ಮೊರೊಕ್ಕೊಗೆ ಭಾರತದ ಜೊತೆಗೆ ದ್ವಿಪಕ್ಷೀಯ ವ್ಯಾಪಾರ ವರ್ಧನೆಗೆ ಸಹಕರಿಸಲಿದೆ ‘ಮೊರೊಕ್ಕೊ ನೌ’ 
‘ಮೊರೊಕ್ಕೊ ನೌ’ ಮೂಲಕ ಭಾರತದ ಜೊತೆಗೆ ದ್ವಿಪಕ್ಷೀಯ ವ್ಯಾಪಾರ ವರ್ಧನೆಗೆ ಎದುರು ನೋಡುತ್ತಿರುವ ಮೊರೊಕ್ಕೊ
ನವದೆಹಲಿ:ತಮ್ಮ ದೇಶದಲ್ಲಿ ಹೂಡಿಕೆಗಳನ್ನು ಮತ್ತು ಆ ದೇಶದಿಂದ ರಫ್ತುಗಳನ್ನು ಪ್ರೋತ್ಸಾಹಿಸುವ ‘ಮೊರೊಕ್ಕೊ ನೌ’ ಎಂಬ ರಾಷ್ಟ್ರೀಯ ಬ್ರಾಂಡ್ ಮೂಲಕ ಭಾರತ ಮತ್ತು ಮೊರೊಕ್ಕೊ ಸಾಮ್ರಾಜ್ಯಗಳ ನಡುವೆ ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸುವು ದಕ್ಕಾಗಿ ಮೊರೊಕ್ಕೊ ಸಾಮ್ರಾಜ್ಯದ ಉನ್ನತ ನಿಯೋಗವೊಂದು ಬೆಂಗಳೂರಿನಿಂದ ಆರಂಭಿಸಿ ಆರು ದಿನಗಳ ಭಾರತ ಪ್ರವಾಸಕೈಗೊಂಡಿದೆ.
ಭಾರತೀಯ ಗಣರಾಜ್ಯಕ್ಕೆ ಮೊರೊಕ್ಕೊ ಸಾಮ್ರಾಜ್ಯದ ಮಹಾರಾಜರ ರಾಯಭಾರಿ ಯಾಗಿರುವ ಗೌರವಾನ್ವಿತ ಮೊಹಮ್ಮದ್ ಮಲಿಕಿ ಅವರು ಈ ನಿಯೋಗದ ನಾಯಕತ್ವ ವಹಿಸಿದ್ದು, ಈ ನಿಯೋಗದಲ್ಲಿ ಎಎಂಡಿಐಇನ ಪ್ರಧಾನ ನಿರ್ದೇಶಕ(ಸಿಇಒ)ರಾದ ಯುಸೆಫ್ ಎಲ್ ಬಾರಿ, ಎಎಂಡಿಐಇನ ಹೂಡಿಕಾ ನಿರ್ದೇಶರು ಮತ್ತು ಚಾಲನಾ ಸಮಿತಿಯ ಸದಸ್ಯರಾದ ಶ್ರೀಮತಿ ಆಯ್ದಾ ಫಾತಿ, ಹಿಚಾಮ್ ಬಾಯರ್, ಭಾರತದಲ್ಲಿ ಮೊರೊಕ್ಕೊ ಸಾಮ್ರಾಜ್ಯದ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ, ಎಎಂಡಿಐಇನ ಕರಮ್ ಲಾಹ್ಲು, ಮತ್ತು ಎಎಂಡಿಐಇನ ಶ್ರೀಮತಿ ಇಲ್ಹಾಮ್ ಫದ್ಲಾ ಲ್ಲಾಹ್ ಸೇರಿದ್ದರು.
ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಮತ್ತು ಇತರೆ ವೃತ್ತಿಪರರ ಜೊತೆಗೆ ಸರಣಿ ಸಭೆ ಗಳನ್ನು ಈ ನಿಯೋಗ ನಡೆಸಲಿದೆ. ‘ಮೊರೊಕ್ಕೊ ನೌ’ ರೋಡ್‍ಶೋಗಳನ್ನು ಮುಂಬೈ ಮತ್ತು ದಿಲ್ಲಿಗಳಲ್ಲಿ ಕೂಡ ನಡೆಸಲಾಗುವುದು. ಜೊತೆಗೆ ಈ ನಗರಗಳಲ್ಲೂ ಕೂಡ ಇದೇ ರೀತಿಯ ಸರಣಿ ಸಭೆಗಳನ್ನು ನಡೆಸಲಾಗುವುದು.
“ಮಹಾರಾಜ ಮೊಹಮ್ಮದ್ ಗಿ ಅವರ ನಾಯಕತ್ವದ ಅಡಿಯಲ್ಲಿ ಮೊರೊಕ್ಕೊ ದೇಶ ಮುಂಚೂಣಿಯ ಪ್ರಾದೇಶಿಕ ಕೈಗಾರಿಕಾ ಮತ್ತು ರಫ್ತು ವೇದಿಕೆಯಾಗಿ ಸ್ಥಾನ ಪಡೆದಿದೆ. ಇದರಲ್ಲಿ ವಾಹನ ಕ್ಷೇತ್ರ ಸೇರಿದ್ದು, ಇದು ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ನವೀಕರಿಸಬಹುದಾದ ಶಕ್ತಿಗಳನ್ನು ಪ್ರೋತ್ಸಾಹಿಸುವ ಹೂಡಿಕೆಯ ಗುರಿಯಾಗಿ ಮೊರೊಕ್ಕೊವನ್ನು ಸ್ಥಿರಗೊಳಿಸಲು ನಾವು ‘ಮೊರೊಕ್ಕ ನೌ’ ಬ್ರಾಂಡನ್ನು ಸೃಷ್ಟಿಸಿದೆವು. ಜೊತೆಗೆ 54 ಮುಕ್ತ ಮಾರಾಟ ಒಪ್ಪಂದಗಳೊಂದಿಗೆ ಒಂದು ಶತಕೋಟಿಗೂ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಮಾರುಕಟ್ಟೆಗೆ ವಿಶೇಷ ಸವಲತ್ತಿನ ಸಂಪರ್ಕವನ್ನು ತೆರೆದುಕೊಂಡಿದೆ. ಸುಸ್ಥಿರತೆ, ಸ್ಪರ್ಧಾ ತ್ಮಕತೆ, ಯಶಸ್ಸಿನ ಖಾತ್ರಿಗಳು ಮತ್ತು ಚುರುಕುತನಗಳು ಬೆರಾಂಡ್ ‘ಮೊರೊಕ್ಕೊ ನೌ’ವನ್ನು ಅತ್ಯುತ್ತಮವಾಗಿ ನಿರೂ ಪಿಸುತ್ತವೆ. ಯುರೋಪ್ ಮತ್ತು ಆಖ್ರಿಕಾಗಳಿಗೆ ಮೊರೊಕ್ಕೊ ಪ್ರವೇಶದ್ವಾರ ಎಂದು ಪರಿಗಣಿಸಬಹುದು.
ಅಂತಾರಾಷ್ಟ್ರೀಯ ವ್ಯಾಪಾರವನ್ನು ಅಭಿವೃದ್ಧಿ ಪಡಿಸಲು ಮೊರೊಕ್ಕೊ ಸಾಮ್ರಾಜ್ಯ ಕೈಗೊಂಡ ಸತತ ಪ್ರಯತ್ನಗಳ ಫಲಿತಾಂಶ ಇದಾಗಿದೆ. ವ್ಯವಹಾರ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ನಾವು ಸತತವಾಗಿ ಪ್ರಗತ್ಯಾತ್ಮಕ ಮತ್ತು ಮುನ್ನಡೆಯ ದೂರದೃಷ್ಟಿ ಹೊಂದಿರುವ ನೀತಿಗಳ್ನು ಪರಿಚಯಿಸುತ್ತಿದ್ದೇವೆ. ಈ ದೇಶಕ್ಕೆ ಉತ್ತಮ ರಸ್ತೆ, ಸಮುದ್ರ ಮತ್ತು ವಾಯು ಮಾರ್ಗಗಳ ಸಂಪರ್ಕವಿದೆ. ಮೊರೊಕ್ಕೊ ಮತ್ತು ಭಾರತದ ದೇಶಗಳು ಅತ್ಯಂತ ದೃಢವಾದ ಕೈಗಾರಿಕಾ ಸಾಮಥ್ರ್ಯ ಹೊಂದಿದ್ದು, ಎರಡೂ ದೇಶಗಳು ಪರಸ್ಪರ ಪೂರಕವಾಗಿವೆ’’ ಎಂದು ಭಾರತೀಯ ಗಣರಾಜ್ಯಕ್ಕೆ ಮೊರೊಕ್ಕೊ ಸಾಮ್ರಾಜ್ಯದ ಮಹಾರಾಜರ ರಾಯಭಾರಿಯಾಗಿರುವ ಗೌರ ವಾನ್ವಿತ ಮೊಹಮ್ಮದ್ ಮಲಿಕಿ ಹೇಳಿದರು.
