ಪಬ್ಜಿ ಹಾವಳಿ: ಬಾಲಕರು ಗೂಡ್ಸ್ ರೈಲಿಗೆ ಸಿಲುಕಿ ಸಾವು
ಮಥುರಾ:ಮಥುರಾದ ಲಕ್ಷ್ಮಿ ನಗರದಲ್ಲಿನ ಮಥುರಾ-ಕಾಸ್‌ಗಂಜ್ ಸಿಂಗಲ್ ಟ್ರ್ಯಾಕ್‌ನಲ್ಲಿ ಇಬ್ಬರು ಬಾಲಕರು ಗೂಡ್ಸ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಹುಡುಗರು ಪಬ್ಜಿ ಆಡುವುದರಲ್ಲಿ ಮಗ್ನರಾಗಿದ್ದರು. ಆಟವಾಡುತ್ತಾ ರೈಲು ಹಳಿ ದಾಟುವಾಗ ರೈಲು ಬರುವ ಸೂಚನೆ ಗಮನಿಸದೆ ಇದ್ದುದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಎರಡೂ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಮುನಾಪರ್ ಪೊಲೀಸ್ ಠಾಣೆಯ ಶಶಿ ಪ್ರಕಾಶ್ ಸಿಂಗ್ ಹೇಳಿದ್ದಾರೆ.
ಮೃತರನ್ನು 14 ವರ್ಷದ ಗೌರವ್ ಕುಮಾರ್ ಮತ್ತು ಕಪಿಲ್ ಕುಮಾರ್ ಎಂದು ಗುರುತಿಸಲಾಗಿದೆ. ರೈಲು ಹಳಿ ಮೇಲೆ ಶವ ಬಿದ್ದಿರುವ ಬಗ್ಗೆ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆನ್‌ಲೈನ್ ಗೇಮ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕಪಿಲ್ ತಂದೆ ಸಂಜಯ್ ಕುಮಾರ್ ಹೇಳಿದ್ದಾರೆ.