ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಅಮೆಜಾನ್ ಇಂಡಿಯಾ 1.1 ಲಕ್ಷಕ್ಕೂ ಹೆಚ್ಚು ಋತು ಆಧರಿತ ಉದ್ಯೋಗಾವಕಾಶಗಳ ಸೃಷ್ಟಿ
• ಇದರ ಭಾಗವಾಗಿ ಅಮೆಜಾನ್ ತನ್ನ ಕಾರ್ಯಾಚರಣೆಗಳ ಜಾಲಕ್ಕೆ ಸಾವಿರಾರು ಮಹಿಳಾ ಅಸೋಸಿಯೇಟ್ ಗಳ ನೇಮಕ• 1900 ಪಿಡಬ್ಲ್ಯೂಡಿ (ವಿಕಲ ಚೇತನ ವ್ಯಕ್ತಿಗಳು) ಕೂಡಾ ಸೇರ್ಪಡೆಯಾಗಿದ್ದಾರೆ
ಅಮೆಜಾನ್ ಇಂಡಿಯಾ ಇಂದು ತನ್ನ ಕಾರ್ಯಾಚರಣೆಗಳ ಜಾಲದಾದ್ಯಂತ ಮುಂದೆ ಬರಲಿರುವ ಹಬ್ಬದ ಋತುವಿನಲ್ಲಿ ಹೆಚ್ಚುವ ಗ್ರಾಹಕರ ಬೇಡಿಕೆಯನ್ನು ಪೂರೈಸಲು 110,000ಕ್ಕೂ ಹೆಚ್ಚು ಋತು ಆಧರಿತ ಉದ್ಯೋಗಾವ ಕಾಶಗಳನ್ನು ಸೃಷ್ಟಿಸಿದೆ ಎಂದು ಪ್ರಕಟಿಸಿದೆ. ಈ ಅವಕಾಶಗಳಲ್ಲಿ ಭಾರತದಲ್ಲಿ ನೇರ ಮತ್ತು ಪರೋಕ್ಷ ಉದ್ಯೋಗಗಳು ಭಾರತದ ಪ್ರಮುಖ ನಗರಗಳಾದ ಮುಂಬೈ, ದೆಹಲಿ, ಪುಣೆ, ಬೆಂಗಳೂರು, ಹೈದರಾಬಾದ್, ಕೊಲ್ಕತಾ, ಲಖನೌ ಮತ್ತು ಚೆನ್ನೈ ಇತ್ಯಾದಿ ನಗರಗಳಲ್ಲಿ ಲಭ್ಯವಿರುತ್ತವೆ. ವಿಶೇಷವೆಂದರೆ ಅಮೆಜಾನ್ ಸಾವಿರಾರು ಮಹಿಳಾ ಅಸೋಸಿಯೇಟ್ಸ್ ಮತ್ತು 1900 ಪಿಡಬ್ಲ್ಯೂಡಿ (ವಿಕಲ ಚೇತನ ವ್ಯಕ್ತಿಗಳು)ಗಳನ್ನು ತನ್ನ ಪ್ರಸ್ತುತದ ಜಾಲಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಅಮೆಜಾನ್ ಇಂಡಿಯಾ ಈಗಾಗಲೇ ಈ ಹೊಸ ನಗರಗಳಲ್ಲಿ ಬಹಳಷ್ಟು ಮಂದಿಯ ಸೇರ್ಪಡೆ ಮಾಡಿಕೊಂಡಿದೆ.
