ಕರೋನಾ ಬ್ರೇಕಿಂಗ್: 7,579 ಜನರಲ್ಲಿ ಸೋಂಕು ಪತ್ತೆ
ನವದೆಹಲಿ:ಕರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ 7,579 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 543 ದಿನಗಳಲ್ಲೇ ಪತ್ತೆಯಾದ ಅತಿ ಕಡಿಮೆ ಸೋಂಕಿತರ ಸಂಖ್ಯೆಯಾಗಿದೆ.
ಒಂದೇ ದಿನದಲ್ಲಿ 236 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೋವಿಡ್ ಗೆ ಮೃತಪಟ್ಟವರ ಸಂಖ್ಯೆ 466147 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 113584 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 12202 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.
ದೇಶದಲ್ಲಿ ಈವರೆಗೆ ಒಟ್ಟು 1,17,63,73,499 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.