ಮಹಾರಾಷ್ಟ್ರದಲ್ಲಿ 23 ಹೊಸ ಒಮಿಕ್ರಾನ್ ಪ್ರಕರಣಗಳು ದೃಢ
ಮಹಾರಾಷ್ಟ್ರ:ಮಹಾರಾಷ್ಟ್ರದಲ್ಲಿ 23 ಹೊಸ ಒಮಿಕ್ರಾನ್ ಪ್ರಕರಣಗಳು ದೃಢವಾಗಿದ್ದು, ಸೋಂಕಿ ತರ ಸಂಖ್ಯೆ 88 ಕ್ಕೇರಿದೆ. ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣ ದಾಖಲಿಸಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದ್ದು, ದೇಶದಲ್ಲಿ ಓಮಿಕ್ರಾನ್ ಸಂಖ್ಯೆ 300 ರ ಗಡಿ ದಾಟಿದೆ. ಹೊಸ ಪ್ರಕರಣಗಳಲ್ಲಿ ಪುಣೆಯಲ್ಲಿ 12 ರೋಗಿಗಳು, ಮುಂಬೈನಲ್ಲಿ ಐದು, ಒಸ್ಮಾನಾಬಾದ್ ನಲ್ಲಿ ಇಬ್ಬರು ಮತ್ತು ಥಾಣೆ, ನಾಗ್ಪುರ ಮತ್ತು ಮೀರಾ-ಭಾಯಂದರ್ ನಲ್ಲಿ ತಲಾ ಒಬ್ಬರು ರೋಗಿಗಳು ಪತ್ತೆ ಆಗಿದ್ದಾರೆ.
ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗುರುವಾರ ರಾತ್ರಿ ಸಭೆ ನಡೆಸಲಿದ್ದಾರೆ.