ನ್ಯಾಯಾಲಯದಲ್ಲಿ ಲ್ಯಾಪ್‌ಟಾಪ್ ಸ್ಪೋಟ: ಒಬ್ಬರಿಗೆ ಗಾಯ
ನವದೆಹಲಿ:ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಒಬ್ಬರಿಗೆ ಗಾಯವಾಗಿರುವುದು ವರದಿಯಾಗಿದೆ.
ನ್ಯಾಯಾಲಯದಲ್ಲಿರುವ ಲ್ಯಾಪ್‌ಟಾಪ್ ಸ್ಪೋಟಗೊಂಡಿದೆ ಎಂದು ಪ್ರಾಥ ಮಿಕ ಹಂತದ ತನಿಖೆಯಲ್ಲಿ ತಿಳಿದುಬಂದಿದೆ.
ಸ್ಫೋಟಗೊಂಡಿರುವ ಕುರಿತು ನಮಗೆ ಮಾಹಿತಿ ಬಂದಿತ್ತು ಎಂದು ಅಗ್ನಿಶಾಮಕ ದದ ಸಿಬ್ಬಂದಿ ತಿಳಿಸಿದ್ದಾರೆ. ನ್ಯಾಯಾಲಯದ ವಿಚಾರಣೆ ಮುಂದೂಡಲಾಗಿದೆ. ಓರ್ವ ವ್ಯಕ್ತಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ದೊರೆತಿದೆ.
102ನೇ ಕೋರ್ಟ್‌ ರೂಂನಲ್ಲಿ ಬ್ಯಾಂಗ್‌ ಒಂದರಲ್ಲಿ ಸ್ಫೋಟಕಗಳಿದ್ದವು, ವಿಡಿಯೋದಲ್ಲಿ ನೆಲದ ಮೇಲೆ ಬ್ಯಾಗ್ ಇರುವುದು ಪತ್ತೆ ಯಾಗಿದೆ. ಆರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.