‘ಮೊರೊಕ್ಕೊ ನೌ’ ಭಾರತ ಹಾಗೂ ಮೊರೊಕ್ಕೊಗಳ ನಡುವೆ ದ್ವಿಪಕ್ಷೀಯ ವ್ಯಾಪಾರಕ್ಕೆ ಚಾಲನೆ ನೀಡುವ ನಿರೀಕ್ಷೆ ಇದೆ. ಉಭಯ ದೇಶಗಳ ನಡುವೆ ಪ್ರಸ್ತುತ ವ್ಯವಹಾರ 2.1 ಶತಕೋಟಿ ಅಮೇರಿಕನ್ ಡಾಲರ್‍ಗಳಷ್ಟಿದ್ದು ಇದಕ್ಕೆ ‘ಮೊರೊಕ್ಕೊ ನೌ’ ಮತ್ತಷ್ಟು ಚಾಲನೆ ನೀಡುವ ನಿರೀಕ್ಷೆ ಇದೆ. ವಾಹನ, ಜವಳಿ, ಔಷಧ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಸಾಯನಿಕ ಉತ್ಪನ್ನಗಳು ಮುಂತಾದ ವಿಭಿನ್ನ ಕ್ಷೇತ್ರಗಳಲ್ಲಿ ಮೊರೊಕ್ಕೊಗೆ ಭಾರತದಿಂದ ರಫ್ತು ನಡೆಯುತ್ತಿದ್ದು, ಮೊರೊಕ್ಕೊದಿಂದ ಭಾರತಕ್ಕೆ ಪ್ರಧಾನ ವಾಗಿ ಫಾಸ್ಫೇಟ್ ಮತ್ತು ಪೊಟ್ಯಾಷ್‍ಗಳು ಆಮದಾಗುತ್ತಿವೆ.
“ಭಾರತದಲ್ಲಿ ಹಾಜರಿ ಹೆಚ್ಚಿಸಲು ನಾವು ಒಂದು ರಾಷ್ಟ್ರೀಯ ಯೋಜನೆ ಹೊಂದಿದ್ದೇವೆ. ಪ್ರಸ್ತುತ ನಾವು ಮುಂಬೈ ಮತ್ತು ಕೋಲ್ಕೊತಾಗಳಲ್ಲಿ ರಾಯಭಾರ ಕಚೇರಿಗಳನ್ನು ಹೊಂದಿದ್ದು, ಬೆಂಗಳೂರುವಿನಲ್ಲಿ ಒಂದು ಕಚೇರಿ ಆರಂಭಿಸುವ ಕೆಲಸದಲ್ಲಿ ದ್ದೇವೆ. ಒಂದಾಗಿ ನಾವು ಬೆಳೆಯುವ ಗುರಿ ಹೊಂದಿದ್ದು, 2025ರ ಹೊತ್ತಿಗೆ ಭಾರತವನ್ನು ನಾವು ನಮ್ಮ ಅಗ್ರ 10 ಪಾಲುದಾರರಲ್ಲಿ ಒಂದಾಗಿಸುವ ಗುರಿ ಹೊಂದಿದ್ದೇವೆ.
ಸಂಭಾವ್ಯ ಹೂಡಿಕೆದಾರರು ಯಾವುದೇ ನಗರದಲ್ಲಿದ್ದರೂ ಅಲ್ಲಿಂದಲೇ ವೀಸಾಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಬಹುದಾದ ರೀತಿಯಲ್ಲಿ ನಾವು ವೀಸಾ ಸೇವೆಗಳನ್ನು ಹೊರಗುತ್ತಿಗೆ ನೀಡಿದ್ದೇವೆ. ಒಂದು ವರ್ಷದವರೆಗಿನ ಮಲ್ಟಿಪಲ್ ವೀಸಾಗಳನ್ನು 3ರಿಂದ 5ದಿನಗಳ ಒಳಗೆ ನೀಡಬಹುದಾದ ವ್ಯವಸ್ಥೆ ಇರುತ್ತದೆ” ಎಂದು ಭಾರತೀಯ ಗಣರಾಜ್ಯಕ್ಕೆ ಮೊರೊಕ್ಕೊ ಸಾಮ್ರಾಜ್ಯದ ಮಹಾರಾಜರ ರಾಯಭಾರಿ ಗೌರವಾನ್ವಿತ ಮೊಹಮ್ಮದ್ ಮಲಿಕಿ ಹೇಳಿದರು.
