ಫೋಟೊ ಜರ್ನಲಿಸ್ಟ್ ಅತ್ಯಾಚಾರ ಪ್ರಕರಣ: ಕಾಮುಕರಿಗೆ ಜೀವಾವಧಿ ಶಿಕ್ಷೆ
ಮುಂಬೈ:ಸೆಂಟ್ರಲ್ ಮುಂಬೈನ ಶಕ್ತಿ ಮಿಲ್ಸ್ ಕಾಂಪೌಂಡ್‌ನಲ್ಲಿ 22 ವರ್ಷದ ಫೋಟೊ ಜರ್ನಲಿಸ್ಟ್ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ (2013)ದಲ್ಲಿ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಈ ಮೊದಲು ಮರಣದಂಡನೆ ಶಿಕ್ಷೆಗೆ ಗುರಿಪಡಿಸಲಾಗಿತ್ತು.
ಅಪರಾಧಕ್ಕೆ ಪಶ್ಚಾತ್ತಾಪ ಪಡಲು ಜೀವಾವಧಿ ಶಿಕ್ಷೆಗೆ ಅರ್ಹರು ಎಂದು ನ್ಯಾಯಮೂರ್ತಿಗಳಾದ ಸಾಧನಾ ಜಾಧವ್ ಮತ್ತು ಪೃಥ್ವಿರಾಜ್ ಚವಾಣ್ ಅವರ ವಿಭಾಗೀಯ ಪೀಠ ಹೇಳಿದೆ.
ಅಪರಾಧಿಗಳಾದ ವಿಜಯ್ ಜಾಧವ್, ಮೊಹಮ್ಮದ್ ಖಾಸಿಮ್ ಶೇಖ್ ಮತ್ತು ಮೊಹಮ್ಮದ್ ಅನ್ಸಾರಿ ಅವರಿಗೆ ಈ ಹಿಂದೆ ವಿಧಿಸಿದ ಮರಣದಂಡನೆಯನ್ನು ದೃಢೀಕರಿಸಲು ನಿರಾಕರಿಸಿ ಅವರ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿತು.