬ್‌ ಬ್ಯಾನರ್ಜಿ ಸೋತಿದ್ದರು. ಬ್ಯಾನರ್ಜಿ ಅವರು ಈ ಹಿಂದಿನ ಮಮತಾ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿ ದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ತೊರೆದಿದ್ದ ಆಶಿಶ್ ದಾಸ್ ಸಹ ರಾಜೀಬ್ ಅವರೊಂದಿಗೆ ಟಿಎಂಸಿ ಸೇರಿದ್ದಾರೆ. ಆಶಿಶ್‌ ದಾಸ್‌ ಅವರು ತ್ರಿಪುರಾ ಬಿಜೆಪಿಯ ಮಾಜಿ ಮುಖಂಡರು.