ಚಂದ್ರಮೌಳಿ ವೆಂಕಟೇಶನ್ ಅವರ ಮೂರನೇ ಪುಸ್ತಕ 
ನಿಮ್ಮನ್ನು ಕೆಲಸದ ಸ್ಥಳದಲ್ಲಿ ಉತ್ತಮ ನಾಯಕ ಮತ್ತು ವ್ಯವಸ್ಥಾಪಕರನ್ನಾಗಿ ಮಾಡುತ್ತದೆ
ನವದೆಹಲಿ:ತಮ್ಮ ಅತ್ಯುತ್ತಮ ಮಾರಾಟದ ಪುಸ್ತಕಗಳಾದ ಕ್ಯಾಟಲಿಸ್ಟ್ ಮತ್ತು ಗೆಟ್ ಬೆಟರ್ ಅಟ್ ಗೆಟ್ಟಿಂಗ್ ಬೆಟರ್‌ಗೆ ವ್ಯಾಪಕವಾಗಿ ಹೆಸರುವಾಸಿಯಾಗಿರುವ, ದಿವಂಗತ ಚಂದ್ರಮೌಳಿ ವೆಂಕಟೇಶನ್ ಅವರ ಮೂರನೇ ಪುಸ್ತಕ  ಎಂಬ ಶೀರ್ಷಿಕೆಯು ಅವರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಗೆತುತ್ತಾಗುವ ಸ್ವಲ್ಪ ಸಮಯದ ಮುನ್ನ ಪೂರ್ಣಗೊಂಡಿತು. ಜನರು ತಮ್ಮ ವೃತ್ತಿಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುವುದಕ್ಕಾಗಿ ಅವರು ಬರೆಯಲು ಬಯಸಿದ ಪುಸ್ತಕಗಳ ದೀರ್ಘ ಸರಣಿಯ ಭಾಗವಾಗಿ ಇದನ್ನು ಉದ್ದೇಶಿಸಲಾಗಿತ್ತು. ಪೆಂಗ್ವಿನ್‌ನಿAದ ಪ್ರಕಟವಾದ ಈ ಹೊಸ ಪುಸ್ತಕದಲ್ಲಿ, ಮೌಳಿ ಅವರು ತಮ್ಮ ಅತ್ಯುತ್ತಮವಾದುದನ್ನು ಮಾಡುತ್ತಾರೆ, ಬೆಳೆಯಲು ಮತ್ತು ಸುಧಾರಿಸಲು ಪ್ರಮುಖ ಕೌಶಲ್ಯವಾದ – ಜನರ ನಿರ್ವಹಣೆ ಯನ್ನು ಪ್ರಮುಖ ಮಾರ್ಗಗಳ ಮೂಲಕ ಎತ್ತಿ ತೋರಿಸುತ್ತಾರೆ.
ಏಷ್ಯನ್ ಪೇಂಟ್ಸ್, ಒನಿಡಾ, ಮೊಂಡೆಲೆಜ್ (ಹಿಂದಿನ ಕ್ಯಾಡ್‌ಬರಿ) ಮತ್ತು ಪಿಡಿಲೈಟ್‌ನಂತಹ ಕಂಪನಿಗಳಲ್ಲಿ ೨೯ ವರ್ಷಗಳ ಸಾಬೀತಾದ ದಾಖಲೆಯನ್ನು ಹೊಂದಿರುವ ಮೌಳಿ ಯವರು ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಈ ಪುಸ್ತಕದಲ್ಲಿ ಒದಗಿಸುವ ಒಳನೋಟಗಳ ಮೂಲಕ ಅವರ ಎಲ್ಲಾ ಅನುಭವವನ್ನು ಜೀವಂತಗೊಳಿಸಿದ್ದಾರೆ.
