ಸ್ಮಾರ್ಟ್ ವೇರಿಯೇಬಲ್ಸ್ ಶ್ರೇಣಿಯ ಮೇಲೆ ಆಕರ್ಷಕ ರಿಯಾಯಿತಿ
ನವದೆಹಲಿ:ಈ ಹೊಸ ವರ್ಷದಲ್ಲಿ ಸ್ವಸ್ಥವಾಗಿರಲು ಮತ್ತು ವೈಯಕ್ತಿಕ ಸ್ವಾಸ್ಥ್ಯದ ಮೇಲೆ ಗಮನಕೇಂದ್ರೀಕರಿಸಲು ಸಂಕಲ್ಪ ಮಾಡಿರುವ ಎಲ್ಲರಿಗೂ ಏನೋ ವಿಶೇಷವಾದುದನ್ನು ಹುವಾವೈ ಕಾದಿರಿಸಿದೆ.
ರಜೆಯ ಋತುವಿನ ಮೂಡ್‌ಗೆ ಇನ್ನಷ್ಟು ಕೌತುಕತೆಯನ್ನು ಸೇರಿಸುತ್ತಾ ಹುವಾವೈ ಕನ್ಸ್ಯಂಮರ್ ಬಿಜಿನೆಸ್ ಗ್ರೂಪ್ ಇಂಡಿಯಾ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ನಲ್ಲಿ, ತನ್ನ ಇತ್ತೀಚಿನ ಸ್ಮಾರ್ಟ್ ವೇರಬಲ್ಸ್ ಮೇಲೆ ಅಸಂಖ್ಯ ಕೌತುಕಮಯವಾದ ವರ್ಷಾಂತ್ಯ ಕೊಡುಗೆಗಳನ್ನು ಲಭ್ಯಗೊಳಿಸಿದೆ. ಗ್ರಾಹಕರು, ಡಿ.೨೧ರಿಂದ ಡಿ.೩೧ ರವರೆಗೆ ಹುವಾವೈ ಬ್ಯಾಂಡ್ ೬, ಹುವಾವೈ ವಾಚ್ ಫಿಟ್, ಮತ್ತು ಹುವಾವೈ ವಾಚ್ ಜಿಟಿ೨ ಪ್ರೊ ಖರೀದಿಯ ಮೇಲೆ ರೂ.೩೦೦೦ದವರೆಗೆ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದು.
ಸಮೂಹದ ಉಪಾಧ್ಯಕ್ಷ ಶ್ರೀ ರಿಶಿ ಕಿಶೋರ್ ಗುಪ್ತ, “ಹುವಾವೈನಲ್ಲಿ ನಾವು ಸದಾ ಕೇವಲ ಗ್ರಾಹಕರ ಅಗತ್ಯ ಗಳನ್ನು ಪೂರೈಸುವುದರ ಮೇಲೆ ಮಾತ್ರವಲ್ಲದೆ ಅವರನ್ನು ಭವಿಷ್ಯತ್ತು ಸಿದ್ಧವಾಗಿರುವಂತೆ ಮಾಡುವ ಅರ್ಥಪೂರ್ಣ ಆವಿಷ್ಕಾರಗಳನ್ನು ಕೊಡುವುದರ ಮೇಲೆ ಗಮನಕೇಂದ್ರೀಕರಿಸುತ್ತಾ ಬಂದಿದ್ದೇವೆ. ನಮ್ಮ ಇತ್ತೀಚಿನ ಸ್ಮಾರ್ಟ್ ವೇರಬಲ್ಸ್ ಶ್ರೇಣಿ, ಅದರಲ್ಲೂ ವಿಶೇಷವಾಗಿ ಹುವಾವೈ ಬ್ಯಾಂಡ್ ೬ಗೆ ಅಸಂಖ್ಯ ಮೆಚ್ಚುಗೆ ಗಳು ಬಂದಿದ್ದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ನಲ್ಲಿ ಇದು ಬೆಸ್ಟ್-ಸೆಲ್ಲರ್ ಆಗಿರುವುದೇ ಇದಕ್ಕೆ ಪುರಾವೆ ಯಾಗಿದೆ. ನಮ್ಮ ವರ್ಷಾಂತ್ಯದ ರಿಯಾಯಿತಿ ಕೊಡುಗೆಗಳೊಂದಿಗೆ ಈ ರಜೆಯ ಋತು ವನ್ನು ಇನ್ನಷ್ಟು ಆನಂದಗೊಳಿಸಿ ನಮ್ಮ ಆವಿಷ್ಕಾರಗಳಿಗೆ ಗ್ರಾಹಕರು ತೋರಿಸುತ್ತಲಿರುವ ಮೆಚ್ಚುಗೆಗೆ ಧನ್ಯವಾದ ಅರ್ಪಿಸ ಬಯಸುತ್ತೇವೆ.” ಎಂದು ಹೇಳಿದರು.
