ಡಿಸೆಂಬರ್‌ 26 ರಂದು ’ವೀರ ಬಾಲ ದಿವಸ’: ಪ್ರಧಾನಿ ಘೋಷಣೆ
ನವದೆಹಲಿ:ಇನ್ನು ಮುಂದೆ ಪ್ರತಿ ವರ್ಷದ ಡಿಸೆಂಬರ್‌ 26 ಅನ್ನು “ವೀರ ಬಾಲ ದಿವಸ’ ಎಂದು ಆಚರಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಘೋಷಿಸಿದರು.
ಮೊಘಲ್‌ ಆಡಳಿತಗಾರರಿಂದ ಹತ್ಯೆಗೀಡಾದ ಸಿಖ್‌ ಸಮುದಾಯದ ಹತ್ತನೇ ಧರ್ಮಗುರು ಗುರು ಗೋವಿಂದ ಸಿಂಗ್‌ ಅವರ ನಾಲ್ವರು ಮಕ್ಕಳ ಸ್ಮರಣಾರ್ಥ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ ಟ್ವೀಟ್‌ ಮಾಡಿ, “ನ್ಯಾಯಕ್ಕಾಗಿ ಹುತಾತ್ಮರಾದವರಿಗೆ ಇದು ಅರ್ಹ ಗೌರವ. ಸಿಖ್‌ ಸಮುದಾಯದ ಹತ್ತನೇ ಧರ್ಮಗುರು ಗುರು ಗೋವಿಂದ ಸಿಂಗ್‌ ಅವರ ನಾಲ್ವರು ಪುತ್ರರು ಹುತಾತ್ಮರಾಗಿದ್ದಾರೆ.
ಧರ್ಮಕ್ಕಾಗಿ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಹೀಗಾಗಿ ಪ್ರತಿ ವರ್ಷದ ಡಿ.26ನ್ನು ವೀರ ಬಾಲ ದಿವಸ ಎಂದು ಆಚರಿಸಲಾಗುತ್ತದೆ’ ಎಂದು ಬರೆದಿದ್ದಾರೆ.