ಭಾರಿ ಮಳೆ: ಸಂಜೆಯವರೆಗೆ ವಿಮಾನಗಳ ಲ್ಯಾಂಡಿಂಗ್‌ಗೆ ನಿರ್ಬಂಧ
ಚೆನ್ನೈ:ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವ್ಯಾಪಕ ಅನಾನು ಕೂಲ ಉಂಟಾಗಿದ್ದು, ಭಾರಿ ಮಳೆ ಮತ್ತು ಗಾಳಿ ಪರಿಣಾಮ ಸಂಜೆ 6ರವರೆಗೂ ವಿಮಾನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಚೆನ್ನೈ ವಿಮಾನ ನಿಲ್ದಾಣವು ಮಧ್ಯಾಹ್ನ 1.15 ರಿಂದ ಸಂಜೆ 6 ರವರೆಗೆ ಆಗಮಿಸುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದ್ದು, ನಿರ್ಗಮನವು ನಿಗದಿತವಾಗಿ ಮುಂದು ವರಿಯುತ್ತದೆ ಎಂದು ಟ್ವೀಟ್ ಮಾಡಿದೆ. ಪ್ರಯಾಣಿಕರ ಸುರಕ್ಷತೆಯ ಅಂಶ ಹಾಗೂ ಗಾಳಿಯ ತೀವ್ರತೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶ ಕರು ತಿಳಿಸಿದ್ದಾರೆ.