’ತತ್ಕಾಲ್‌ ಟಿಕೆಟ್‌’ ನಿಂದ ರೈಲ್ವೆಗೆ ಬಂಪರ್‌
ನವದೆಹಲಿ:ಭಾರತೀಯ ರೈಲ್ವೇ ಇಲಾಖೆ ತತ್ಕಾಲ್ ಟಿಕೆಟ್ (2020-21ರಲ್ಲಿ) ಶುಲ್ಕದಿಂದ 403 ಕೋಟಿ ರೂ., ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಂದ 119 ಕೋಟಿ ರೂ. ಮತ್ತು ಡೈನಾಮಿಕ್ ದರದಿಂದ 511 ಕೋಟಿ ರೂ. ಲಾಭ ಗಳಿಸಿದೆ.
ಡೈನಾಮಿಕ್ ದರ ವ್ಯವಸ್ಥೆಯು ಬೇಡಿಕೆಗೆ ಅನುಗುಣವಾಗಿ ದರವನ್ನು ನಿಗದಿಪಡಿಸುವ ವ್ಯವಸ್ಥೆ ಯಾಗಿದೆ. ಈ ಮೂರು ವರ್ಗದ ಪ್ರಯಾಣಿಕರು ಸಾಮಾನ್ಯ ವಾಗಿ ಪ್ರೀಮಿಯಂ ಶುಲ್ಕವನ್ನು ಪಾವತಿ ಸುವ ಮೂಲಕ ಈ ಸೇವೆಗಳನ್ನು ಕೊನೆಯ ನಿಮಿಷದವರೆಗೂ ಪಡೆಯಬಹುದಾಗಿದೆ.
ಐಆರ್‌ಸಿಟಿಸಿ 2021 ರಿಂದ 22ರ ಆರ್ಥಿಕ ವರ್ಷದಲ್ಲಿ ಡೈನಾಮಿಕ್ ದರಗಳಿಂದ 240 ಕೋಟಿ, ತತ್ಕಾಲ್ ಟಿಕೆಟ್‌ಗಳಿಂದ 353 ಕೋಟಿ ಮತ್ತು ಪ್ರೀಮಿಯಂ ತತ್ಕಾಲ್ ಶುಲ್ಕದಿಂದ 89 ಕೋಟಿ ರೂಪಾಯಿ ಸಂಗ್ರಹಿಸಿದೆ. ರೈಲು ಕಾರ್ಯಾಚರಣೆಯಲ್ಲಿ ಯಾವುದೇ ನಿರ್ಬಂಧಗಳಿಲ್ಲದಿದ್ದಾಗ 2019-20 ರ ಹಣಕಾಸು ವರ್ಷದಲ್ಲಿ ರೈಲ್ವೇ ‘ಡೈನಾಮಿಕ್’ ದರಗಳಿಂದ ರೂ 1,313 ಕೋಟಿ, ತತ್ಕಾಲ್ ಟಿಕೆಟ್‌ಗಳಿಂದ ರೂ 1,669 ಕೋಟಿ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್‌ಗಳಿಂದ ರೂ 603 ಕೋಟಿ ಗಳಿಸಿದೆ.
ಉತ್ತರ ರೈಲ್ವೇ ಸ್ಕ್ರ್ಯಾಪ್ ಮಾರಾಟದಲ್ಲಿ 402.51 ಕೋಟಿ ರೂಪಾಯಿ ಗಳಿಸಿ ದಾಖಲೆ ಮಾಡಿದೆ. 2021 ರ ಸೆಪ್ಟೆಂಬರ್‌ನಲ್ಲಿ ರೂ.200 ಕೋಟಿಗಳು, ಅಕ್ಟೋಬರ್ 2021 ರಲ್ಲಿ ರೂ.300 ಕೋಟಿಗಳು ಮತ್ತು ಡಿಸೆಂಬರ್ 2021 ರಲ್ಲಿ 400 ಕೋಟಿಗಳ ಸ್ಕ್ರ್ಯಾಪ್ ಮಾರಾಟ ಮಾಡಿ ಉತ್ತರ ರೇಲ್ವೇ ಅಗ್ರಸ್ಥಾನ ದಲ್ಲಿದೆ.