ಈ ಪ್ರಕಟಣೆ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ.ಮನ್ಸುಖ್ ಮಾಂಡವೀಯ, “1 ಲಕ್ಷಕ್ಕೂ ಹೆಚ್ಚು ಋತು ಆಧರಿತ ಉದ್ಯೋಗಗಳನ್ನು ಸೃಷ್ಟಿಸುವ ಅಮೆಜಾನ್ ಬದ್ಧತೆಯು ಈ ಹಬ್ಬದ ಋತುವಿನಲ್ಲಿ ದೇಶದ ಉದ್ಯೋಗಪಡೆ ಯನ್ನು ಬೆಂಬಲಿಸುವಲ್ಲಿ ಬಹಳ ಪ್ರಶಂಸನೀಯ ಹೆಜ್ಜೆಯಾಗಿದೆ. ಕಂಪನಿಯು ಗಮನಾರ್ಹ ಸಂಖ್ಯೆಯ ಮಹಿಳೆ ಯರು ಮತ್ತು ವಿಶೇಷ ಚೇತನ ವ್ಯಕ್ತಿಗಳ ನೇಮಕ ಮಾಡಿಕೊಂಡಿರುವುದು ಅಲ್ಲದೆ ಅವರ ಸುರಕ್ಷತೆ, ಆರೋಗ್ಯಸೇವೆ ಮತ್ತು ಶೈಕ್ಷಣಿಕ ಬೆಂಬಲದ ಮೂಲಕ ಅವರಿಗೆ ಬೆಂಬಲ ನೀಡುವುದು ನಿಜಕ್ಕೂ ಉತ್ತೇಜಕರವಾಗಿದೆ. ಎಲ್ಲರನ್ನೂ ಒಳಗೊಳ್ಳುವ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಹಾಗೂ ಉದ್ಯೋಗಿಗಳ ಸೌಖ್ಯವನ್ನು ಎತ್ತಿ ಹಿಡಿಯುವ ಅಮೆಜಾನ್ ಮತ್ತು ಇತರೆ ಕಾರ್ಪೊರೇಟ್ ಗಳಿಂದ ಅಂತಹ ಪ್ರಯತ್ನಗಳನ್ನು ನಾವು ಪ್ರಶಂಸೆ ಮಾಡುತ್ತೇವೆ” ಎಂದರು.
“ನಾವು ಭಾರತದಲ್ಲಿನ ಪ್ರತಿ ಸೇವೆ ಒದಗಿಸಬಲ್ಲ ಪಿನ್ ಕೋಡ್ ಗಳಲ್ಲಿರುವ ಗ್ರಾಹಕರಿಗೆ ವೇಗದ ಮತ್ತು ವಿಶ್ವಾಸಾರ್ಹ ಡೆಲಿವರಿಗಳನ್ನು ಈ ಹಬ್ಬದ ಋತುವಿಗೆ ನೀಡಲು ಬದ್ಧರಾಗಿದ್ದೇವೆ. ಈ ಗುರಿಯನ್ನು ಈಡೇರಿಸಲು ನಾವು 1.1 ಲಕ್ಷ ಹೆಚ್ಚುವರಿ ಜನರನ್ನು ನೇಮಕ ಮಾಡಿಕೊಂಡಿದ್ದು ನಮ್ಮ ಫುಲ್ ಫಿಲ್ ಮೆಂಟ್ ಮತ್ತು ಲಾಜಿಸ್ಟಿಕ್ಸ್ ಜಾಲವನ್ನು ಸದೃಢಗೊಳಿಸಿಕೊಳ್ಳಲು ನೇಮಕ ಮಾಡಿಕೊಂಡಿದ್ದೇವೆ ಮತ್ತು ನಾವು ಹೆಚ್ಚಿನ ಬೇಡಿಕೆಯನ್ನು ತಡೆರಹಿತವಾಗಿ ನಿರ್ವಹಿಸಬಹುದು ಎನ್ನುವುದನ್ನು ದೃಢೀಕರಿಸಿಕೊಳ್ಳುತ್ತೇವೆ. ಈ ಅಸೋಸಿಯೇಟ್ ಗಳ ಹಲವರು ಹಬ್ಬದ ಋತುವಿನ ನಂತರವೂ ಕೆಲಸ ಮಾಡುತ್ತಾರೆ ಮತ್ತು ಕೆಲವರು ಅಮೆಜಾನ್ ನೊಂದಿಗೆ ವರ್ಷದ ನಂತರ ಮತ್ತೆ ಮರಳುತ್ತಾರೆ. ನಮ್ಮ ಗಮನ ಅವರು ನಮ್ಮ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿರಲಿ ಅಥವಾ ಗ್ರಾಹಕರಿಗೆ ಡೆಲಿವರಿ ಗಳನ್ನು ಮಾಡುತ್ತಿರಲಿ ನಮ್ಮ ಎಲ್ಲ ಗ್ರಾಹಕರಿಗೂ ಸುರಕ್ಷತೆ ಮತ್ತು ಸ್ವಾಸ್ಥ್ಯವನ್ನು ದೃಢೀಕರಿಸುವುದಾಗಿದೆ.
