ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂ. ಚಿನ್ನ ಪತ್ತೆ, ಮಹಿಳೆ ಬಂಧನ
ಜೈಪುರ:ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ತನ್ನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದು, ಆಕೆಯನ್ನು ಬಂಧಿಸಲಾಗಿದೆ.
ರಾಜಸ್ತಾನದ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು 618 ಗ್ರಾಂ ಶುದ್ಧ ಚಿನ್ನವನ್ನು ಪತ್ತೆ ಹಚ್ಚಿದ ನಂತರ ಮಹಿಳೆ ಯನ್ನು ಬಂಧಿಸಿದ್ದಾರೆ. ಚಿನ್ನವು ಸುಮಾರು 30.64 ಲಕ್ಷ ರೂ. ಮೌಲ್ಯದ್ದಾ ಗಿದ್ದು, ಏರ್ ಅರೇಬಿಯಾ ವಿಮಾನ ಜಿ9 435 ನಲ್ಲಿ ಶಾರ್ಜಾದಿಂದ ಮಹಿಳೆಯು ಜೈಪುರಕ್ಕೆ ಬಂದಿಳಿದಿದ್ದಳು.
ಅನುಮಾನದ ಆಧಾರದ ಮೇಲೆ ಮಹಿಳೆಯನ್ನು ತಡೆಹಿಡಿಯಲಾಗಿ, ಮಹಿಳೆಯ ಒಳ ಉಡುಪುಗಳಲ್ಲಿ ಎರಡು ಪಾರದರ್ಶಕ ಪಾಲಿಥಿನ್ ಪೌಚ್‌ಗಳಲ್ಲಿ ಪ್ಯಾಕ್ ಮಾಡಲಾದ ಮತ್ತು ಕಪ್ಪು ಕಾರ್ಬನ್ ಟೇಪ್‌ನಿಂದ ಸುತ್ತಿದ ಹಳದಿ ಬಣ್ಣದ ಹರಳಿನ ಪೇಸ್ಟ್ ಪತ್ತೆಯಾಗಿದೆ.
ಚಿನ್ನದ ಪೇಸ್ಟ್‌ನಿಂದ, 99.50 ಶೇಕಡಾ ಶುದ್ಧತೆ ಮತ್ತು 618.40 ಗ್ರಾಂ ತೂಕದ ಚಿನ್ನವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿ ಯೊಬ್ಬರು ಬಹಿರಂಗಪಡಿಸಿದ್ದಾರೆ.