ಆಂಬ್ಯುಲೆನ್ಸ್’ನಲ್ಲಿ 200 ಕೆಜಿ ಗಾಂಜಾ ಕಳ್ಳ ಸಾಗಣೆ
ಚೆನ್ನೈ:ತಮಿಳುನಾಡಿನ ತಂಜಾವೂರಿನಲ್ಲಿ ಆಂಬ್ಯುಲೆನ್ಸ್’ನಲ್ಲಿ 200 ಕೆಜಿ ಗಾಂಜಾ ಕಳ್ಳ ಸಾಗಣೆ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ತಂಜಾವೂರು ಮೂಲಕ ಶ್ರೀಲಂಕಾಕ್ಕೆ ಅಪಾರ ಪ್ರಮಾಣದ ಗಾಂಜಾ ಸಾಗಾಟವಾಗುತ್ತಿರುವ ಬಗ್ಗೆ ಸುಳಿವು ಮೂಲಕ ನೀಡಿದ ಮಾಹಿತಿಯಂತೆ ಪೊಲೀಸರು ಶೋಧ ಕಾರ್ಯ ಆರಂಭಿಸಿ, ಆಂಬ್ಯುಲೆನ್ಸ್ ಅನ್ನು ತಡೆ ಹಿಡಿದಿದ್ದರು.
ವಿಚಾರಣೆ ವೇಳೆ, ಚಾಲಕ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದು, ಪೊಲೀಸರು ವಾಹನವನ್ನು ತಪಾಸಣೆ ನಡೆಸಿದಾಗ ಹಲವು ಚೀಲಗಳಲ್ಲಿ 200 ಕಿಲೋ ಗಾಂಜಾ ಪತ್ತೆಯಾಗಿದೆ. ವಿಚಾರಣೆ ವೇಳೆ ಶ್ರೀಲಂಕಾಕ್ಕೆ ಗಾಂಜಾ ಕಳ್ಳಸಾಗಣೆ ಮಾಡಲು ಪ್ರಯತ್ನಿಸು ತ್ತಿರುವುದು ಕಂಡುಬಂದಿದೆ.
ಚಾಲಕ ಕಳೆದ 15 ವರ್ಷಗಳಿಂದ ಆಂಬುಲೆನ್ಸ್ ಸೇವೆಯಲ್ಲಿದ್ದು, ಮೂರು ತಿಂಗಳಿಂದ ಗಾಂಜಾ ಸಾಗಣೆಯಲ್ಲಿ ಭಾಗಿಯಾಗಿದ್ದನು ಎಂದು ತಿಳಿದು ಬಂದಿದೆ.