ಕೊಡುಗೆಯ ಭಾಗವಾಗಿ, ಗ್ರಾಹಕರು ವೆಚ್ಚವಿಲ್ಲದ ಇಎಮ್‌ಐ ಮತ್ತು ಆಯ್ದ ದೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳ ಮೇಲೆ ಹೆಚ್ಚುವರಿ ಬ್ಯಾಂಕ್ ರಿಯಾಯಿತಿ ಗಳನ್ನೂ ಪಡೆದುಕೊಳ್ಳಬಹುದು. ಸಕ್ರಿಯ ಹಾಗೂ ಫಿಟ್ ಆದ ಜೀವನಶೈಲಿಗೆ ಪೂರಕವಾಗಿ, ಹುವಾವೈ ಬ್ಯಾಂಡ್ ೬ ಸ್ಮಾರ್ಟ್ವಾಚ್‌ನಂತಹ ಅನುಭವ ನೀಡುವುದಕ್ಕಾಗಿ, ಅದ್ವಿತೀಯ ವಿನ್ಯಾಸ, ಶಕ್ತಿಶಾಲಿಯಾದ ಬ್ಯಾಟರಿ ಬ್ಯಾಕ್‌ಅಪ್, ಮತ್ತು ಆರೋಗ್ಯ ಹಾಗೂ ಸ್ವಾಸ್ಥ್ಯ ನಿಗಾ ವಿಷಯಗಳಲ್ಲಿ ಅದ್ಭುತ ವರ್ಧನೆ ಕಂಡಿದೆ. ಶಕ್ತಿಶಾಲಿಯಾದ ಬ್ಯಾಟರಿ ಹೊಂದಿರುವ ಹುವಾವೈ ಬ್ಯಾಂಡ್ ೬, ಇಡೀ ದಿನದSಠಿಔ೨ನಿಗಾಕ್ಕೆ ಬೆಂಬಲ ಒದಗಿಸಿ ಆರೋಗ್ಯ ವನ್ನು ಹೆಚ್ಚು ಕ್ರಿಯಾಶೀಲವಾಗಿ ನಿರ್ವಹಿಸಲು ನೆರವಾಗುವುದರ ಜೊತೆಗೆ ನಿರಂತರವಾದ, ವಾಸ್ತವ-ಸಮಯ ಮತ್ತು ನಿಖರವಾದ ಹೃದಯದ ಬಡಿತದ ಪ್ರಮಾಣ, ನಿದ್ರೆ ಹಾಗೂ ಒತ್ತಡ ನಿಗಾ ಒದಗಿಸುತ್ತದೆ.
ಹುವಾವೈ ವಾಚ್ ಫಿಟ್–ತಮ್ಮ ಜೀವನಶೈಲಿಯನ್ನು ಹೆಚ್ಚಿಸಿಕೊಂಡು, ಸ್ಟೈಲ್ ಸ್ಟೇಟ್‌ಮೆಂಟ್ ಮಾಡಬೇಕೆಂದು ಬಯಸುವ ಗ್ರಾಹಕರು, ಅಮೆಜಾನ್‌ ನಲ್ಲಿ ರೂ. ೭೪೯೦ದ ಭಾರೀ ರಿಯಾಯಿತಿ ದರದಲ್ಲಿ ಲಭ್ಯವಿರುವ ಇತ್ತೀಚಿನ ಹುವಾವೈ ವಾಚ್ ಫಿಟ್‌ಗೆ ಕೈಹಾಕಬಹುದು.ರಜೆಯ ಮೂಡ್‌ಗೆ ಇನ್ನಷ್ಟು ಆನಂದ ಸೇರಿಸುತ್ತಾ ಗ್ರಾಹಕರು ಹುವಾವೈದ ವರ್ಷಾಂತ್ಯ ಕೊಡುಗೆಗಳ ಭಾಗವಾಗಿ ವೆಚ್ಚವಿಲ್ಲದ ಇಎಮ್‌ಐಗಳನ್ನೂ ಪಡೆದುಕೊಳ್ಳಬಹುದು.ಗ್ರಾಹಕರು ವೆಚ್ಚವಿಲ್ಲದ ಇಎಮ್‌ಐ ಮತ್ತು ಆಯ್ದ ದೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳ ಮೇಲೆ ಹೆಚ್ಚುವರಿ ಬ್ಯಾಂಕ್ ರಿಯಾಯಿತಿಗಳನ್ನೂ ಪಡೆದುಕೊಳ್ಳ ಬಹುದು.
