ಕಿಯಾ ಇಂಡಿಯಾ: ಬೆಲೆ ರೂ. 8.99 ಲಕ್ಷದಿಂದ ಆರಂಭ
ನವದೆಹಲಿ:ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಾರು ತಯಾರಕ ಸಂಸ್ಥೆ ಕಿಯಾ ಇಂಡಿಯಾ ತನ್ನ ನಾಲ್ಕನೇ ಮತ್ತು ಇತ್ತೀಚಿನ ‘ಮೇಡ್ ಫಾರ್ ಇಂಡಿಯಾ’ ಕಾರು ಕ್ಯಾಕೆನ್ಸ್ ಬಿಡುಗಡೆಯನ್ನು ಘೋಷಿಸಿದೆ.
ಕ್ಯಾಕೆನ್ಸ್ ಪ್ರೀಮಿಯಂ ಸ್ಮಾರ್ಟ್ ಸ್ಟ್ರೀಮ್ ೧.೫ ಪೆಟ್ರೋಲ್ ೬ ಎಂಟಿ ವೇರಿಯಂಟ್‌ಗೆ ಸ್ಫರ್ಧಾತ್ಮಕವಾಗಿ ರೂ. ೮.೯೯ ಲಕ್ಷ (ಎಕ್ಸ್ ಶೋರೂಂ, ಪ್ಯಾನ್ ಇಂಡಿಯಾ) ದರ ನಿಗದಿ ಮಾಡಲಾಗಿದೆ. ಕ್ಯಾಕೆನ್ಸ್ ಅನ್ನು ೧೯ ಶ್ರೇಣಿಯಲ್ಲಿ ಒದಗಿಸಲಾಗುತ್ತಿದ್ದು, ಬೆಲೆ ಶ್ರೇಣಿಯು ರೂ. ೮.೯೯ ಲಕ್ಷದಿಂದ ೧೬.೯೯ ಲಕ್ಷಗಳವರೆಗೆ (ಎಕ್ಸ್ ಶೋರೂಂ, ಪ್ಯಾನ್ ಇಂಡಿಯಾ) ಬೆಲೆ ಇದೆ. ಅತ್ಯಂ ನಿರೀಕ್ಷಿತ ಮಾಡೆಲ್ ೫ ಟ್ರಿಮ್ಗಳು, ೩ ಇಂಜಿನ್ ಮತ್ತು ೩ ಟ್ರಾನ್ಸ್ಮಿಶನ್ ಆಯ್ಕೆಗಳಲ್ಲಿ ಲಭ್ಯವಿದೆ.
ಹಲವು ವೈಶಿಷ್ಟ್ಯಗಳು ಮತ್ತು ಸುರಕ್ಷತೆಯ ಮೇಲೆ ಹೆಚ್ಚಿನ ಗಮನ ಹರಿಸಿರುವ ಕಿಯಾ ಕೇರೆನ್ಸ್ ದೇಶದಲ್ಲೇ ಅತ್ಯಂತ ಸುರಕ್ಷಿತ ಕಾರು ಆಗಿರಲಿದೆ ಮತ್ತು ಆಧುನಿಕ ಭಾರತೀಯ ಕುಟುಂಬಗಳಿಗೆ ಉತ್ತಮ ಮೌಲ್ಯವನ್ನು ಒದಗಿಸುತ್ತದೆ. ಕುಟುಂಬ ತಿರುಗಾಡುವುದಕ್ಕೆ ಅನು ಕೂಲವನ್ನು ಒದಗಿಸುವುದರ ಜೊತೆಗೆ ಎಸ್ಯುವಿಯ ಕ್ರೀಡಾ ಅಂಶವನ್ನೂ ಇದು ಒಳಗೊಂಡಿದೆ. ಈವರೆಗೆ, ಕಂಪನಿ ೧೯,೦೮೯ ಬುಕಿಂಗ್ಗ ಳನ್ನು ಪಡೆದಿದೆ. ಬುಕಿಂಗ್ ೨೦೨೨ ಜನವರಿ ೧೪ ರಂದು ಆರಂಭವಾಗಿತ್ತು.
ಕಿಯಾ ಕ್ಯಾಕೆನ್ಸ್ ಐದು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ. ಅವುಗಳೆಂದರೆ, ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಲಕ್ಷುರಿ ಮತ್ತು ಲಕ್ಷುರಿ ಪ್ಲಸ್. ಪ್ರೀಮಿಯಂ ಇಂದ ಲಕ್ಷುರಿ ಟ್ರಿಮ್ಗಳಲ್ಲಿ ವಾಹನವು ಏಳು ಸೀಟ್ಗಳನ್ನು ಹೊಂದಿರುತ್ತದೆ ಮತ್ತು ಲಕ್ಷುರಿ ಪ್ಲಸ್ ಟ್ರಿಮ್ನಲ್ಲಿ ೬ ಹಾಗೂ ೭ ಸೀಟರ್ ಕಾನ್ಫಿಗರೇಶನ್‌ ಗಳೆರಡೂ ಇವೆ.
