ಪಠಾಣ್‌ಕೋಟ್‌: ಅಪರಿಚಿತ ವ್ಯಕ್ತಿಗಳಿಂದ ಗ್ರೆನೇಡ್ ಸ್ಫೋಟ
ಪಂಜಾಬ್​​: ಪಠಾಣ್‌ಕೋಟ್‌ನ ಭಾರತೀಯ ಸೇನೆಯ ತ್ರಿವೇಣಿ ಗೇಟ್‌ನಲ್ಲಿ ಸೋಮವಾರ ಬೆಳಿಗ್ಗೆ ಗ್ರೆನೇಡ್ ಸ್ಫೋಟ ಸಂಭವಿಸಿದೆ.
ಸ್ಫೋಟ ಸಂಭವಿಸಿರುವ ಸ್ಥಳದಲ್ಲಿ ಮದುವೆ ಮೆರವಣಿಗೆ ಸಾಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗೇಟ್ ಬಳಿ ಗ್ರೆನೇಡ್ ಎಸೆದು ಪರಾರಿ ಯಾಗಿದ್ದಾರೆಂದು ವರದಿಯಾಗಿದೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಧಾವಿ ಸಿದ್ದು, ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪಠಾಣ್‌ ಕೋಟ್‌ನ ಎಲ್ಲಾ ಪೊಲೀಸ್ ಚೆಕ್‌ಪೋಸ್ಟ್‌ಗಳ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಯಾವುದೇ ಗಾಯಗಳು ವರದಿಯಾಗಿಲ್ಲ. ಸ್ಥಳಕ್ಕೆ ಧಾವಿಸಿರುವ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದ ಗ್ರೆನೇಡ್‌ನ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.