ಚೆಕ್ ಪೋಸ್ಟ್ ಬಳಿ ಕಾರು ಡಿಕ್ಕಿ: ಐಆರ್ ಬಿ ಯೋಧನ ಸಾವು
ಪಣಜಿ:ದಕ್ಷಿಣ ಗೋವಾದಲ್ಲಿ ಪೊಲೀಸ್ ಚೆಕ್ ಪೋಸ್ಟ್ ಬಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಐಆರ್ ಬಿ (ಭಾರತೀಯ ರಿಸರ್ವ್ ಬೆಟಾಲಿಯನ್) ಯೋಧ ಹಾಗೂ ಓರ್ವ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ. ಸೆರಾಲಿಮ್ ಗ್ರಾಮದಲ್ಲಿ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.
ಕಾರಿನ ಚಾಲಕನನ್ನು ಬಂಧಿಸಲಾಗಿದೆ. ನಾಕಾಬಂದಿ ಕರ್ತವ್ಯದಲ್ಲಿ ನಿರತರಾಗಿದ್ದ ಐಆರ್ ಬಿ ಯೋಧ ಹಾಗೂ ಹೋಂ ಗಾರ್ಡ್, ಪೊಲೀಸ್ ಪೇದೆಗೆ ಕಾರು ಡಿಕ್ಕಿ ಹೊಡೆದಿತ್ತು.
ಮೃತ ಪೇದೆಯನ್ನು ಗೋವಾ ಪೊಲೀಸ್ ನ ಶೈಲೇಶ್ ಗಾಂವ್ಕರ್ ಹಾಗೂ ಐಆರ್ ಬಿ ಯ ವಿಶ್ವಾಸ್ ಡೇಕರ್ ಎಂದು ಗುರುತಿಸಲಾಗಿದೆ. ವಿಶ್ವಾಸ್ ಎಂಬಾತ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.