ನಮ್ಮ ರಾಷ್ಟ್ರವ್ಯಾಪಿ ಮೂಲಸೌಕರ್ಯವು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಎಂಜಿನ್ ಆಗಿದೆ ಮತ್ತು ನಮ್ಮ ಆದ್ಯತೆಯು ಸುರಕ್ಷಿತ, ಸಮಾನ ಮತ್ತು ಸಬಲೀಕರಣದ ಪರಿಸರವನ್ನು ಸಾಮಾಜಿಕ ಭದ್ರತೆ ಮತ್ತು ಹಣಕಾಸು ಸೌಖ್ಯದ ಪ್ರಯೋಜನಗಳೊಂದಿಗೆ ಸೃಷ್ಟಿಸುವುದಾಗಿದೆ” ಎಂದು ಅಮೆಜಾನ್ ಇಂಡಿಯಾದ ವಿ.ಪಿ. ಆಪರೇಷನ್ಸ್ ಅಭಿನವ್ ಸಿಂಗ್ ಹೇಳಿದರು.
“ಗ್ರಾಹಕರಿಗೆ ವೇಗ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ನೀಡುವ ಅಮೆಜಾನ್ ಧ್ಯೇಯೋದ್ದೇಶದ ಭಾಗವಾಗಿರುವುದು ನನಗೆ ಅದೃಷ್ಟ ಎಂದು ಭಾವಿಸುತ್ತೇನೆ. ಬೆಂಬಲದ ಕೆಲಸದ ವಾತಾವರಣ ಮತ್ತು ಆರೋಗ್ಯ ಹಾಗೂ ಸುರಕ್ಷತೆಗೆ ಆದ್ಯತೆಯಿಂದ ಇದನ್ನು ಕೆಲಸ ಮಾಡಲು ಮಹತ್ತರ ತಾಣವಾಗಿಸಿದೆ. ನಾನು ತನ್ನ ಉದ್ಯೋಗಿಗಳಿಗೆ ಮೌಲ್ಯ ನೀಡುವ ಮತ್ತು ವೈಯಕ್ತಿಕ ಹಾಗೂ ವೃತ್ತಿಪರ ಪ್ರಗತಿಗೆ ಅವಕಾಶಗಳನ್ನು ನೀಡುವ ಕಂಪನಿಗೆ ಕೊಡುಗೆ ನೀಡಲು ನಾನು ಹೆಮ್ಮೆ ಪಡುತ್ತೇನೆ” ಎಂದು ಈ ಋತು ಆಧರಿತ ನೇಮಕದಲ್ಲಿ ಸೇರ್ಪಡೆಯಾದ ಅಸೋಸಿಯೇಟುಗಳಲ್ಲಿ ಒಬ್ಬರಾದ ನೇಹಾ ದೇವಿ ಹೇಳುತ್ತಾರೆ.ಅಸೋಸಿಯೇಟ್ ಗಳ ಸೌಖ್ಯಕ್ಕೆ ಬೆಂಬಲಿಸಲು ಅಮೆಜಾನ್ ಇಂಡಿಯಾ ಇತ್ತೀಚೆಗೆ ಪ್ರಾರಂಭಿಸಲಾದ ಪ್ರಾಜೆಕ್ಟ್ ಆಶ್ರಯ್ ಅಲ್ಲದೆ ಹಲವಾರು ಉಪಕ್ರಮಗಳನ್ನು ಅನುಷ್ಠಾನಗೊಳಿಸಿದೆ, ಅದು ದೆಹಲಿ ಎನ್.ಸಿ.