13,091 ಸೋಂಕಿನ ಪ್ರಕರಣಗಳು ದೃಢ
ನವದೆಹಲಿ:ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 13,091 ಸೋಂಕಿನ ಪ್ರಕರಣಗಳು ವರದಿಯಾಗಿದೆ. ಪ್ರಕರಣಗಳ ಸಂಖ್ಯೆ ಈಗ 3,44,01,670 ಆಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 340 ಸಾವುಗಳು ದಾಖಲಾಗಿವೆ.
ಆದಾಗ್ಯೂ ಸಕ್ರಿಯ ಕೇಸ್ ಲೋಡ್, 1,38,556 ರಷ್ಟಿದೆ.  ನವೆಂಬರ್ 10 ರವರೆಗೆ 61,99,02,064 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 11,89,470 ಮಾದರಿಗಳನ್ನು ಬುಧವಾರ ಪರೀಕ್ಷಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 13,878 ಚೇತರಿಕೆಗಳು ದಾಖಲಾಗಿವೆ, ಒಟ್ಟು ಚೇತರಿಕೆ ಪ್ರಮಾಣ 3,38,00,925 ಕ್ಕೆ ಏರಿದೆ.