570 ದಿನಗಳಲ್ಲೇ ಕಡಿಮೆ ಕರೋನಾ ಪ್ರಕರಣ ದಾಖಲು
ನವದೆಹಲಿ:ಭಾರತದಲ್ಲಿ ಹೊಸದಾಗಿ 7081 ಮಂದಿಗೆ ಕರೋನಾ ವೈರಸ್ ಸೋಂಕು ದೃಢಪಟ್ಟಿದೆ.
ಒಟ್ಟಾರೆ ಸೋಂಕಿತರ ಸಂಖ್ಯೆ 3,47,40,275ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 83,913ಕ್ಕೆ ತಗ್ಗಿದೆ. ಕಳೆದ 570 ದಿನಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಮೃತರ ಸಂಖ್ಯೆ 4,77,422ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 264 ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆ ಅವಯಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳಲ್ಲಿ 652ರಷ್ಟು ಇಳಿಕೆ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ.
