ನಿತೀಶ್ ಸಂಪುಟದ ಇಬ್ಬರು ಡಿಸಿಎಂ, ಮೂವರು ಸಚಿವರಿಗೆ ಕರೋನಾ
ಪಾಟ್ನಾ:ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸಂಪುಟದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಮತ್ತು ಮೂವರು ಸಚಿವರಿಗೆ ಬುಧವಾರ ಕರೋನಾ ಸೋಂಕು ತಗುಲಿದೆ.
ಉಪಮುಖ್ಯಮಂತ್ರಿಗಳಾದ ರೇಣು ದೇವಿ ಮತ್ತು ತಾರ್ಕಿಶೋರ್ ಪ್ರಸಾದ್, ಸಚಿವರಾದ ಅಶೋಕ್ ಚೌಧರಿ ಮತ್ತು ವಿಜಯ್ ಚೌಧರಿ ಮತ್ತು ರಾಜ್ಯ ಸಚಿವ ಸುನೀಲ್ ಕುಮಾರ್ ಅವರು ಕರೋನಾ ವೈರಸ್ ಸೋಂಕಿಗೆ ಒಳಗಾಗಿ ದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ 893 ಕ್ಕೆ ಏರಿದೆ. ಗುರುವಾರದಿಂದ 14-ದಿನಗಳ ರಾತ್ರಿ ಕರ್ಫ್ಯೂ ಮತ್ತು ಇತರ ನಿರ್ಬಂಧಗಳನ್ನು ಸರ್ಕಾರ ಆದೇಶಿಸಿದೆ. ರಾಜ್ಯದಲ್ಲಿ ಕೇವಲ ಒಂದು ದೃಢೀಕೃತ ಓಮಿಕ್ರಾನ್ ಪ್ರಕರಣವಿದೆ.ಪಾರ್ಕ್‌ಗಳು, ಜಿಮ್‌ ಗಳು, ಈಜುಕೊಳಗಳು ಮತ್ತು ಮಾಲ್‌ಗಳು ಈ ಅವಧಿಯಲ್ಲಿ ರಾಜ್ಯದಲ್ಲಿ ಮುಚ್ಚಲ್ಪಡುತ್ತವೆ.
ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಎನ್‌ಎಂಸಿಎಚ್) ಎಪ್ಪತ್ತೆರಡು ವೈದ್ಯರು ಮಂಗಳವಾರ ಸೋಂಕಿಗೆ ಒಳಗಾಗಿದ್ದಾರೆ.