ಸೂಪರ್ ಸ್ಟಾರ್ ರಜನಿಕಾಂತ್ ಭೇಟಿಯಾದ ವಿಕೆ ಶಶಿಕಲಾ
ಚೆನ್ನೈ:ತಮಿಳುನಾಡು ರಾಜಕೀಯಕ್ಕೆ ಹಿಂದಿರುಗಿರುವ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿಕೆ ಶಶಿಕಲಾ ಅವರುಮಂಗಳವಾರ ಸೂಪರ್ ಸ್ಟಾರ್ ರಜನಿಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಚೆನ್ನೈನ ಪೋಯಸ್ ಗಾರ್ಡನ್ ನಲ್ಲಿರುವ ರಜನಿಕಾಂತ್ ನಿವಾಸಕ್ಕೆ ಭೇಟಿ ನೀಡಿದ್ದು, ಅವರನ್ನು ರಜನಿ ಕಾಂತ್ ಮತ್ತು ಲತಾ ದಂಪತಿ ಸ್ವಾಗತಿಸಿದರು.
ರಜನಿಕಾಂತ್ ಮತ್ತು ವಿಕೆ ಶಶಿಕಲಾ ಸಾಕಷ್ಟು ವಿಚಾರವಾಗಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ರಜನಿಕಾಂತ್ ಅವರಿಗೆ ದಾದಾ ಸಾಹೆಬ್ ಫಾಲ್ಕೆ ಪ್ರಶಸ್ತಿ ಲಭಿಸಿದ ಕುರಿತು ಶುಭ ಕೋರಿದ್ದಾರೆ. ಅಲ್ಲದೆ ರಜನಿ ಅವರ ಆರೋಗ್ಯ ಮತ್ತು ಸಿನಿಮಾಗಳ ಕುರಿತು ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಅಕ್ಟೋಬರ್‌ನಲ್ಲಿ ಸೂಪರ್‌ಸ್ಟಾರ್ ರಿವಾಸ್ಕುಲರೈಸೇಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆಪ್ತರಾಗಿದ್ದ ಶಶಿಕಲಾ, ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಬೆಂಗಳೂರಿನ ಜೈಲಿನಿಂದ ಬಿಡುಗಡೆಯಾಗಿದ್ದರು. ಸೆಪ್ಟೆಂಬರ್ 2017 ರಲ್ಲಿ ಶಶಿಕಲಾ ಅವರನ್ನು ಎಐಎಡಿಎಂಕೆ ಮುಖ್ಯಸ್ಥೆಯಿಂದ ಔಪಚಾರಿಕವಾಗಿ ತೆಗೆದುಹಾಕಲಾಯಿತು.