ಇ-ವಿದ್ಯಾ ಯೋಜನೆ ಅಡಿಯಲ್ಲಿ 200 ಟಿವಿ ಚಾನೆಲ್ ಗಳ ಸ್ಥಾಪನೆ
ನವದೆಹಲಿ :ಒಂದರಿಂದ 12ನೇ ತರಗತಿ ಮಕ್ಕಳಿಗೆ ಚಾನಲ್ ಒನ್ ಕ್ಲಾಸ್, ಒನ್ ಟಿವಿ ಜಾರಿಗೆ ತರಲಾ ಗುವುದು. ವಿಶ್ವದರ್ಜೆಯ ಡಿಜಿಟಲ್ ಯುನಿವರ್ಸಿಟಿ ಸ್ಥಾಪನೆ, ಹಳ್ಳಿಗಳ ಶಾಲೆಗಳ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಪ್ರಧಾನಿ ಇ-ವಿದ್ಯಾ ಯೋಜನೆ ಅಡಿಯಲ್ಲಿ 200 ಟಿವಿ ಚಾನೆಲ್ ಗಳ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮಂಗಳವಾರ 2022-23 ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ.
ಕರೋನಾದಿಂದ ಆರೋಗ್ಯ ಮತ್ತು ಆರ್ಥಿಕ ತೊಂದರೆ ಆಗಿದೆ. ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. 2014ರಿಂದ ಜನರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯವಾಗಿದೆ. 2014 ರಿಂದ ನಾಗರಿಕರನ್ನು ಸಶಕ್ತಗೊಳಿಸಲು ಯತ್ನಿಸಿದ್ದೇವೆ. 2022 ರಲ್ಲಿ ಆರ್ಥಿಕ ಬೆಳವಣಿಗೆ 9.2 ರಷ್ಟು ಬೆಳವಣಿಗೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಸತಿ, ಬಡವರ ಕಲ್ಯಾಣಕ್ಕೆ ಸರ್ಕಾರ ಅದ್ಯತೆ ನೀಡಲಿದೆ. 60 ಲಕ್ಷ ಉದ್ಯೋಗ ಸೃಷ್ಠಿಯಾಗಿದೆ. ಆಂತರಿಕಾಗಿ 30 ಲಕ್ಷ ಹೆಚ್ಚುವರಿ ಉದ್ಯೋಗ ನೀಡಲಾಗುವುದು. ಕಲ್ಲಿದ್ದಲು ಕ್ಷೇತ್ರದಲ್ಲಿ 100 ವರ್ಷಗಳ ಅಭಿವೃದ್ಧಿ ಮಾಡುತ್ತೇವೆ ಎಂದರು.