7 ವರ್ಷದ ಮಗುವಿನಲ್ಲಿ ಒಮಿಕ್ರಾನ್‌ ಸೋಂಕು ದೃಢ
ಕೋಲ್ಕತ್ತಾ:ಕೋವಿಡ್‌ ರೂಪಾಂತರಿ ಒಮಿಕ್ರಾನ್‌ ಮಕ್ಕಳಲ್ಲೂ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್‌ ಜಿಲ್ಲೆಯಲ್ಲಿ 7 ವರ್ಷದ ಮಗುವಿನಲ್ಲಿ ಒಮಿಕ್ರಾನ್‌ ಸೋಂಕು ದೃಢಪಟ್ಟಿದೆ.
ಪಶ್ಚಿಮ ಬಂಗಾಳದಲ್ಲಿ ದಾಖಲಾಗಿರುವ ಮೊದಲ ಒಮಿಕ್ರಾನ್‌ ಪ್ರಕರಣ ಇದಾಗಿದ್ದು, ಮಗುವನ್ನು ಐಸೋಲೇಷನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗುವಿನ ಪೋಷಕರ ವರದಿ ನೆಗೆಟಿವ್‌ ಬಂದಿದೆ. ಅಬುಧಾಬಿಯಲ್ಲಿದ್ದ ಮಗು ಮತ್ತು ಪೋಷಕರು ಮೊದಲು ಕೋಲ್ಕತ್ತಾಗೆ ಬಂದು ನಂತರ ಹೈದರಾಬಾದ್ ಮೂಲಕ ಮುರ್ಷಿದಾಬಾದ್‌ಗೆ ಬಂದಿರುವುದಾಗಿ ಇಲಾಖೆಯ ಮಾಹಿತಿ ನೀಡಿದೆ.