ತನ್ನ ವೃತ್ತಿಜೀವನದ ಅವಧಿಯಲ್ಲಿ, ಎಲ್ಲಾ ಉದ್ಯಮಗಳಲ್ಲಿ ಜನರ ನಿರ್ವಹಣೆ ಯ ಕೌಶಲ್ಯಗಳು ಸದಾಕಾಲದ ಅವಶ್ಯಕತೆಯಾಗಿದೆ ಮತ್ತು ವ್ಯಕ್ತಿಯನ್ನು ಯಶಸ್ವಿಗೊಳಿಸುವಲ್ಲಿ ಅದರ ಪ್ರಭಾವವು ಹೆಚ್ಚು ಎಂದು ಮೌಳಿ ಗಮನಿಸಿದರು. ಮೇಲಿರುವ ಜನರು ತಾಂತ್ರಿಕವಾಗಿ ಹೆಚ್ಚು ಸಮರ್ಥರು ಅಥವಾ ಹೆಚ್ಚು ಸೃಜನಶೀಲರು ಎಂದು ಅವರು ಕಂಡುಕೊAಡರು, ಆದರೆ ಅವರು ಯಾವಾಗಲೂ ಉತ್ತಮ ನಾಯಕರು ಮತ್ತು ಸಂಘಟಕರಾಗಿದ್ದು- ಜನರ ನಿರ್ವಹಣೆಯಲ್ಲಿ ಅವರನ್ನು ಉತ್ತಮರಾಗಿರುತ್ತಾರೆ. ಒಬ್ಬರ ಜೀವನ ಮತ್ತು ಕೆಲಸದಲ್ಲಿ ಯಶಸ್ಸನ್ನು ಸಾಧಿಸುವ ನಾಲ್ಕು ಪ್ರಮುಖ ಶಕ್ತಿಗಳಲ್ಲಿ ಜನರ ನಿರ್ವಹಣೆಯನ್ನು ಒಂದಾಗಿ ಅವರು ವೀಕ್ಷಿಸಿದರು.
ನಾವು ಸಾಮಾನ್ಯವಾಗಿ ಜನರ ನಿರ್ವಹಣೆಯನ್ನು “ನಾಯಕರು” ಮತ್ತು “ವ್ಯವಸ್ಥಾಪಕರು” ತೆಗೆದುಕೊಳ್ಳುವ ಕ್ರಮಗಳಾಗಿ ನೋಡುತ್ತೇವೆ ಮತ್ತು ನಮ್ಮಲ್ಲಿ ಅನೇಕರು ಒಂದು ದಿನ ನಾವೇ “ನಾಯಕರು” ಆಗಬೇಕೆಂದು ಕನಸು ಕಾಣುತ್ತೇವೆ. ಆದಾಗ್ಯೂ, ಮೌಲಿಯ ಬರವಣಿಗೆಯ ಶೈಲಿಯು, ನಾಯಕತ್ವ ಮತ್ತು ನಿರ್ವಹಣೆಯಂತಹ ಪರಿಕಲ್ಪನೆಗಳನ್ನು ಮತ್ತು ಅವು ನಿಜವಾಗಿ ಹೇಗೆ ಒಂದೇ ಆಯಾಮದವಲ್ಲಎಂದು ಪುನರ್ವಿಮರ್ಶಿಸುವಂತೆ ಮಾಡುತ್ತದೆ.ಈ ಪುಸ್ತಕವು ಮೌಳಿಯವೆರು ನಡೆಸುತ್ತಿದ್ದ “ಲೀಡ್ & ಮ್ಯಾನೇಜ್” ಎಂಬ ಅಭಿವೃದ್ಧಿ ಕಾರ್ಯಕ್ರಮವನ್ನು ಆಧರಿಸಿದೆ. ಪುಸ್ತಕವು ನಮ್ಮಲ್ಲಿರುವ ಕೆಲವು ಮಿಥ್ಯೆಗಳನ್ನು ಹೊರಹಾಕುವ ಗುರಿಯನ್ನು ಹೊಂದಿದೆ – ಉದಾಹರಣೆಗೆ “ನಾಯಕರು” ಮಾತ್ರ ನಾಯಕತ್ವವನ್ನು ತಮ್ಮ ಪಾತ್ರದಲ್ಲಿ ಹೊಂದಿರುವವರು, ಸಿಇಒ ನಂತೆ. ವಾಸ್ತವವಾಗಿ, ನಿಮ್ಮ ಪಾತ್ರವು ಏನೇ ಇರಲಿ, ನಿಮ್ಮ ಕಾರ್ಯಗಳು ಏಕಕಾಲದಲ್ಲಿ ಮುನ್ನಡೆಸುವ ಮತ್ತು ನಿರ್ವಹಿಸುವ ಎರಡೂ ಆಗಿರಬೇಕು ಎಂದು ಅವರು ವಾದಿಸುತ್ತಾರೆ.
