 : ಟಿವಿ ಸೀರಿಯಲ್ ನೋಡಿ 13 ವರ್ಷದ ಸಹೋದರಿಯನ್ನೇ ಅತ್ಯಾಚಾರ  ಮಾಡಿದ; ಬಾಲಕಿ ಈಗ ಗರ್ಭಿಣಿ!
ಸೂರತ್:ಸಹೋದರನಿಂದಲೇ ಬಾಲಕಿ ಗರ್ಭಿಣಿಯಾಗಿರುವ ( ) ಆಘಾತಕಾರಿ ಘಟನೆ ಗುಜರಾತ್‌ನ ಸೂರತ್‌ನಲ್ಲಿ (’ ) ನಡೆದಿದೆ. ಟಿವಿ ಧಾರಾವಾಹಿಗಳಲ್ಲಿ ( ) ಆತ್ಮೀಯ ದೃಶ್ಯಗಳನ್ನು ನೋಡಿ ಬಾಲಕ ತನ್ನ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಸೂರತ್‌ನ 13 ವರ್ಷದ ಬಾಲಕಿಯ ಮೇಲೆ ಆಕೆಯ 16 ವರ್ಷದ ಸಹೋದರ ಅತ್ಯಾಚಾರವೆಸಗಿದ್ದರಿಂದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಹೊಟ್ಟೆ ನೋವೆಂದು ಬಾಲಕಿ ಪೋಷಕರಲ್ಲಿ ಹೇಳಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಹೋದರ ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಲು ಕೋರಿಕೊಂಡಿದ್ದ. ನಿರಾಕರಿಸಿದಾಗ ಆಕೆಯ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ. ಪೋಷಕರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.ಸೆಪ್ಟೆಂಬರ್ 30ರಂದು ಬಾಲಕಿಯ ತಾಯಿ ತನ್ನ 16 ವರ್ಷದ ಮಗನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಕೂಲಿ ಕೆಲಸ ಮಾಡುವ ಪೋಷಕರು ಪ್ರತಿದಿನ ಬೆಳಗ್ಗೆ ತಮ್ಮ ಇಬ್ಬರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳುತ್ತಾರೆ. 8ನೇ ತರಗತಿ ವಿದ್ಯಾರ್ಥಿನಿಯಾಗಿರುವ 13 ವರ್ಷದ ಬಾಲಕಿಗೆ ಶಾಲೆಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿತು. ಬಳಿಕ ಪರೀಕ್ಷೆ ನಡೆಸಿದಾಗ ವಿಷಯ ಗೊತ್ತಾಗಿದೆ.
ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇಂಥದ್ದೇ ಇನ್ನೊಂದು ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. 13 ವರ್ಷದ ಬಾಲಕ ತನ್ನ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡಿ ಅನಂತರ ತನ್ನ 9 ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕುಟುಂಬ ಮತ್ತು ನೆರೆ ಹೊರೆಯವರು ಈ ಪ್ರಕರಣವನ್ನು ಮುಚ್ಚಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
 : ಭೀಕರ ರಸ್ತೆ ಅಪಘಾತ; 10 ಜನ ಸ್ಥಳದಲ್ಲೇ ಬಲಿ
ಪ್ರಕರಣಕ್ಕೆ ಸಂಬಂಧಿಸಿ 50 ಜನರ ವಿಚಾರಣೆ ನಡೆಸಲಾಗಿದೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಂತ್ರಸ್ತೆಯ ಸಹೋದರ, ಅವರ ತಾಯಿ ಮತ್ತು ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.