10 ಸಾವಿರದ 423 ಹೊಸ ಕರೋನಾ ವೈರಸ್ ಪ್ರಕರಣ
ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,423 ಹೊಸ ಕರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ.
ಇದು 259 ದಿನಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ಜೊತೆಗೆ ಸೋಂಕಿನಿಂದಾಗಿ 443 ಸಾವುಗಳು ಸಂಭವಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ಹಂಚಿಕೊಂಡ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 15,021 ಚೇತರಿಕೆ ಗಳನ್ನು ಕಂಡಿದೆ.
ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇ.1 ಕ್ಕಿಂತ ಕಡಿಮೆಯಿವೆ. ಅವುಗಳು ಪ್ರಸ್ತುತ 0.45% ರಷ್ಟಿದ್ದರೆ, ಇದು ಮಾರ್ಚ್ 2020 ರಿಂದ ಕಡಿಮೆಯಾಗಿದೆ. ಭಾರತದಲ್ಲಿ, ಮಾರ್ಚ್ 2020 ರಲ್ಲಿ  ಸಾಂಕ್ರಾಮಿಕ ರೋಗದಿಂದ ಮೊದಲ ಸಾವು ವರದಿಯಾಗಿತ್ತು. ಸಾವಿನ ಸಂಖ್ಯೆ ಈಗ 4,58,880 ಆಗಿದೆ.