ಒಮಿಕ್ರಾನ್ ಬ್ರೇಕಿಂಗ್: ರಾಜಸ್ಥಾನದಲ್ಲಿ ಒಂಬತ್ತು ರೋಗಿಗಳ ಚೇತರಿಕೆ
ಜೈಪುರ:ಒಮಿಕ್ರಾನ್ ಅವತಾರೀ ವೈರಾಣುವಿನಿಂದ ಪೀಡಿತರಾಗಿದ್ದ ರಾಜಸ್ಥಾನದ ಒಂಬತ್ತು ರೋಗಿಗಳು ಚೇತರಿಸಿಕೊಂಡಿದ್ದಾರೆ.
ಜೈಪುರದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಮಂದಿಯನ್ನು ಡಿಸೆಂಬರ್‌ 9ರಂದು ಪರೀಕ್ಷೆಗೆ ಒಳಪಡಿಸಿದಾಗ ಸೋಂಕಿನಿಂದ ಚೇತರಿಸಿಕೊಂಡಿರುವುದು ದೃಢಪಟ್ಟಿದೆ.
ಎಲ್ಲಾ ಒಂಬತ್ತು ಮಂದಿ ಸಂಪೂರ್ಣ ಆರೋಗ್ಯವಾಗಿದ್ದು, ಯಾವುದೇ ರೋಗ ಲಕ್ಷಣಗಳನ್ನು ಹೊಂದಿಲ್ಲ ಎಂದು ರಾಜಸ್ಥಾನದ ಆರೋಗ್ಯ ಇಲಾಖೆ ಖುದ್ದು ಸ್ಪಷ್ಟಪಡಿಸಿದೆ.
ದಕ್ಷಿಣ ಆಫ್ರಿಕಾದಿಂದ ಮರಳಿದ ಕುಟುಂಬದ 34 ಮಂದಿಯ ಸ್ಯಾಂಪಲ್‌ಗಳನ್ನು ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಒಂಬತ್ತು ಮಂದಿಗೆ ಒಮಿಕ್ರಾನ್‌ ಇರುವುದು ಪತ್ತೆಯಾಗಿತ್ತು. ಮಿಕ್ಕ 25 ಮಂದಿ ನೆಗೆಟಿವ್‌ ಕಂಡುಬಂದಿದ್ದರು.
ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಕೊರೋನಾ ವೈರಸ್‌ನ ನಾವೆಲ್‌ ಅವತಾರಿ ಕಂಡುಬಂದಾಗಿನಿಂದಲೂ ಸಕ್ರಿಯವಾಗಿ ಕೆಲಸ ಮಾಡುತ್ತಲೇ ಬಂದಿದೆ ಎಂದು ರಾಜ್ಯದ ಆರೋಗ್ಯ ಸಚಿವ ಪ್ರಸಾದಿ ಲಾಲ್ ಮೀನಾ ತಿಳಿಸಿದ್ದಾರೆ.