ಆರ್., ಮುಂಬೈ ಮತ್ತು ಬೆಂಗಳೂರುಗಳಲ್ಲಿ ಡೆಲಿವರಿ ಅಸೋಸಿಯೇಟ್ಸ್ ಗೆ ವಿಶೇಷ ವಿಶ್ರಾಂತಿ ತಾಣಗಳನ್ನು ಒದಗಿಸುತ್ತದೆ. ಅಮೆಜಾನ್ ಸುಶ್ರುತದಂತಹ ವಿಶೇಷ ಕಲ್ಯಾಣ ಕಾರ್ಯಕ್ರಮಗಳನ್ನು ಕೂಡಾ ತಂದಿದ್ದು ಅದು ಪ್ರಮುಖ ಪ್ರದೇಶಗಳಲ್ಲಿ ಟ್ರಕ್ ಚಾಲಕರಿಗೆ ಪ್ರಾರಂಭಿಕ ರೋಗಪರೀಕ್ಷೆ, ರೋಗ ನಿರ್ಣಯ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತದೆ ಮತ್ತು ಪ್ರತಿಧಿ ಸ್ಕಾಲರ್ ಶಿಪ್ ಅನ್ನು ಅಸೋಸಿಯೇಟ್ ಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ನೀಡುತ್ತಿರುವುದು ಮುಂತಾದ ಉಪಕ್ರಮಗಳನ್ನು ಹೊಂದಿದೆ.
ಅಮೆಜಾನ್ ಇಂಡಿಯಾ ಸದೃಢವಾದ ಫುಲ್ ಫಿಲ್ ಮೆಂಟ್ ಮತ್ತು ಡೆಲಿವರಿ ಜಾಲ ನಿರ್ಮಿಸಿದ್ದು ಅದು ದೇಶಾ ದ್ಯಂತ 1.4 ಮಿಲಿಯನ್ ಗೂ ಹೆಚ್ಚು ಮಾರಾಟಗಾರರಿಗೆ ಸೇವೆ ಒದಗಿಸುತ್ತಿದೆ.
ಕಂಪನಿಯ ಫುಲ್ ಫಿಲ್ ಮೆಂಟ್ ಸೆಂಟರ್ ಗಳು 15 ರಾಜ್ಯಗಳಲ್ಲಿ ವಿಸ್ತರಿಸಿದ್ದು 43 ಕ್ಯೂಬಿಕ್ ಅಡಿಯಷ್ಟು ಸಂಗ್ರಹ ಸ್ಥಳವನ್ನು ಸೆಲ್ಲರ್ ಇನ್ವೆಂಟರಿಗೆ ಹೊಂದಿದೆ; 19 ರಾಜ್ಯಗಳಲ್ಲಿ ಸಾರ್ಟೇಷನ್ ಕೇಂದ್ರಗಳು ಮತ್ತು 2,000 ಅಮೆಜಾನ್ ಕಾರ್ಯ ನಿರ್ವಹಣೆಯ ಮತ್ತು ಪಾಲುದಾರರ ಡೆಲಿವರಿ ಸ್ಟೇಷನ್ ಗಳನ್ನು ಹೊಂದಿದೆ. ಅಲ್ಲದೆ ಇದು 28,000 `ಐ ಹ್ಯಾವ್ ಸ್ಪೇಸ್’ ಪಾಲುದಾರರು ಮತ್ತು ಸಾವಿರಾರು ಅಮೆಜಾನ್ ಫ್ಲೆಕ್ಸ್ ಪಾಲುದಾರರಿದ್ದು ಅವರು ಈಗಾಗಲೇ ದೇಶಾದ್ಯಂತ ಗ್ರಾಹಕರಲ್ಲಿ ನಗು ಗಳನ್ನು ಪೂರೈಸುತ್ತಿದೆ. ಇದು ಅಮೆಜಾನ್ ನ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಒಗ್ಗೂಡಿಕೆಯನ್ನು ಮತ್ತಷ್ಟು ಸದೃಢಗೊಳಿಸಿದೆ.