ಬಿಜೆಪಿ ಸೇರಿದ ಪಂಜಾಬ್ ಶಾಸಕನಿಗೆ ವೈ+ ಭದ್ರತೆ
ನವದೆಹಲಿ:ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಪಂಜಾಬ್ ಶಾಸಕ ಫತ್ತೇಜಾಂಗ್ ಸಿಂಗ್ ಬಾಜ್ವಾ ಅವರಿಗೆ ಕೇಂದ್ರ ಸರ್ಕಾರ ವೈ+ ವರ್ಗದ ವಿಐಪಿ ಭದ್ರತೆ ಒದಗಿಸಿದೆ.
63 ವರ್ಷದ ಖಾಡಿಯಾನ್ ವಿಧಾನಸಭಾ ಕ್ಷೇತ್ರದ ಶಾಸಕ ಫತೇಜಾಂಗ್ ಸಿಂಗ್ ಬಾಜ್ವಾ ಅವರು ಡಿಸೆಂಬರ್ 28 ರಂದು ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಫತೇಜಾಂಗ್ ಸಿಂಗ್ ಬಾಜ್ವಾ ಅವರಿಗೆ ಪಂಜಾಬ್ ನಲ್ಲಿ ವೈ+ ಭದ್ರತೆ ಒದಗಿಸಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ. ಭದ್ರತಾ ಕಾರ್ಯವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್ ಪಿಎಫ್ ) ನೀಡಲಾಗಿದೆ. ಬಾಜ್ವಾ ಅವರು ರಾಜ್ಯದಲ್ಲಿ ಪ್ರಯಾಣಿಸುವಾಗಲೆಲ್ಲಾ 3-4 ಸಶಸ್ತ್ರ ಕಮಾಂಡೋಗಳ ತಂಡವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ.
ಪಂಜಾಬ್ ರಾಜಕಾರಣಿ ರಾಣಾ ಗುರ್ಮಿತ್ ಸಿಂಗ್ ಸೋಧಿಗೆ ಝಡ್ + ವರ್ಗದ ವಿಐಪಿ ಭದ್ರತೆ ನೀಡಲಾಗಿತ್ತು. ಮಾಜಿ ಶಿರೋಮಣಿ ಅಕಾಲಿ ದಳದ ನಾಯಕ ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮುಖ್ಯಸ್ಥ ಮಂಜಿಂದರ್ ಸಿಂಗ್ ಸಿರ್ಸಾ ಅವರ ಭದ್ರತೆಯನ್ನು ಕೇಂದ್ರವು ವೈ ವರ್ಗದಿಂದ ಝಡ್ ಗೆ ಅಪ್ ಗ್ರೆಡ್ ಮಾಡಿದೆ.