ಗುರುಗ್ರಾಮದ ಮೊದಲ ಮಹಿಳಾ ಕಮೀಷನರ್​​​ ಅಧಿಕಾರ ಸ್ವೀಕಾರ
ಗುರುಗ್ರಾಮ:ಹರಿಯಾಣ ಕೇಡರ್(1994ರ ಬ್ಯಾಚ್​​) ​ನ ಐಪಿಎಸ್​ ಅಧಿಕಾರಿ ಕಲಾ ರಾಮಚಂದ್ರನ್​​ ಇಂದಿನಿಂದ ನಗರ ಪೊಲೀಸ್​ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಗುರುಗ್ರಾಮವು ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ಕಮೀಷನರ್​​​ನ್ನು ಹೊಂದಲಿದೆ.
ಗುರುಗ್ರಾಮ್​ ಬಳಿಯ ಭೋಂಡ್ಸಿಯಲ್ಲಿರುವ ಪೊಲೀಸ್​ ತರಬೇತಿ ಮತ್ತು ಸಂಶೋಧನಾ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ನಿರ್ಗಮನ ಪೊಲೀಸ್​ ಕಮೀಷನರ್​​ ಕೆ.ಕೆ.ರಾವ್​ರಿಂದ ಕಲಾ ರಾಮಚಂದ್ರನ್​ ಅಧಿಕಾರ ಸ್ವೀಕರಿಸಲಿದ್ದಾರೆ.
ಐಪಿಎಸ್​ ಅಧಿಕಾರಿ ಕಲಾ ರಾಮಚಂದ್ರನ್​​ ಮಾತನಾಡಿ, ಟ್ರಾಫಿಕ್​ ನಿರ್ವಹಣೆ, ನಗರದ ನಿವಾಸಿಗಳಿಗೆ ಸುರಕ್ಷತೆ ಹಾಗೂ ಭದ್ರತೆ ಒದಗಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಇಡೀ ನಗರದ ನಿವಾಸಿಗಳಿಗೆ ಸುರಕ್ಷತಾ ಭಾವ ಉಂಟಾಗುವಂತೆ ನಾನು ಕೆಲಸ ಮಾಡುತ್ತೇನೆ ಎಂದು ಕಲಾ ರಾಮಚಂದ್ರನ್​ ವಿಶ್ವಾಸ ವ್ಯಕ್ತಪಡಿಸಿದರು.
ಗುರುಗ್ರಾಮದಲ್ಲಿ ಟ್ರಾಫಿಕ್​ ಮ್ಯಾನೇಜ್​ಮೆಂಟ್​ ಹಾಗೂ ರಸ್ತೆಯ ಸುರಕ್ಷತೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇವೆರೆಡರ ಕಡೆಗೆ ಹೆಚ್ಚು ಗಮನ ನೀಡಲು ನಿರ್ಧರಿಸಿದ್ದೇನೆ. ನಗರದ ಎಲ್ಲಾ ನಿವಾಸಿಗಳಿಗೆ ರಸ್ತೆ ಹಾಗೂ ಸೈಬರ್​ ಸುರಕ್ಷತೆಯನ್ನು ಒದಗಿಸಲು ಯತ್ನಿಸುತ್ತೇನೆ ಎಂದು ಹೇಳಿದರು.