ಸುಸ್ಥಿರವಾದ ೧೦ ಹೈ ಸುರಕ್ಷತೆ ಪ್ಯಾಕೇಜ್ ಒಳಗೊಂಡಿದ್ದು, ಇದರಲ್ಲಿ ೬ ರ‍್ಬ್ಯಾಗ್ಗಳು, ಡಿಬಿಸಿ, ವಿಎಸ್ಎಂ, ಎಚ್ಎಸಿ, ಇಎಸ್ಸಿ ಮತ್ತು ಆಲ್ ವೀಲ್ ಡಿಸ್ಕ್ ಬ್ರೇಕ್ಗಳಿವೆ. ಇವೆಲ್ಲವೂ ಎಲ್ಲ ಐದು ಟ್ರಿಮ್ ಲೆವೆಲ್ಗಳಲ್ಲೂ ಲಭ್ಯವಿವೆ. ಇದರಿಂದ ಕಿಯಾ ಕ್ಯಾಕೆನ್ಸ್ ಕುಟುಂಬಕ್ಕೆ ಅತ್ಯಂತ ಸುರಕ್ಷಿತವಾಗಿರಲಿವೆ. ಕಿಯಾ ಕ್ಯಾಕೆನ್ಸ್ನಲ್ಲಿ ಮೂರು ಇಂಜಿನ್ ಆಯ್ಕೆಗಳಿರಲಿವೆ. ಸ್ಮರ‍್ಟ್ಸ್ಟ್ರೀಮ್ ೧.೫ ಪೆಟ್ರೋಲ್, ಸ್ಮರ‍್ಟ್ಸ್ಟ್ರೀಮ್ ೧.೪ ಟಿ ಜಿಡಿಐ ಪೆಟ್ರೋಲ್ ಮತ್ತು ೧.೫ ಸಿರ‍್ಡಿಐ ವಿಜಿಟಿ ಡೀಸೆಲ್ ಇದ್ದು, ಇದರಲ್ಲಿ ಮೂರು ಟ್ರಾನ್ಸ್ಮಿಶನ್ಗ ಳಿವೆ. ಅವುಗಳೆಂದರೆ, ೬ಎಂಟಿ, ೭ಡಿಸಿಟಿ ಅಥವಾ ೬ಎಟಿ.
ನಿರ್ವಹಣೆ ವೆಚ್ಚ ಕಡಿಮೆಆರ‍್ಷಕ ಬೆಲೆಯ ಜೊತೆಗೆ, ಪ್ರತಿ ಕಿಲೋಮೀಟರಿಗೆ ೩೭ ಪೈಸೆಯಷ್ಟು ಅತಿ ಕಡಿಮೆ ನರ‍್ವಹಣೆಯನ್ನೂ ಕೇರನ್ಸ್ ಪ್ರಸ್ತಾಪಿಸುತ್ತಿದೆ. ವಾಹನ ರ‍್ವೀಸ್ ಮಾಡುವ ಪ್ರಕ್ರಿಯೆಯನ್ನು ಕಂಪನಿಯು ವೈಯಕ್ತಿಕಗೊಳಿಸುತ್ತಿದೆ ಮತ್ತು ಸ್ರ‍್ಧಾತ್ಮಕ ನರ‍್ವಹಣೆ ವೆಚ್ಚವನ್ನು ಎಲ್ಲ ಮಾಡೆಲ್ಗಳಲ್ಲಿ ಒದಗಿಸುತ್ತಿದೆ.
ಈ ಸಂರ‍್ಭದಲ್ಲಿ ಮಾತನಾಡಿ, ಕಿಯಾ ಇಂಡಿಯಾದ ವ್ಯವಸ್ಥಾಪಕ ನರ‍್ದೇಶಕ ಮತ್ತು ಸಿಇಒ ತಾಯೆ ಜಿನ್ ಪರ‍್ಕ್ “ಆರಂಭದಿಂದಲೂ, ಭಾರತೀಯ ಗ್ರಾಹಕರ ಡ್ರೈವಿಂಗ್ ಅನುಭವವನ್ನು ಉತ್ತಮವಾಗಿಸುವುದರ ಮೇಲೆ ನಾವು ಗಮನ ಹರಿಸಿದ್ದೇವೆ. ಕ್ಯಾಕೆನ್ಸ್ ಈ ಶ್ರೇಣಿ ಯಲ್ಲೇ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ, ಅಪರ‍್ವ ವಿನ್ಯಾಸ ಮತ್ತು ಪ್ರಾಯೋಗಿಕತೆ ಇದೆ ಮತ್ತು ಆರ‍್ಷಕ ಬೆಲೆಯಲ್ಲಿ ಅಪಾರ ಆಯ್ಕೆ ಗಳನ್ನು ಇದು ಹೊಂದಿದೆ. ನಮ್ಮ ವೈವಿಧ್ಯಮಯ ಗ್ರಾಹಕರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಈ ಬೆಲೆ ನಿಗದಿಯು ಒದಗಿಸುತ್ತದೆ. ಈ ಬೇಡಿಕೆ ಹೆಚ್ಚಳಕ್ಕೆ ಪೂರಕವಾಗಿ ನಾವು ನಮ್ಮ ಉತ್ಪಾದಕತೆಯನ್ನು ಹೆಚ್ಚಿಸಲಿದ್ದೇವೆ.”
ಅವರು ಮುಂದುವರಿದು ಹೇಳಿದ್ದೇನೆಂದರೆ, “ಕ್ಯಾಕೆನ್ಸ್ನ ಮಾಲೀಕತ್ವದ ಅದ್ಭುತ ಅನುಭವವನ್ನು ನಮ್ಮ ಗ್ರಾಹಕರು ಹೊಂದುತ್ತಾರೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ. ಇದರ ನರ‍್ವಹಣೆ ವೆಚ್ಚವು ಪ್ರತಿ ಕಿ.ಮೀಗೆ ಕೇವಲ ೩೭ ರಷ್ಟು ಕಡಿಮೆ ಇದೆ. ಇದರ ಮೌಲ್ಯದಿಂದ ಆಧುನಿಕ ಭಾರತೀಯ ಕುಟುಂಬಗಳಿಗೆ ಆದ್ಯತೆಯ ವಾಹನವಾಗಿರಲಿದೆ.”