ಮೌಲಿ ತನ್ನ ಓದುಗರಿಗಾಗಿ ಪ್ರಾಯೋಗಿಕ ಕಾರ್ಯ ಯೋಜನೆಯನ್ನು ಅಭಿವೃದ್ಧಿಪಡಿಸಿರುವುದು ಟ್ರಾನ್ಸ್ಫಾರ್ಮ್ ಅನ್ನು ವಿಭಿನ್ನಗೊಳಿಸುತ್ತದೆ. ಪುಸ್ತಕದಲ್ಲಿನ ಕೆಲವು ಸರಳ ಅಭ್ಯಾಸಗಳನ್ನು ಜಾಗರೂಕತೆಯಿಂದ ಪೂರ್ಣಗೊಳಿಸುವ ಮೂಲಕ, ಒಬ್ಬರು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುವ ರೀತಿಯಲ್ಲಿ ವಿವಿಧ ನಡವಳಿಕೆ ಮತ್ತು ಕ್ರಿಯೆ ಆಧಾರಿತ ಪರಿವರ್ತನೆಗಳನ್ನು ಚಾಲನೆ ಮಾಡಲು ನೀವು ಕಲಿಯಬಹುದು.
ಪುಸ್ತಕದ ಕುರಿತು, ಇPಐ ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಇಔ ಶ್ರೀ ಆನಂದ್ ಕೃಪಾಲು ಹೇಳುತ್ತಾರೆ, “ಮೌಳಿ ನನಗೆ ವರದಿ ಮಾಡಿಕೊಳ್ಳುವವರಲ್ಲಿ ಒಬ್ಬ ಅತ್ಯುತ್ತಮರು. ಯುವ ವ್ಯವಸ್ಥಾಪಕರಿಗೆ ಕಾರ್ಪೊರೇಟ್ ಏಣಿಯನ್ನು ವೇಗವಾಗಿ ಹತ್ತಲು ಸಹಾಯ ಮಾಡಲಿಕ್ಕಾಗಿ ಈ ಪುಸ್ತಕವು ಜನರ ನಿರ್ವಹಣೆಯ ಒಳನೋಟಗಳನ್ನು ಹಂಚಿಕೊಳ್ಳುತ್ತದೆ. ಪುಸ್ತಕವು ಶಾಶ್ವತವಾದ ಪ್ರಭಾವವನ್ನು ಬೀರುತ್ತದೆ ಮತ್ತು ಅದನ್ನು ಓದುವವರ ವೃತ್ತಿಜೀವನವನ್ನು ಚುರುಕುಗೊಳಿಸುತ್ತದೆ ಎಂದು ನನಗೆ ಖಾತ್ರಿಯಿದೆ. ”
ಃIಖಿSoಒ ನ ಡೀನ್ ಡಾ. ರಂಜನ್ ಬ್ಯಾನರ್ಜಿ ಹೇಳುತ್ತಾರೆ, “ನೀವು ನಿಮ್ಮ ಜನರನ್ನು ಹೇಗೆ ಬೆಳೆಸುತ್ತೀರಿ ಮತ್ತು ಹಾಗೆ ಮಾಡುವ ಮೂಲಕ ಸ್ವತಃ ನೀವೇ ಬೆಳೆಯುತ್ತೀರಿ? ಅಇಔ ಮತ್ತು ಊಖ ಮುಖ್ಯಸ್ಥರಾಗಿರುವ ಮೌಳಿ ಅವರು ಈ ಬಗ್ಗೆ ಮಾತನಾಡಲು ವಿಶಿಷ್ಟವಾದ ಸ್ಥಾನದಲ್ಲಿದ್ದಾರೆ. ಸ್ಪಷ್ಟ, ಸರಳ ಮತ್ತು ಕಾರ್ಯಸಾಧ್ಯವಾದ ಇದು, ಮಹತ್ವಾಕಾಂಕ್ಷಿ ಮತ್ತು ಪ್ರಸ್ತುತ ನಾಯಕರು ಇಬ್ಬರೂ ಓದಲೇಬೇಕಾದದ್ದು.”
ಸೂಕ್ಷ÷್ಮದೃಷ್ಟಿಯುಳ್ಳ ಮತ್ತು ಕ್ರಿಯಾಶೀಲವಾದ ಖಿಖಂಓSಈಔಖಒ ಎಂಬುದು ನಾಯಕತ್ವ ಮತ್ತು ನಿರ್ವಹಣೆಯ ಬಗೆಗಿನ ಸಮಗ್ರ ಪುಸ್ತಕವಾಗಿದ್ದು, ಕಾರ್ಪೊರೇಟ್ ಯಶಸ್ಸಿನ ಅವಕಾಶಗಳನ್ನು ಹೆಚ್ಚಿಸಲು ಹಲವು ಪ್ರಮುಖ ಪರಿಕಲ್ಪನೆಗಳನ್ನು ಒಳಗೊಂಡಿದೆ. ಪುಸ್ತಕ ಮಳಿಗೆಗಳಲ್ಲಿ ಮತ್ತು ಂmಚಿzoಟಿ.iಟಿ ನಲ್ಲಿ ಲಭ್ಯವಿದೆ.