ಬಸ್‌ನಲ್ಲಿ ಜನಿಸಿದ ಹುಡುಗಿಯರಿಗೆ ಜೀವಮಾನ ಪ್ರಯಾಣದ ಪಾಸ್‌ ಉಚಿತ
ಹೈದರಾಬಾದ್:ರಾಜ್ಯ-ಚಾಲಿತ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಜನಿಸಿದ ಇಬ್ಬರು ಹುಡುಗಿಯರಿಗೆ ‘ಹುಟ್ಟು ಹಬ್ಬದ ಉಡುಗೊರೆ’ಯಾಗಿ ಜೀವಮಾನ ಪ್ರಯಾಣದ ಪಾಸ್‌ಗಳನ್ನು ಉಚಿತವಾಗಿ ನೀಡಲಾಗಿದೆ.
ಎಲ್ಲಾ ರೀತಿಯ ಸೇವೆಗಳಿಗೆ ಪಾಸ್‌ಗಳು ಮಾನ್ಯ ವಾಗಿರುತ್ತವೆ ಎಂದು ಟಿಎಸ್‌ಆರ್‌ಟಿಸಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್ ಹೇಳಿದ್ದಾರೆ.
ಒಂದು ಮಗು ನವೆಂಬರ್ 30 ರಂದು ಮಹಬೂಬ್‌ನಗರ ಜಿಲ್ಲೆಯ ಪೆದ್ದಕೋತಪಲ್ಲಿ ಗ್ರಾಮದ ಬಳಿ ಜನಿಸಿದರೆ, ಇನ್ನೊಂದು ಡಿ.7 ರಂದು ಸಿದ್ದಿಪೇಟ್ ಜಿಲ್ಲೆಯ ಬಳಿ ಹೆರಿಗೆ ಯಾಗಿದೆ. ಇಬ್ಬರು ಮಹಿಳೆಯರು ತಮ್ಮ ತಮ್ಮ ಸ್ಥಳಗಳಿಗೆ ಪ್ರಯಾಣಿಸುವಾಗ ಅನಿರೀಕ್ಷಿತ ವಾಗಿ ಹೆರಿಗೆಗೆ ಒಳಗಾದರು. ಸಾರಿಗೆ ಸಂಸ್ಥೆ ಸಿಬ್ಬಂದಿ ಮತ್ತು ಸಹ ಪ್ರಯಾಣಿಕರು ಶಿಶು ಗಳನ್ನು ಹೆರಿಗೆಗೆ ಸಹಾಯ ಮಾಡಿದರು.
ಸಿಬ್ಬಂದಿ ನಂತರ ತಾಯಂದಿರು ಮತ್ತು ನವಜಾತ ಶಿಶುಗಳನ್ನು ಹೆಚ್ಚಿನ ಆರೈಕೆ ಮತ್ತು ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.