ಕರೋನಾ ಸೋಂಕು ಉಲ್ಬಣ: 37,379 ಹೊಸ ಪ್ರಕರಣ ಪತ್ತೆ
ನವದೆಹಲಿ:ಓಮೈಕ್ರಾನ್ ಭೀತಿ ನಡುವೆಯೇ ದೇಶದಲ್ಲಿ ಕ್ರಮೇಣ ಕೋವಿಡ್-19 ಸೋಂಕು ಉಲ್ಬಣವಾಗು ತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 37,379 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ.
ದೇಶದಲ್ಲಿನ ದೈನಂದಿನ ಸೋಂಕು ಸಕಾರಾತ್ಮಕ ದರ ಕೂಡ ಏರಿಕೆಯಾಗಿದ್ದು, ಪ್ರಸ್ತುತ ದೇಶದಲ್ಲಿನ ಸೋಂಕು ಸಕಾರಾತ್ಮಕ ದರ ಶೇ.3.24ಕ್ಕೆ ಏರಿಕೆ ಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 11,007 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ದೇಶದಲ್ಲಿ ಒಟ್ಟಾರೆ ಗುಣಮುಖರ ಸಂಖ್ಯೆ 3,43,06,414ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಪ್ರಸ್ತುತ 1,71,830 ಸಕ್ರಿಯ ಪ್ರಕರಣಗಳಿವೆ ಎನ್ನಲಾಗಿದೆ.
ಲಸಿಕೆ ಅಭಿಯಾನ ಮುಂದುವರೆದಿದ್ದು, ಈ ವರೆಗೂ ಒಟ್ಟಾರೆ 1,46,70,18,464 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.