“ಸಾಮ್ರಾಜ್ಯದ ಎಲ್ಲೆಡೆಗಳಲ್ಲಿ ಹರಡಿರುವಂತೆ ವಿಸ್ತಾರವಾದ ಶ್ರೇಣಿಯ ಕೈಗಾರಿಕಾ ವೇಗೋತ್ಕರ್ಷಕ ವಲಯಗಳನ್ನು ಮೊರೊಕ್ಕೊ ಸ್ಥಾಪಿಸಿದೆ. ಇವು ವಿದೇಶಿ ಹೂಡಿಕೆದಾರರಿಗೆ ಹಲವಾರು ಲಾಭಗಳನ್ನು ಸಾದರಪಡಿಸುತ್ತವೆ. ಇವುಗಳಲ್ಲಿ ಮೊದಲ ಐದು ವರ್ಷಗಳ ಕಾರ್ಯಾಚರಣೆ ಸಂದರ್ಭದಲ್ಲಿ ಕಾರ್ಪೊರೇಟ್ ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಅಲ್ಲದೇ ನಂತರದ ವರ್ಷ ಗಳಲ್ಲಿ ನಿಗದಿತ ಶೇ. 15ರಷ್ಟು ತೆರಿಗೆಗಳು ಸೇರಿರುತ್ತವೆ. ಇತರೆ ತೆರಿಗೆ ಲಾಭಗಳಲ್ಲಿ ಮೊದಲ 15 ಸತತ ವರ್ಷಗಳ  ಕಾರ್ಯಾಚರಣೆ ಯಲ್ಲಿ ವೃತ್ತಿ ತೆರಿಗೆಯಲ್ಲಿ ವಿನಾಯಿತಿ, ಕೈಗಾರಿಕಾ ವೇಗೋತ್ಕರ್ಷಕ ವಲಯಗಳ ನಡುವೆ ಅಥವಾ ಅವುಗಳ ಒಳಗೆ ನಡೆಸಲಾಗುವ ಕಾರ್ಯಾಚರಣೆಗಳೀಗೆ ವ್ಯಾಟ್‍ನಿಂದ ರಿಯಾಯಿತಿ ಮತ್ತು ಕೈಗಾರಿಕಾ ವೇಗೋತ್ಕರ್ಷಕ ವಲಯಗಳ ಹೊರಗೆ ನಡೆಸುವ ಚಟುವಟಿಕೆಗಳಿಂದ ಬಂದ ಲಾಭಾಂಶಗಳ ಮೇಲಿನ ತೆರಿಗೆಯನ್ನು ತಡೆಹಿಡಿಯುವಲ್ಲಿ ವಿನಾಯಿತಿ ಸೇರಿವೆ.
ಲಾಭಾಂಶಗಳು ಮತ್ತು ಶೇರುದಾರರ ಸಾಲಗಳಿಂದ ಸೃಷ್ಟಿಯಾಗುವ ಬಡ್ಡಿಗಳಂತಹ, ಮೊರೊಕ್ಕೊದಲ್ಲಿ ನಡೆಸಲಾದ ವಿದೇಶಿ ಹೂಡಿಕೆಗಳಿಂದ ಉತ್ಪತ್ತಿಯಾಗುವ ಆದಾಯಗಳಿಗೆ ವಿದೇಶಿ ವಿನಿಮಯ ವರ್ಗಾವಣೆಗೂ ನಾವು ಅವಕಾಶ ಮಾಡಿಕೊಡುತ್ತೇವೆ. ಕೈಗಾರಿಕಾ ವೇಗೋತ್ಕರ್ಷಕ ವಲಯಗಳಲ್ಲಿರುವ ಕಂಪನಿಗಳಿಗೆ ಎಲ್ಲ ತೆರಿಗೆಗಳ ವಿನಾಯಿತಿಯಿಂದ ಲಾಭ ನೀಡುವಂತಹ ವಿಶೇಷ ಸೀಮಾ ಶುಲ್ಕ ಆಡಳಿತ ಕ್ರಮವನ್ನು ಕೂಡ ಸ್ಥಾಪಿಸಲಾಗಿದೆ. ಈ ಲಾಭಗಳಲ್ಲಿ ಆಮದು, ಬಳಕೆ, ಉತ್ಪಾದನೆ ಅಥವಾ ರಫ್ತುಗಳ ಮೇಲಿನ ಸರ್‍ಚಾರ್ಜ್ ಅಥವಾ ತೆರಿಗೆ ವಿನಾಯಿತಿ ಸೇರಿರುತ್ತವೆ.
