ಪಂಜಾಬ್‌ನಲ್ಲಿ ಎಸ್‌ಎಡಿ – ಬಿಜೆಪಿ ಮೈತ್ರಿ ಸ್ಪರ್ಧೆ: ಗಜೇಂದ್ರ ಶೇಖಾವತ್
ನವದೆಹಲಿ:ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಸುಖದೇವ್ ಸಿಂಗ್ ದಿಂಡ್ಸಾ ಅವರ ಎಸ್‌ಎಡಿ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಸೋಮವಾರ ಹೇಳಿದ್ದಾರೆ.
ಅಮರಿಂದರ್ ಸಿಂಗ್ ಮತ್ತು ರಾಜ್ಯಸಭಾ ಸಂಸದರಾದ ದಿಂಡ್ಸಾ ಇಬ್ಬರೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಉನ್ನತ ನಾಯಕರನ್ನು ಅಮಿತ್ ಶಾ ಅವರ ನಿವಾಸದಲ್ಲಿ ಭೇಟಿಯಾಗಿ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು.
ಬಿಜೆಪಿ, ಅಮರಿಂದರ್ ಸಿಂಗ್, ಹಾಗೂ ದಿಂಡ್ಸಾ ಅವರ ಪಕ್ಷಗಳು ಜಂಟಿಯಾಗಿ ಮುಂಬರುವ ಪಂಜಾಬ್‌ ವಿಧಾನಸಭಾ ಚುನಾವಣೆ ಎದುರಿಸಲಿವೆ ಎಂದು ಸಭೆಯ ನಂತರ ಶೇಖಾವತ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೀಟು ಹಂಚಿಕೆಯನ್ನು ಅಂತಿಮಗೊಳಿಸಲು ಇಬ್ಬರು ನಾಯಕರನ್ನು ಒಳಗೊಂಡ ಜಂಟಿ ಸಮಿತಿಯನ್ನು ರಚಿಸಲಾಗು ವುದು ಎಂದು ಶೇಖಾವತ್ ಹೇಳಿದ್ದಾರೆ.