  : ನಟಿ ಮಲೈಕಾ ಅರೋರಾ ತಂದೆ ಆತ್ಮಹತ್ಯೆ; ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವು
ಮುಂಬೈ:ಬಾಲಿವುಡ್‌ ನಟಿ ಮಲೈಕಾ ಅರೋರಾ(  ) ಅವರ ತಂದೆ ಇಂದು ಬೆಳ್ಳಂ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈಯ ಬಾಂದ್ರಾದಲ್ಲಿರುವ ಅವರ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಹಾರಿ ಮಲೈಕಾ ಅವರ ತಂದೆ ಅನಿಲ್‌ ಅರೋರಾ( ) ಸಾವನ್ನಪ್ಪಿದ್ದಾರೆ.
#|  |  ,   -               .            .  .../
ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ. ಇನ್ನು ಮಲೈಕಾ ಪತಿ ಅರ್ಬಾಜ್‌ ಖಾನ್‌ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.  ಅನಿಲ್‌ ಅರೋರಾ ಮರ್ಚೆಂಟ್‌ ನೌಕಾದಳದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಮಲೈಕಾಗೆ11 ವರ್ಷ ಇದ್ದಾಗ ಅವರ ಪೋಷಕರು ಪರಸ್ಪರ ವಿಚ್ಛೇದನಾ ಪಡೆದಿದ್ದರು.
  '          .    ,      ' #../EQ2XvMfUfd
ಹಲವು ವರ್ಷಗಳಿಂದ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ಮಲೈಕಾ ಮತ್ತು​ ಅರ್ಜುನ್​ ಕಪೂರ್​ ಪ್ರೇಮ ಸಂಬಂಧ ಕೊನೆಗೊಳಿಸಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇಂಥದ್ದೊಂದು ಶಾಕಿಂಗ್​ ನ್ಯೂಸ್​ ಬಂದಿದೆ. ನಿನ್ನೆಯಷ್ಟೇ ಮಲೈಕಾ ಅವರು, ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬ್ರೇಕಪ್ ಬಗೆಗಿನ ಸುದ್ದಿಗಳಿಗೆ ಪುಷ್ಟಿಕೊಡುವಂತಹ ಪೋಸ್ಟ್‌ವೊಂದನ್ನು ಮಾಡಿದ್ದರು.
 |   -          .       :  
ನಿಮ್ಮ ಸಂತೋಷಕ್ಕಾಗಿ ಸಂತೋಷವಾಗಿರುವ ಮತ್ತು ನಿಮ್ಮ ದುಃಖಕ್ಕಾಗಿ ದುಃಖಿಸುವ ಜನರನ್ನು ಯಾವಾಗಲೂ ಗಮನಿಸಿ. ಅವರು ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನಕ್ಕೆ ಅರ್ಹರು ಎಂದು ಪೋಸ್ಟ್ ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್‌ ಅರ್ಜುನ್‌ ಕಪೂರ್‌‌ ಅವರಿಗೆ ಮಲೈಕಾ ಬರೆದಿರೋದು ಎಂದು ಫ್ಯಾನ್ಸ್‌ ಊಹಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:ಪುತ್ರ ಅರ್ಹಾನ್​ ಖಾನ್ ಜನ್ಮದಿನಕ್ಕೆ ಶುಭ ಕೋರಿದ ಮಲೈಕಾ ಅರೋರಾ