ವ್ಯವಹಾರಗಳಲ್ಲಿ ನಮ್ಮ ಪ್ರಮುಖ ಗಮನದ ಕೇಂದ್ರಗಳಲ್ಲಿ ವೈಮಾನಿಕ, ಜವಳಿ, ಕೃಷಿ-ಆಹಾರ, ಔಷಧ ಮತ್ತು ಹೊರಗುತ್ತಿಗೆ ಕ್ಷೇತ್ರಗಳು ಸೇರಿರುತ್ತವೆ. ಮೊರೊಕ್ಕೊದ ಮಾನವ ಬಂಡವಾಳದ ಗುಣಮಟ್ಟ, ದೃಢವಾದ ಹಣಕಾಸು ಬೆಂಬಲ, ಸ್ಥಿರ ರಾಜಕೀಯ ಮತ್ತು ಆರ್ಥಿಕ ವಾತಾವರಣಗಳು ನಮ್ಮ ದೇಶವನ್ನು ಆಕರ್ಷಕ ಹೂಡಿಕೆ ಕೇಂದ್ರವಗ್ನಾಗಿ ಮಾಡುತ್ತವೆ” ಎಂದು ಎಎಂಡಿಐಇನ ಪ್ರಧಾನ ನಿರ್ದೇಶಕರಾದ ಯುಸೆಫ್ ಎಲ್ ಬಾರಿ ಹೇಳಿದರು.
ಮೊರೊಕ್ಕೋದಲ್ಲಿ ಈಗಾಗಲೇ ಕನಿಷ್ಠ 35 ಭಾರತೀಯ ಸಂಸ್ಥೆಗಳು ವಹಿವಾಟು ಸ್ಥಾಪಿಸಿದ್ದು ಅವುಗಳಲ್ಲಿ, ವರೊಕ್ ಲೈಟಿಂಗ್ ಸಿಸ್ಟಮ್ಸ್, ಸ್ಟೀಲ್ ಸ್ಟ್ರಿಪ್ ವೀಲ್ಸ್, ಮಹೀಂದ್ರ ಮತ್ತು ಮಹೀಂದ್ರ(ಎಂ&ಎಂ), ಟಾಟಾ ಹಿಸ್ಪಾನೊ ಮೋಟಾರ್ಸ್ ಕಾರೋಸೆರಾ, ಇಂಡಿಯನ್ ಮೋಟಾರ್ಸ್ ಮತ್ತು ಸನ್ ಫಾರ್ಮಾಸೂಟಿಕಲ್ಸ್ ಮೊರೊಕ್ಕೊ ಸೇರಿವೆ. ಮೊರೊಕ್ಕೊದ ನಾಲ್ಕನೇ ಅತ್ಯಂತ ದೊಡ್ಡ ವ್ಯಾಪಾರ ಪಾಲುದಾರ ಭಾರತ ದೇಶವಾಗಿದೆ. 2021ರ ಮೊದಲರ್ಧದಲ್ಲಿ ಮೊರೊಕ್ಕೊ ದೇಶಕ್ಕೆ ಭಾರತ 13ನೇ ಅತ್ಯಂತ ದೊಡ್ಡ ಪೂರೈಕೆದಾರ ರಾಷ್ಟ್ರವಾಗಿದೆ.
ಈ ಪ್ರಕಟಣೆ ಕುರಿತು ಹೆಚ್ಚಿನ ಮಾಹಿತಿ/ಸ್ಪಷ್ಟೀಕರಣಗಳಿಗೆ ಸಂಪರ್ಕಿಸಿ:ಬೋಸ್ ಕಮ್ಯೂನಿಕೇಷನ್ಸ್: ಸಂಜಯ್ ಬೋಸ್ +91 99452 66885 ಅಥವಾ ವೇಲು +91 99869 38281