ಆಗಸ್ಟ್ 31, 2024ವರೆಗೂ ಎನ್‌ಸಿಬಿ ಮುಖ್ಯಸ್ಥರಾಗಿ ಎಸ್‌.ಎನ್‌.ಪ್ರಧಾನ್‌ ನೇಮಕ
ನವದೆಹಲಿ:ಹಿರಿಯ ಐಪಿಎಸ್ ಅಧಿಕಾರಿ ಸತ್ಯ ನಾರಾಯಣ್ ಪ್ರಧಾನ್ ಅವರನ್ನು ಆಗಸ್ಟ್ 31, 2024 ಹಾಗೂ ಮುಂದಿನ ಆದೇಶ ದವರೆಗೂ ನಾರ್ಕೋ ಟಿಕ್ಸ್ ಕಂಟ್ರೋಲ್ ಬ್ಯೂರೋ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಜಾರ್ಖಂಡ್ ಕೇಡರ್ ನ 1988ರ ಬ್ಯಾಚಿನ ಐಪಿಎಸ್ ಅಧಿಕಾರಿ ಪ್ರಧಾನ್, ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ-ಎನ್ ಡಿಆರ್ ಎಫ್ ಮಹಾ ನಿರ್ದೇಶಕ ಜವಾಬ್ದಾರಿ ಹೊಂದಿದ್ದರೂ ಹೆಚ್ಚುವರಿಯಾಗಿ ಎನ್’ಸಿಬಿ ಮುಖ್ಯಸ್ಥ ಸ್ಥಾನ ನೀಡಲಾಗಿದೆ.
ರಾಕೇಶ್ ಅಸ್ಥಾನ ಅವರು, ದೆಹಲಿ ಪೊಲೀಸ್ ಕಮೀಷನರ್ ಆಗಿ ನೇಮಕವಾದ ನಂತರ ಎನ್ ಸಿಬಿ ಮಹಾನಿರ್ದೇಶಕರಾಗಿ ಹೆಚ್ಚು ವರಿ ಜವಾಬ್ದಾರಿ ನೀಡಲಾಗಿದೆ. ಎನ್ ಡಿಆರ್ ಎಫ್ ಮಹಾನಿರ್ದೇಶಕ ಹುದ್ದೆಯನ್ನು ಕೂಡಲೇ ತೊರೆಯುವಂತೆ ಕೇಂದ್ರ ಗೃಹ ಸಚಿವಾಲಯ ಪ್ರಧಾನ್ ಅವರಿಗೆ ಮನವಿ ಮಾಡಿದೆ.